Wednesday, May 21, 2025

ಸತ್ಯ | ನ್ಯಾಯ |ಧರ್ಮ

ಕಸ್ಟಮ್ ನಿರ್ಮಿತ ಜಾಕೆಟ್‌ನಲ್ಲಿ ಕಳ್ಳಸಾಗಣೆ : 70 ಲಕ್ಷ ರೂ. ನಗದು ಮತ್ತು 200 ಗ್ರಾಂ ಚಿನ್ನ ವಶ

ಕೇರಳ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಿಂದ ಕೇರಳಕ್ಕೆ ತೆರಳುತಿದ್ದ ಸಂದರ್ಭದಲ್ಲಿ, ವಿಶೇಷವಾಗಿ ತಯಾರಿಸಿದ ಜಾಕೆಟ್‌ನಲ್ಲಿ, ನಗದು ಮತ್ತು ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪಾಲಕ್ಕಾಡ್ ಜಿಲ್ಲೆಯ ವೇಲಂತವಲಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೇರಳ ಪೊಲೀಸರು ನಿಯಮಿತ ತಪಾಸಣೆಯಾಗಿ ವಾಹನಗಳನ್ನು ಪರಿಶೀಲಿಸುತ್ತಿದ್ದರು.

ಈ ಸಂರ್ಭದಲ್ಲಿ ಎರಡು ಮೋಟಾರ್ ಸೈಕಲ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪುರುಷರಲ್ಲಿ, ಒಬ್ಬ ವ್ಯಕ್ತಿಯ ಉಡುಗೆ ವಿಚಿತ್ರವಾಗಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ, ತಕ್ಷಣ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.

ನಂತರ, ತನ್ನ ಶರ್ಟ್ ತೆಗೆಯಲು ಕೇಳಿದಾಗ, ಆ ವ್ಯಕ್ತಿ ಹಲವಾರು ಪಾಕೆಟ್‌ಗಳನ್ನು ಮರೆಮಾಡಿದ ಕಪ್ಪು ಜಾಕೆಟ್ ಅನ್ನು ಬಹಿರಂಗಪಡಿಸಿದ್ದಾನೆ,  ಪೊಲೀಸರು ಅದನ್ನ ಪರಿಶೀಲಿಸಿದಾಗ, ಜಾಕೆಟ್‌ನಲ್ಲಿ ನಗದು ಮತ್ತು ಚಿನ್ನ ತುಂಬಿರುವುದು ಕಂಡುಬಂದಿದೆ.

ತದನಂತರ ಅಧಿಕಾರಿಗಳು ಜಾಕೆಟ್‌ನಿಂದ 70 ಲಕ್ಷ ರೂ. ನಗದು ಮತ್ತು 200 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ, ಆ ವ್ಯಕ್ತಿಯನ್ನು ಸಾಗರ್ ಎಂದು ಗುರುತಿಸಲಾಗಿದ್ದು, ತನಿಖೆ ಮುಂದುವರಿದಿದ್ದು, ಆತನನ್ನು ಮತ್ತು ಆತನ ಇಬ್ಬರು ಸಹಚರರಾದ ಮಣಿಕಂಠನ್ ಮತ್ತು ಸಂದೀಪ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ  ಎಂದು  ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page