Tuesday, January 28, 2025

ಸತ್ಯ | ನ್ಯಾಯ |ಧರ್ಮ

ಲಂಚ ಪಡೆದು ಲೋಕಾಯುಕ್ತಕ್ಕೆ ಸಿಕ್ಕಿ ಜಿಲ್ಲೆಯ ಮರ್ಯಾದೆ ಕಳೆಯಬೇಡಿ – ಸಂಸದ ಶ್ರೇಯಸ್ ಪಟೇಲ್

ಹಾಸನ: ಯಾವುದೋ ಕೆಲಸ ಮಾಡುವ ವೇಳೆ ಲಂಚ ಪಡೆಯುವ ಸಮಯದಲ್ಲಿ ಅಧಿಕಾರಿಗಳು ಲೋಕಾಯುಕ್ತ ದಾಳಿಗೆ ಸಿಕ್ಕಿ ಬೀಳುವ ಮೂಲಕ ಹಾಸನ ಜಿಲ್ಲೆಯ ಬಗ್ಗೆ ರಾಜ್ಯ ಗಮನಹರಿಸಿಬಿಟ್ಟಿದೆ. ಜಿಲ್ಲೆಯ ಮರ್ಯಾದೆ ಉಳಿಸಲು ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಲು ಮೇಲಾಧಿಕಾರಿಗಳು ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸೂಚಿಸಿದರು.


ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮೂರನೇ ತ್ರೆಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರಾರಂಭದಲ್ಲೆ ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ಧ ಬಗೆ ಚರ್ಚಿಸಿ ಅಧಿಕಾರಿಗಳ ನಡೆಗೆ ಸಂಸದರು ಕೆಂಡಮಂಡಲವಾದರು. ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಲೋಕಾಯುಕ್ತ ದಾಳಿ ನಡೆಯುತ್ತಿದೆ. ಲಂಚ ಪಡೆಯುವಾಗ ಅಧಿಕಾರಿಗಳು ಸಿಕ್ಕಿಬೀಳುತ್ತಿದ್ದಾರೆ, ಇದರಿಂದ ಇಡೀ ರಾಜ್ಯ ನಮ್ಮ ಜಿಲ್ಲೆಯತ್ತ ಗಮನ ಹರಿಸಿದೆ. ಹಾಸನ ಜಿಲ್ಲೆ ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸ ಯಾರು ಮಾಡಬೇಡಿ. ಇಡೀ ಜಿಲ್ಲಾಡಳಿತದ ಗೌರವ ನಿಮ್ಮ ಕೈಯಲ್ಲಿದೆ. ನಿಮ್ಮ ಕೆಳಮಟ್ಟದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ. ಲಂಚಕೋರರನ್ನು ನಿಯಂತ್ರಣದಲ್ಲಿಟ್ಟುಕೊಂಡು ಇನ್ಮುಂದೆ ಇಂತಹ ಘಟನೆಗಳ ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದರು. ಕಳೆದ ಒಂದು ತಿಂಗಳಲ್ಲಿ ನಾಲ್ಕು ಜನ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಡಿಡಿಪಿಐ, ನಗರಸಭೆ ಆಯುಕ್ತರು, ಇತರೆ ಸೇರಿದಂತೆ ಒಟ್ಟು ನಾಲ್ವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಸಂಸದರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ನಮ್ಮನ್ನು ಬೇರೆಡೆ ಪ್ರಶ್ನಿಸುವ ಪರಿಸ್ಥತಿ ಉಂಟಾಗಬಾರದು ಎಂದು ಸೂಕ್ಷ್ಮವಾಗಿ ಸೂಚಿಸಿದರು. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಜೊತೆಗೆ, ಪ್ರಾಮಾಣಿಕತೆಯಿಂದ ಜಿಲ್ಲಾ ಅಭಿವೃದ್ಧಿಗೆ ತಮ್ಮಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.


ಒಳ ಚರಂಡಿ ಕುರಿತು ಇರುವ ವ್ಯವಸ್ಥೆ ಕುರಿತಂತೆ ಸಂಸದರು ಆಕ್ರೋಶಗೊಂಡರು. ಇಲಾಖೆ ಒಳಗೆ ಹೇಳೋರು ಕೇಳೋರು ಯಾರು ಇಲ್ವಾ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಅರಸೀಕೆರೆ ಪಟ್ಟಣದ ಒಳ ಚರಂಡಿ ವ್ಯವಸ್ಥೆ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಕಳೆದರೂ ಪೂರ್ಣವಾಗಿಲ್ಲ ಅರಸೀಕೆರೆ ಶಾಸಕ ಕೆ.ಎಂ. ಶಿವೆಲಿಂಗೇಗೌಡರು ಇದೆ ವೇಳೆ ಆಕ್ರೋಶಗೊಂಡರು. ನಿಮಗೆ ಮಾನಮರ್ಯಾದೆ ಇದಿಯಾ ಅಧಿಕಾರಿಗಳಿಗೆ ಛೀಮಾರಿ ಹಾಕದ ಪ್ರಸಂಗ ನಡೆಯಿತು. ನಿಮ್ಮಂತ ಅಧಿಕಾರಿಗಳನ್ನು ದೆಹಲಿಗೆ ಆಲ್ಸೋದು ನಂಗೆ ಗೊತ್ತು ಎಂದು ಸಂಸದ ಶ್ರೀಯಸ್ ಪಟೇಲ್ ಗರಂಗೊಂಡರು.


ಕೇಂದ್ರ ಸರಕಾರದ 50 ಭಾಗ ಹಣ ಕೊಟ್ಟಿದೆ. ಏನು ನ್ಯೂನ್ಯತೆಗಳಿವೆ ಅದನ್ನ ಸರಿಪಡಿಸಿ ವರದಿ ಕುಡ ಕೊಟ್ಟಿಲ್ಲ. ಅಲಲಿ ಬಂದರೇ ಸರಿಯಾಗಿ ಮಾಹಿತಿ ಸಿಗಲ್ಲ. ಓರಿಯಂಟಲ್ ಸಂಸ್ಥೆ ಸರಿಯಾಗಿಲ್ಲ ಬಹಳ ಅನ್ಯಾಯ ಮಾಡುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ಇದೆ ವೇಳೆ ಗಂಭೀರವಾಗಿ ಆರೋಪಿಸಿದರು. ಕೃಷಿಗೆ ಸಂಬAಧಿಸಿದAತೆ ಸಂಬAಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತ ಯಾವ ಸಾಮಾಗ್ರಿ ತೆಗೆದುಕೊಳ್ಳುತ್ತಾನೆ ಅದನ್ನು ಪರಿಶೀಲಿಸಿ ಅದಕ್ಕೆ ಸರ್ಟಿಫಿಕೆಟ್ ಕೊಡಬೇಕು. ನೀವು ಯಾವುದೇ ಏಜೆಂಟ್ ಕಂಪನಿಗಳಿವೆ ಎಲ್ಲಾ ಕಂಪನಿಗಳಲ್ಲೂ ಮೋಸ. ಒಂದು ಕೂಡ ಸರಿಯಾದ ರೀತಿ ಬೆಲೆ ಇಲ್ಲ. ನಿಮ್ಮ ಮಾರುಕಟ್ಟೆ ಧರಕ್ಕೂ ವ್ಯತ್ಯಾಸವಿದೆ. ರೈತನಿಗೆ ಸಬ್ಸಿಡಿ ಸಿಗುವುದೆ ಇಲ್ಲ. ನಿಮ್ಮ ಮಾರುಕಟ್ಟೆ ಧರಕ್ಕಿಂತ ಹೆಚ್ಚು ಇದೆ. ರೈತನಿಗೆ ನೇರವಾಗಿ ಗುಣಮಟ್ಟಕ್ಕೆ ಸರಿಯಾಗಿ ಧರ ನೀಡಿ ಎಂದು ಅಧಿಕಾರಿಗೆ ಸಲಹೆ ನೀಡಿದರು.ನಮ್ಮ ಕೈಲೆ ರೈತರ ಸಾಮಾಗ್ರಿ ಹಂಚಿಸುತ್ತೀರಾ! ಧರ ನೋಡಿದರೇ ರೈತರ ಸಬ್ಸಿಡಿ ಹಣವೇ ಇಲ್ಲ. ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.


ಇದಾದ ನಂತರ ವಿವಿಧ ಇಲಾಖೆಗಳ ಕುರಿತು ಮಾಹಿತಿ ಪಡೆಯಲಾಯಿತು. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಇದೆ ವೇಳೆ ಸಂಸದರು ತರಾಟೆಗೆ ತೆಗೆದುಕೊಂಡರು.
ಸಭೆ ಒಳಗೆ ಮದ್ಯಾಹ್ನವಾದರೂ ಸಂಸದರು ಹಾಗೂ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷದವರು ಬಿಟ್ಟರೇ ಯಾªಸಿತರೆ ಪಕ್ಷದ ಶಾಸಕರು ಸಭೆಗೆ ಭಾಗವಹಿಸಲಿಲ್ಲ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಎಂ. ತಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page