Saturday, August 23, 2025

ಸತ್ಯ | ನ್ಯಾಯ |ಧರ್ಮ

ಉತ್ತರಾಖಂಡದಲ್ಲಿ ಮತ್ತೊಮ್ಮೆ ಮೇಘಸ್ಫೋಟ… ಬಾಲಕಿ ಸಾವು… ಹಲವರು ನಾಪತ್ತೆ

ಉತ್ತರಾಖಂಡ (Uttarakhand) ರಾಜ್ಯದಲ್ಲಿ ಮತ್ತೊಮ್ಮೆ ಮೇಘಸ್ಫೋಟ (Cloudburst) ಸಂಭವಿಸಿದೆ. ಶುಕ್ರವಾರ ರಾತ್ರಿ ಚಮೋಲಿ (Chamoli) ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.

ಈ ಪ್ರವಾಹದಿಂದಾಗಿ ಭಾರಿ ಹಾನಿಯಾಗಿದ್ದು, ಅನೇಕ ಜನರು ನಾಪತ್ತೆಯಾಗಿದ್ದಾರೆ. ಮನೆಗಳು, ಅಂಗಡಿಗಳು, ವಾಹನಗಳು ನಾಶವಾಗಿವೆ.

ಪ್ರವಾಹದಿಂದಾಗಿ ಭೂಕುಸಿತಗಳು ಕೂಡ ಸಂಭವಿಸಿವೆ. ಥರಾಲಿ ಮಾರುಕಟ್ಟೆ ಪ್ರದೇಶ, ಕೋಟ್‍ದೀಪ್ ಮತ್ತು ಥರಾಲಿ ತಹಸೀಲ್ ಸಂಕೀರ್ಣವು ತೀವ್ರವಾಗಿ ಹಾನಿಗೊಳಗಾಗಿವೆ. ಈ ಪ್ರದೇಶಗಳು ಸಂಪೂರ್ಣವಾಗಿ ಅವಶೇಷಗಳಿಂದ ತುಂಬಿವೆ. ಹಲವಾರು ವಾಹನಗಳು, ಮನೆಗಳು ಮತ್ತು ಅಂಗಡಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ.

ಈ ಪ್ರವಾಹದಿಂದಾಗಿ ರಸ್ತೆಗಳು ನದಿಗಳಂತೆ ಕಾಣುತ್ತಿದ್ದವು. ಈ ದುರಂತದಿಂದಾಗಿ ಸಗ್ವಾರಾ ಗ್ರಾಮದಲ್ಲಿ (Sagwara village) ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಓರ್ವ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page