Saturday, August 16, 2025

ಸತ್ಯ | ನ್ಯಾಯ |ಧರ್ಮ

75 ವರ್ಷಗಳಿಂದ ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತಿದೆ: ಮೋದಿ

ದೆಹಲಿ: ಇದು 140 ಕೋಟಿ ಜನರ ಸಂಕಲ್ಪದ ಹಬ್ಬ. 75 ವರ್ಷಗಳಿಂದ ಸಂವಿಧಾನವೇ ನಮ್ಮೆಲ್ಲರನ್ನು ಮಾರ್ಗದರ್ಶನ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ನವದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅದಕ್ಕೂ ಮೊದಲು ಅವರು ಮೂರೂ ಸೈನ್ಯದ ವಿಭಾಗಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ರಾಜಘಾಟ್‌ನಲ್ಲಿ ಗೌರವ ಸಲ್ಲಿಸಿದರು.

ಧ್ವಜಾರೋಹಣದ ನಂತರ ಮಾತನಾಡಿದ ಪ್ರಧಾನಿ, ಇದು ದೇಶವು ಐಕ್ಯತೆಯ ಭಾವದಿಂದ ಉಕ್ಕಿ ಹರಿಯುವ ಸಮಯ ಎಂದರು. ಕೋಟ್ಯಂತರ ಜನರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. 75 ವರ್ಷಗಳಿಂದ ಸಂವಿಧಾನವು ನಮಗೆ ಮಾರ್ಗದರ್ಶನ ಮಾಡುತ್ತಿದೆ ಮತ್ತು ಸಂವಿಧಾನ ರಚನಾಕಾರರ ಸೇವೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ‘ಆಪರೇಷನ್ ಸಿಂಧೂರ್’ನಲ್ಲಿ ಧೈರ್ಯ ಪ್ರದರ್ಶಿಸಿದ ವೀರ ಸೈನಿಕರಿಗೆ ಸೆಲ್ಯೂಟ್ ಮಾಡುತ್ತೇವೆ ಎಂದರು. ನಮ್ಮ ಸೈನಿಕರು ಊಹಿಸಲೂ ಸಾಧ್ಯವಿಲ್ಲದಷ್ಟು ಕ್ರೂರವಾಗಿ ಶತ್ರುಗಳನ್ನು ಮಟ್ಟಹಾಕಿದ್ದಾರೆ ಎಂದು ಶ್ಲಾಘಿಸಿದರು.

ಪಹಲ್ಗಾಂನಲ್ಲಿ ದಾಳಿ ಮಾಡಿದ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದು ಮೋದಿ ಹೇಳಿದರು. ಭಾರತದ ಯುವಕರಿಗಾಗಿ ₹1 ಲಕ್ಷ ಕೋಟಿ ವೆಚ್ಚದಲ್ಲಿ ಹೊಸ ಯೋಜನೆ ತರಲಾಗುವುದು, ಅದನ್ನು ‘ಪ್ರಧಾನಮಂತ್ರಿ ವಿಕಸಿತ ಭಾರತ ಯೋಜನೆ’ ಎಂದು ಹೆಸರಿಸಲಾಗಿದೆ ಎಂದು ಮೋದಿ ತಿಳಿಸಿದರು. ಜಿಎಸ್‌ಟಿ ಕುರಿತು ರಾಜ್ಯಗಳೊಂದಿಗೆ ಚರ್ಚಿಸಿ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಇವುಗಳಲ್ಲಿ ಹೊಸ ತಲೆಮಾರಿನ ಸುಧಾರಣೆಗಳು ದೀಪಾವಳಿ ಹಬ್ಬದೊಳಗೆ ಜಾರಿಗೆ ಬರಲಿವೆ. ಇವುಗಳನ್ನು ಸಾಮಾನ್ಯ ಜನರಿಗೆ ದೀಪಾವಳಿ ಕೊಡುಗೆಯಾಗಿ ನೀಡುತ್ತೇವೆ ಎಂದು ಮೋದಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page