Wednesday, January 8, 2025

ಸತ್ಯ | ನ್ಯಾಯ |ಧರ್ಮ

ಮಟ್ಟಂಚೇರಿ ಅರಮನೆಯ ಮುರಾಲ್‌ ಚಿತ್ರಕಲೆ

ಕೇರಳದ ಕೊಚ್ಚಿಯ ಮಟ್ಟಂಚೇರಿ ಬೀದಿಗಳಲ್ಲಿ ಅಲೆದಾಡುವುದು ಎಂದರೆ ಚರಿತ್ರೆಯ ಕಡೆಗೆ ಚಲಿಸಿದಂತೆ. ವಸಾಹತು ಕಾಲದ ಕಟ್ಟಡಗಳು, ರಸ್ತೆಗಳು, ಅಂಗಡಿಗಳು, ಎಲ್ಲವೂ ಒಂದೊಂದು ಕತೆಯನ್ನು ಹೇಳುತ್ತವೆ. ವರ್ತಮಾನವನ್ನು ಬಿಟ್ಟು ಆಗಿಹೋಗಿರುವ ಕಾಲದ ಕಡೆಗೆ ಹಿಂತುರಿಗಿ ನೋಡುವಂತೆ ಮಾಡುತ್ತವೆ.

ಕೊಚ್ಚಿಯ ರಾಜರ ರಾಜಧಾನಿಯಾಗಿದ್ದ ಈ ಪಟ್ಟಣದಲ್ಲಿ ಡಚ್ಚರ ಅರಮನೆಯೊಂದಿದೆ. ಇದನ್ನು 1557 ರಲ್ಲಿ ಪೋರ್ಷುಗೀಸರು ನಿರ್ಮಿಸಿದರು. ಡಚ್ಚರು ಇದಕ್ಕೆ ಪುನರುಜ್ಜೀವ ನೀಡಿದರು. ಸದ್ಯ ಸಂರಕ್ಷಿಸಲ್ಪಟ್ಟ ಕಟ್ಟೋಣವಾಗಿರುವ ಈ 500 ವರ್ಷಗಳ ಹಳೆಯ ಅರಮನೆಯಲ್ಲಿ, ಅರಮನೆಯಷ್ಟೇ ಹಳೆಯದಾದ ಮುರಾಲ್‌ ಪೈಂಟಿಂಗ್‌ಗಳಿವೆ. ಈ ಅರಮನೆ ಈ ಚಿತ್ರಕಲೆಗಾಗಿಯೇ ಹೆಸರುವಾಸಿ.

ರಾಜ ವೀರ ಕೇರಳ ವರ್ಮನನ್ನು ಮೆಚ್ಚಿಸಲು ಈ ಅರಮನೆಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಪೋರ್ಚುಗೀಸರು ಸುತ್ತಮುತ್ತಲಿನ ಶಿವ ದೇವಾಲಯವನ್ನು ಲೂಟಿ ಮಾಡಿದಾಗ ರಾಜ ಕೋಪಗೊಂಡಿದ್ದ.  ಪೋರ್ಚುಗೀಸರು ರಾಜನಿಗೆ ಈ ಅರಮನೆಯನ್ನು ಉಡುಗೊರೆಯಾಗಿ ನೀಡಿದ ನಂತರ, ಇದು ಕೊಚ್ಚಿನ್ ರಾಜಮನೆತನದ ನಿವಾಸವಾಯಿತು.

ಡಚ್ಚರು ಕೊಚ್ಚಿಯನ್ನು ಆಳುತ್ತಿದ್ದಾಗ ನವೀಕರಿಸಿದ ಕಟ್ಟಡಕ್ಕೆ ಡಚ್ ಅರಮನೆ ಎಂಬ ಹೆಸರು ಬಂದಿತು. ಆಗಲೂ ಅರಮನೆಯು ಮಹಾಕಾವ್ಯ ರಾಮಾಯಣದ ಕಥೆಗಳನ್ನು ಹೇಳುವ ಭಿತ್ತಿಚಿತ್ರಗಳನ್ನು ಸಂರಕ್ಷಿಸಲಾಗಿದೆ. ಅರಮನೆಯಲ್ಲಿನ ಎಲ್ಲಾ ಪೈಂಟಿಂಗ್‌ಗಳು ಬೇರೆ ಬೇರೆ ಕಾಲದಲ್ಲಿ ರಚಿಸಲ್ಪಟ್ಟಿವೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಪಟ್ಟಾಭಿಷೇಕ ಸಭಾಂಗಣದಲ್ಲಿ ಇರುವ ರಾಮಾಯಣದ ಪೈಂಟಿಂಗ್ ಇಡೀ ಕೊಟ್ಟಾರದಲ್ಲಿರುವ ಅತ್ಯಂತ ಸುಂದರ ಕಲಾಕೃತಿಗಳಲ್ಲಿ ಒಂದು.  

ಪ್ರತಿಯೊಂದು ಕಥೆ ಮತ್ತು ಪಾತ್ರವನ್ನು ಮೊದಲ ಬಾರಿಗೆ ನೋಡಿದಾಗ ಅದನ್ನು ಅರ್ಥೈಸಲು ಕಷ್ಟವಾಗಿದ್ದರೂ, ಈ ಕೃತಿಗಳು ‘ಮಣಿಮಾಲಾ’ ಎಂಬ ಒಗಟಿನ ಮಾದರಿಯನ್ನು ಅನುಸರಿಸುತ್ತವೆ. ಮಗುವಿಗೆ ಜನ್ಮ ನೀಡುವ ಮಹಿಳೆಯನ್ನು ಚಿತ್ರಿಸಿದ ಏಕೈಕ ಮುರಾಲ್ ಕೃತಿಗಳಲ್ಲಿ ಇದೂ ಒಂದು. ಇದರಲ್ಲಿ ರಾಮ ಮತ್ತು ಅವನ ಸಹೋದರರ ಜನನವನ್ನು ಚಿತ್ರಿಸಲಾಗಿದೆ.  

ಅಯೋಧ್ಯೆಯ ರಾಜ ರಾಮನು ಜನಕನನ್ನು ಭೇಟಿಯಾಗಿ ಸೀತೆಯನ್ನು ಮದುವೆಯಾಗುವುದು, ರಾಜ್ಯವನ್ನು ತೊರೆದು ವನವಾಸಕ್ಕೆ ಹೋಗುವುದು, ಶೂರ್ಪನಖಿಯ ಭವ್ಯ ಸೌಂದರ್ಯ, ರಾವಣ ಸೀತೆಯನ್ನು ಅಪಹರಿಸುವುದು ಮತ್ತು ಯುದ್ಧದ ಸಂಪೂರ್ಣ ಕಥನವನ್ನು ಪಟ್ಟಾಭಿಷೇಕ ಸಭಾಂಗಣದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಈ ಭಿತ್ತಿಚಿತ್ರಗಳನ್ನು ಯಾರು ಚಿತ್ರಿಸಿದ್ದಾರೆ ಅಥವಾ ಅದನ್ನು ಯಾವಾಗ ಮಾಡಲಾಗಿದೆ ಎಂದು ಯಾರಿಗೂ ತಿಳಿದಿಲ್ಲ. 

ಈ ಪಾತ್ರಗಳನ್ನು ಪೂರ್ವ ನಿರ್ಧಾರಿತ ಲೆಕ್ಕಾಚಾರಗಳಲ್ಲಿ ರಚಿಸಲಾಗಿದೆ. ಮಾರೀಚ, ಶೂರ್ಪನಖಿಯಂತಹ ರಾಕ್ಷಸ ಪಾತ್ರಗಳನ್ನೂ ಭವ್ಯವಾಗಿ ಚಿತ್ರಿಸಲಾಗಿದೆ. 

ಈ ಮುರಾಲ್‌ ಪೈಟಿಂಗ್‌ಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಲಾಗಿದೆ.  ಹಸಿರು ಬಣ್ಣವು ಇಂಡಿಗೋ ಸಸ್ಯದಿಂದ, ಕಪ್ಪು ಬಣ್ಣವನ್ನು ಎಳ್ಳನ್ನು ಸುಟ್ಟು ತಯಾರಿಸಲಾಗಿದೆ. ಕೆಂಪು ಮತ್ತು ಹಳದಿ ಬಣ್ಣಗಳು ವಿವಿಧ ರೀತಿಯ ಕಲ್ಲುಗಳಿಂದ ತಯಾರಿಸಲಾಗಿದೆ. ಈ ಕಲ್ಲುಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನದಿಯ ಸುತ್ತಲಿನಿಂದ ಸಂಗ್ರಹಿಸಲಾಗಿದೆ ಎಂದು ನಂಬಲಾಗಿದೆ.  

ಈ ಮ್ಯೂರಲ್ ಪೇಂಟಿಂಗ್‌ಗಳನ್ನು ‘ತ್ರಿಗುಣ’ ತತ್ವವನ್ನು ರಚಿಸಲಾಗಿದೆ: ರಜೋ ಗುಣ, ತಮೋ ಗುಣ ಮತ್ತು ಸಾತ್ವಿಕ ಗುಣ. ಪ್ರತಿಯೊಂದು ಬಣ್ಣವು ನಿರ್ದಿಷ್ಟ ಗುಣವನ್ನು ಪ್ರತಿನಿಧಿಸುತ್ತದೆ. ರಜೋ ಗುಣವನ್ನು ಹೊಂದಿರುವ ಪಾತ್ರಗಳಿಗೆ ಕೆಂಪು ಬಣ್ಣವನ್ನು ನೀಡಲಾಗುತ್ತದೆ, ಕೆಲವೊಮ್ಮೆ ಹಳದಿ ಮಿಶ್ರಿತ ಕೆಂಪು. ವೈಷ್ಣವ ಅಥವಾ ಸಾತ್ವಿಕ ಪಾತ್ರಗಳಿಗೆ ಹಸಿರು ಬಣ್ಣವನ್ನು ನೀಡಲಾಗಿದೆ. ತಮೋ ಗುಣ ಹೊಂದಿರುವ ಪಾತ್ರಗಳ ಶಾಂತ ಪಾತ್ರಗಳನ್ನು ಪ್ರತಿನಿಧಿಸಲು ಬಿಳಿ ಬಣ್ಣವನ್ನು ಬಳಸಲಾಗಿದೆ.

ಕೃಷ್ಣಲೀಲೆ, ತ್ರಿಪುಣಿತುರ ಅಪ್ಪನ್ (ವಿಷ್ಣು), ಶಿವನ ಕುಟುಂಬ, ಕೂಡಲ್ಮಾಣಿಕ್ಯ ಸ್ವಾಮಿ, ಕಾಳಿಂದಿ ಮರ್ದನ ಚಿತ್ರಗಳನ್ನು ಈ ಅರಮನೆಯಲ್ಲಿ ಕಾಣಬಹುದು.  ಮದನ ರಾಜ ಗೋಪಾಲನ್, ಪಾರ್ವತಿ ಚಮಯುಮ್, ಶಿವನ್ ಮೋಹಿನಿಯೊಂದಿಗೆ ಆಟವಾಡುವುದನ್ನು ನೋಡುತ್ತಿರುವ ಪಾರ್ವತಿಯ ಪೈಂಟಿಂಗ್‌ಗಳನ್ನು ಇಲ್ಲಿ ನೋಡಬಹುದು.  

Related Articles

ಇತ್ತೀಚಿನ ಸುದ್ದಿಗಳು

You cannot copy content of this page