ಉತ್ತರಾಖಂಡ (Uttarakhand) ರಾಜ್ಯದಲ್ಲಿ ಮತ್ತೊಮ್ಮೆ ಮೇಘಸ್ಫೋಟ (Cloudburst) ಸಂಭವಿಸಿದೆ. ಶುಕ್ರವಾರ ರಾತ್ರಿ ಚಮೋಲಿ (Chamoli) ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.
ಈ ಪ್ರವಾಹದಿಂದಾಗಿ ಭಾರಿ ಹಾನಿಯಾಗಿದ್ದು, ಅನೇಕ ಜನರು ನಾಪತ್ತೆಯಾಗಿದ್ದಾರೆ. ಮನೆಗಳು, ಅಂಗಡಿಗಳು, ವಾಹನಗಳು ನಾಶವಾಗಿವೆ.
ಪ್ರವಾಹದಿಂದಾಗಿ ಭೂಕುಸಿತಗಳು ಕೂಡ ಸಂಭವಿಸಿವೆ. ಥರಾಲಿ ಮಾರುಕಟ್ಟೆ ಪ್ರದೇಶ, ಕೋಟ್‍ದೀಪ್ ಮತ್ತು ಥರಾಲಿ ತಹಸೀಲ್ ಸಂಕೀರ್ಣವು ತೀವ್ರವಾಗಿ ಹಾನಿಗೊಳಗಾಗಿವೆ. ಈ ಪ್ರದೇಶಗಳು ಸಂಪೂರ್ಣವಾಗಿ ಅವಶೇಷಗಳಿಂದ ತುಂಬಿವೆ. ಹಲವಾರು ವಾಹನಗಳು, ಮನೆಗಳು ಮತ್ತು ಅಂಗಡಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ.
ಈ ಪ್ರವಾಹದಿಂದಾಗಿ ರಸ್ತೆಗಳು ನದಿಗಳಂತೆ ಕಾಣುತ್ತಿದ್ದವು. ಈ ದುರಂತದಿಂದಾಗಿ ಸಗ್ವಾರಾ ಗ್ರಾಮದಲ್ಲಿ (Sagwara village) ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಓರ್ವ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.