ಕೇರಳ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಿಂದ ಕೇರಳಕ್ಕೆ ತೆರಳುತಿದ್ದ ಸಂದರ್ಭದಲ್ಲಿ, ವಿಶೇಷವಾಗಿ ತಯಾರಿಸಿದ ಜಾಕೆಟ್‌ನಲ್ಲಿ, ನಗದು ಮತ್ತು ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ವೇಲಂತವಲಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೇರಳ ಪೊಲೀಸರು ನಿಯಮಿತ ತಪಾಸಣೆಯಾಗಿ ವಾಹನಗಳನ್ನು ಪರಿಶೀಲಿಸುತ್ತಿದ್ದರು.
ಈ ಸಂರ್ಭದಲ್ಲಿ ಎರಡು ಮೋಟಾರ್ ಸೈಕಲ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪುರುಷರಲ್ಲಿ, ಒಬ್ಬ ವ್ಯಕ್ತಿಯ ಉಡುಗೆ ವಿಚಿತ್ರವಾಗಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ, ತಕ್ಷಣ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.
ನಂತರ, ತನ್ನ ಶರ್ಟ್ ತೆಗೆಯಲು ಕೇಳಿದಾಗ, ಆ ವ್ಯಕ್ತಿ ಹಲವಾರು ಪಾಕೆಟ್‌ಗಳನ್ನು ಮರೆಮಾಡಿದ ಕಪ್ಪು ಜಾಕೆಟ್ ಅನ್ನು ಬಹಿರಂಗಪಡಿಸಿದ್ದಾನೆ, ಪೊಲೀಸರು ಅದನ್ನ ಪರಿಶೀಲಿಸಿದಾಗ, ಜಾಕೆಟ್‌ನಲ್ಲಿ ನಗದು ಮತ್ತು ಚಿನ್ನ ತುಂಬಿರುವುದು ಕಂಡುಬಂದಿದೆ.
ತದನಂತರ ಅಧಿಕಾರಿಗಳು ಜಾಕೆಟ್‌ನಿಂದ 70 ಲಕ್ಷ ರೂ. ನಗದು ಮತ್ತು 200 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ, ಆ ವ್ಯಕ್ತಿಯನ್ನು ಸಾಗರ್ ಎಂದು ಗುರುತಿಸಲಾಗಿದ್ದು, ತನಿಖೆ ಮುಂದುವರಿದಿದ್ದು, ಆತನನ್ನು ಮತ್ತು ಆತನ ಇಬ್ಬರು ಸಹಚರರಾದ ಮಣಿಕಂಠನ್ ಮತ್ತು ಸಂದೀಪ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.