Tuesday, February 11, 2025

ಸತ್ಯ | ನ್ಯಾಯ |ಧರ್ಮ

ಭಾರತ 2024: ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣದಲ್ಲಿ 74% ಹೆಚ್ಚಳ- ವರದಿ

ದ್ವೇಷ ಭಾಷಣ ಮಾಡುವ 10 ಜನರಲ್ಲಿ ಆರು ಜನರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಪಟಾಲಂ ಎಂದು ಇಂಡಿಯಾ ಹೇಟ್ ಲ್ಯಾಬ್ ಸಂಶೋಧನಾ ತಂಡ ತಿಳಿಸಿದೆ

ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಗುಂಪು ಇಂಡಿಯಾ ಹೇಟ್ ಲ್ಯಾಬ್ ಸೋಮವಾರ ಪ್ರಕಟಿಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಶೇ. 74.4 ರಷ್ಟು ಹೆಚ್ಚಾಗಿದೆ.

“ಭಾರತದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ದ್ವೇಷ ಭಾಷಣ ಇನ್ ಇಂಡಿಯಾ- Social Media and Hate Speech in India” ಎಂಬ ಅಧ್ಯಯನವು ಕಳೆದ ವರ್ಷ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣದ 1,165 ಪ್ರಕರಣಗಳು ದಾಖಲಾಗಿವೆ ಎಂದಿದೆ.

“ಇದು 2023 ಕ್ಕೆ ಹೋಲಿಸಿದರೆ 74.4% ಹೆಚ್ಚಳವನ್ನು ತೋರಿಸುತ್ತದೆ, ಹಿಂದೆ 668 ಇಂತಹ ಘಟನೆಗಳು ದಾಖಲಾಗಿದ್ದವು. ಇವುಗಳಲ್ಲಿ1,147 (98.5%) ಘಟನೆಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗಿತ್ತು. 1,050 ಘಟನೆಗಳು ಸ್ಪಷ್ಟವಾಗಿ ಮಾತ್ರ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. 97 ಘಟನೆಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇಬ್ಬರನ್ನೂ ಗುರಿಯಾಗಿಸಿಕೊಂಡಿವೆ. 115 (9.9%) ಘಟನೆಗಳಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಲಾಗಿತ್ತು. ಇವುಗಳಲ್ಲಿ 18 ಘಟನೆಗಳು ಸ್ಪಷ್ಟವಾಗಿ ಕ್ರೈಸ್ತರನ್ನು ಮಾತ್ರ ಗುರಿಯಾಗಿಸಿಕೊಂಡಿವೆ. 97 ಘಟನೆಗಳು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಬ್ಬರನ್ನೂ ಗುರಿಯಾಗಿಸಿಕೊಂಡಿವೆ.”

ವರದಿಯ ಪ್ರಕಾರ, ದ್ವೇಷ ಭಾಷಣ ಮಾಡುವ 10 ಜನರಲ್ಲಿ ಆರು ಮಂದಿ ರಾಜಕಾರಣಿಗಳಾಗಿದ್ದು, ಅವರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದ್ದಾರೆ.

“ಆದಿತ್ಯನಾಥ್ 86 (7.4%) ದ್ವೇಷ ಭಾಷಣ ಘಟನೆಗಳಿಗೆ ಕಾರಣರಾಗಿದ್ದರೆ, ಮೋದಿ 67 ಭಾಷಣಗಳನ್ನು ಮಾಡಿದ್ದಾರೆ, ಇವರ ಕೃತ್ಯಗಳು 2024 ರಲ್ಲಿ ನಡೆದಿರುವ ದ್ವೇಷ ಭಾಷಣಗಳ 5.7% ರಷ್ಟಿದೆ,” ಎಂದು ಅದು ಹೇಳಿದೆ.

2024 ರಲ್ಲಿ ಭಾರತದಲ್ಲಿ ದ್ವೇಷ ಭಾಷಣದ ಪರಿಶೀಲಿಸಲ್ಪಟ್ಟ ವ್ಯಕ್ತಿಗತ ಭಾಷಣ ಘಟನೆಗಳ (verified in-person hate speech events) ಪ್ರಸಾರ ಮತ್ತು ವರ್ಧನೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಅಧ್ಯಯನವು ವಿಶ್ಲೇಷಿಸಿದೆ, ಈ ಕೃತ್ಯಗಳು ರಾಜಕೀಯ ರ್ಯಾಲಿಗಳು, ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಧಾರ್ಮಿಕ ಮೆರವಣಿಗೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳಂತಹ ವಿವಿಧ ರೀತಿಯ ಸಾರ್ವಜನಿಕ ಸಭೆಗಳಲ್ಲಿ ನಡೆದಿವೆ.

ದ್ವೇಷ ಭಾಷಣ ದಾಖಲಾಗಿರುವ 931 ಅಥವಾ 79.9% ಘಟನೆಗಳು ಭಾರತೀಯ ಜನತಾ ಪಕ್ಷದ ಆಳ್ವಿಕೆಯಲ್ಲಿರುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿವೆ ಎಂದು ವರದಿ ಹೇಳಿದೆ. “ರಾಜಕೀಯ ನಿಯಂತ್ರಣ ಮತ್ತು ದ್ವೇಷ ಭಾಷಣದ ಹರಡುವಿಕೆಯ ನಡುವೆ ಬಲವಾದ ಸಂಬಂಧವಿದೆ ಎಂದು ದತ್ತಾಂಶವು ಸೂಚಿಸುತ್ತದೆ” ಎಂದು ಸಂಶೋಧನೆ ಹೇಳಿದೆ.

2024 ರಲ್ಲಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು 234 ಅಥವಾ 20% ರಷ್ಟು ಇಂತಹ ದ್ವೇಷ ಭಾಷಣ ಘಟನೆಗಳನ್ನು ದಾಖಲಿಸಿವೆ ಎಂದು ಅದು ಹೇಳಿದೆ.

“ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಅತಿ ಹೆಚ್ಚು ದ್ವೇಷ ಭಾಷಣ ಘಟನೆಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ, 2024 ರಲ್ಲಿ ಇಲ್ಲಿ ದಾಖಲಾದ ಎಲ್ಲಾ ಘಟನೆಗಳಲ್ಲಿ ಒಟ್ಟಾರೆಯಾಗಿ 47% ರಷ್ಟಿದೆ,” ಎಂದು ಅಧ್ಯಯನ ಹೇಳಿದೆ.

“ಬಿಜೆಪಿಯೇ ಅತಿ ಹೆಚ್ಚು ದ್ವೇಷ ಭಾಷಣದ ಆಯೋಜಕರಾಗಿದ್ದು, 340 ದ್ವೇಷ ಭಾಷಣ ಕಾರ್ಯಕ್ರಮಗಳಿಗೆ ಕಾರಣವಾಗಿದೆ, ಹೆಚ್ಚಾಗಿ ಮಾರ್ಚ್ ಮತ್ತು ಜೂನ್ ನಡುವಿನ ಸಾರ್ವತ್ರಿಕ ಚುನಾವಣೆಗಳು ಮತ್ತು ಜಾರ್ಖಂಡ್ ಮತ್ತು ಮಹಾರಾಷ್ಟ್ರದ ನಿರ್ಣಾಯಕ ರಾಜ್ಯ ಚುನಾವಣೆಗಳ ಸಮಯದಲ್ಲಿ – 2023 ಕ್ಕೆ ಹೋಲಿಸಿದರೆ ಶೇ. 580 ರಷ್ಟು ಹೆಚ್ಚಳ ಕಂಡಿದೆ,” ಎಂದು ಸಂಶೋಧನೆ ತಿಳಿಸಿದೆ.

2024 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೋದಿ 110 ಭಾಷಣಗಳಲ್ಲಿ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಆಗಸ್ಟ್ ವರದಿ ತಿಳಿಸಿದೆ. ಕನಿಷ್ಠ 110 ಭಾಷಣಗಳಲ್ಲಿ, ಮೋದಿ ಅವರು ರಾಜಕೀಯ ವಿರೋಧವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ.

“ಮೋದಿಯವರ 2024 ರ ಚುನಾವಣಾ ಪ್ರಚಾರವು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣವನ್ನು ಆಗಾಗ್ಗೆ ಬಳಸುತ್ತಿತ್ತು. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಪ್ರಚಾರದ ಸಮಯದಲ್ಲಿ, ಮೋದಿಯ ಹಿಂದೂ ಬಹುಸಂಖ್ಯಾತ ಬಿಜೆಪಿಯ ನಾಯಕತ್ವವು ಅಂಚಿನಲ್ಲಿರುವ ಗುಂಪುಗಳ ವಿರುದ್ಧ ತಾರತಮ್ಯ, ಹಗೆತನ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿತ್ತು,” ಎಂದು ವರದಿ ಹೇಳಿದೆ.

ಏಪ್ರಿಲ್ 21 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಮಾಡಿದ ಭಾಷಣವನ್ನು ಮಾನವ ಹಕ್ಕುಗಳ ಕಾವಲು ಸಂಸ್ಥೆ ನಿರ್ದಿಷ್ಟವಾಗಿ ಉಲ್ಲೇಖಿಸಿತ್ತು , ಅಲ್ಲಿ ಅವರು ಮುಸ್ಲಿಮರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಕರೆದರು.

ಪ್ರಚಾರದ ಸಮಯದಲ್ಲಿ ಪ್ರಧಾನಿಯವರು ಹಲವಾರು ಬಾರಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page