ಸರ್ಕಾರದ ಸಾಧನಾ ಸಮಾವೇಶದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮಾತಿಗೆ ಮಾಜಿ ಸಂಸದ ಡಿಕೆ ಸುರೇಶ್ ಕಟುವಾಗಿ ಟೀಕಿಸಿದ್ದಾರೆ. ಅಷ್ಟಕ್ಕೂ ‘ಈ ಕಳ್ಳ ಸ್ವಾಮಿ ಮಾತಿಗೆ ಉತ್ತರ ಕೊಡೋಕಾಗುತ್ತಾ?’ ಎಂದು ಪ್ರಶ್ನಿಸಿದ್ದಾರೆ.
“ಹಿಟ್ ಅಂಡ್ ರನ್ ಗಿರಾಕಿ ಕುಮಾರಸ್ವಾಮಿ, ಅವರಿಗೆಲ್ಲಾ ಉತ್ತರ ಕೊಡೋಕಾಗಲ್ಲ.” ಎಂದು ಹೇಳಿದ್ದಾರೆ. ಪ್ರಕೃತಿ ಈ ಬಾರಿ ಒಲಿದಿದೆ. ಬೆಂಗಳೂರಲ್ಲಿ ಎಲ್ಲಾ ಕಡೆ ಕಾಂಕ್ರೀಟ್ ಇರುವುದರಿಂದ ನೀರು ಇಂಗಿ ಹೋಗಲು ಅವಕಾಶವಿಲ್ಲ” ಎಂದು ಹೇಳಿದ್ದಾರೆ
ಮಳೆಯ ಕಾರಣಕ್ಕೆ ರೈತರು ಖುಷಿಯಿಂದ ಇದ್ದಾರೆ. ನಮ್ಮ ಕಡೆ ಕೆರೆ-ಕಟ್ಟೆ ಕೂಡಾ ತುಂಬಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.