Wednesday, May 14, 2025

ಸತ್ಯ | ನ್ಯಾಯ |ಧರ್ಮ

ಕದನ ವಿರಾಮದ ಕುರಿತು ಮೋದಿ ದೇಶಕ್ಕೆ ಸತ್ಯವನ್ನು ತಿಳಿಸಬೇಕು: ಕಾಂಗ್ರೆಸ್‌ ಆಗ್ರಹ

ಭಾರತ ಮತ್ತು ಪಾಕಿಸ್ಥಾನ ನಡುವಿನ ಕದನ ವಿರಾಮದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಂತೆ ಆಗ್ರಹಿಸಿರುವ ಕಾಂಗ್ರೆಸ್‌ ಪಕ್ಷ, ಕದನ ವಿರಾಮದ ತೀರ್ಮಾನವನ್ನು ಅಮೆರಿಕ ಮಾಡಿಸಿದ್ದೋ? ಮೋದಿ ತೆಗೆದುಕೊಂಡಿದ್ದೋ ಎನ್ನುವುದು ದೇಶಕ್ಕೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸತ್ಯ ಹೇಳಬೇಕು ಎಂದು ಪಕ್ಷವು ಆಗ್ರಹಿಸಿದೆ.

ಈ ಬಗ್ಗೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಪದೇಪದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ-ಪಾಕಿಸ್ಥಾನ ಯುದ್ಧ ವಿರಾಮ ಮಾಡಿಸಿದ್ದು ನಾನು ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮಲ್ಲೂ ಒಂದಷ್ಟು ಸಾಕ್ಷ್ಯಗಳಿವೆ. ಫೋನ್‌ ಕರೆಗಳ ಮಾಹಿತಿ ಇದೆ. ಅವುಗಳನ್ನು ಹೊರಹಾಕುತ್ತೇವೆ. ಮೊದಲು ಮೋದಿ ಸರ್ವಪಕ್ಷ ಸಭೆ ಕರೆಯಬೇಕು.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಸಭೆ ದಿಲ್ಲಿಯಲ್ಲಿ ನಡೆಯುತ್ತಿದ್ದು, ಸರ್ವಪಕ್ಷಗಳ ಸಭೆ ಕರೆಯುವ ಕುರಿತು ಚರ್ಚೆ ನಡೆಯ ಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿಕೆ ಹಲವಾರು ಆಯಾಮಗಳಲ್ಲಿ ಜನ ರನ್ನು ಗೊಂದಲಕ್ಕೆ ಕೆಡವುತ್ತಿದೆ. ಕೂಡಲೇ ಈ ನಿಟ್ಟಿನಲ್ಲಿ ಮೋದಿ ಸತ್ಯ ಹೇಳಬೇಕು.

ಟ್ರಂಪ್‌ ಕೂಡ ಪ್ರಚಾರಕ್ಕಾಗಿ ವಿಶ್ವ ಸಮುದಾಯದ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಮೋದಿ ಅವರು ಈ ವಿಚಾರ ಬಹಿರಂಗ ಮಾಡಬಹುದಿತ್ತು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page