Friday, October 24, 2025

ಸತ್ಯ | ನ್ಯಾಯ |ಧರ್ಮ

ಹಾಸನಾಂಬ ಜಾತ್ರೆ ₹25.59 ಕೋಟಿಯ ದಾಖಲೆಯ ಆದಾಯ

ಹಾಸನ : ಈ ಬಾರಿ ನಡೆದ ಹಾಸನಾಂಬ ಜಾತ್ರಾ ಮಹೋತ್ಸವವು ಹೊಸ ಇತಿಹಾಸ ಬರೆದಿದ್ದು, ಆದಾಯದ ದಾಖಲೆಯ ಮೂಲಕ ಗಮನಸೆಳೆದಿದೆ. ವಿಶೇಷ ದರ್ಶನದ ₹1000 ಮತ್ತು ₹300 ಟಿಕೆಟ್ ಹಾಗೂ ಲಾಡು ಮಾರಾಟದಿಂದ ₹21 ಕೋಟಿ 91 ಲಕ್ಷ 75 ಸಾವಿರ 052 ರೂ ಸಂಗ್ರಹವಾಗಿದೆ. ಹುಂಡಿಯಲ್ಲಿ ₹3 ಕೋಟಿ 68 ಲಕ್ಷ 12 ಸಾವಿರ 275 ರೂ ಹಣ ಬಂದಿದೆ. ಒಟ್ಟಾರೆ ₹25 ಕೋಟಿ 59 ಲಕ್ಷ 87 ಸಾವಿರ 327 ರೂ ಸಂಗ್ರಹವಾಗಿದ್ದು, ಇದು ಹಾಸನಾಂಬ ಜಾತ್ರೆಯ ಇತಿಹಾಸದಲ್ಲೇ ಅತೀ ಹೆಚ್ಚು ಆದಾಯವಾಗಿದೆ. ಭಕ್ತರು ಕಾಣಿಕೆಯ ರೂಪದಲ್ಲಿ 75 ಗ್ರಾಂ 300 ಮಿಲಿ ಚಿನ್ನ ಮತ್ತು 1 ಕೆಜಿ 58 ಗ್ರಾಂ 400 ಮಿಲಿ ಬೆಳ್ಳಿ ವಸ್ತುಗಳು ಸಮರ್ಪಿಸಿದ್ದಾರೆ. ಇದೇ ವೇಳೆ ವಿದೇಶಿ ಕರೆನ್ಸಿಯ ರೂಪದಲ್ಲಿಯೂ ಕಾಣಿಕೆ ಹಾಕಿರುವ ಭಕ್ತರು ಇದ್ದಾರೆ.

ವಿದೇಶ ಕರೆನ್ಸಿಗಳ ವಿವರ : ಇಂಡೋನೇಷಿಯಾ ₹263, ನೇಪಾಳ ₹3.13, ಮಲೇಷಿಯಾ ₹28.75, ಯುಎಸ್‌ಎ ₹526, ಮಾಲ್ಡೀವ್ಸ್ ₹57.29, ಕೆನಡಾ ₹6259, ಕುವೈತ್ ₹286, ಯುಎಇ ₹239 — ಒಟ್ಟು ₹7653 ರೂ ವಿದೇಶ ಕರೆನ್ಸಿ ಸಂಗ್ರಹವಾಗಿದೆ. ಇದೇ ವೇಳೆ ಭಕ್ತರು 42,530 ಹಳೆಯ ನೋಟುಗಳನ್ನು ಸಹ ಹುಂಡಿಗೆ ಹಾಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕ ಅಕೌಂಟ್ ಹೊಂದಿರುವ ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯವೂ ಪೂರ್ಣಗೊಂಡಿದ್ದು, ಈ ಬಾರಿ ₹15,17,785 ರೂ ಕಾಣಿಕೆ ಸಂಗ್ರಹವಾಗಿದೆ. ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವವು ಈ ಬಾರಿ ಭಕ್ತಿ, ಶಿಸ್ತಿನ ವ್ಯವಸ್ಥೆ ಹಾಗೂ ಆರ್ಥಿಕ ಸಂಗ್ರಹದ ದೃಷ್ಟಿಯಿಂದ ಇತಿಹಾಸ ನಿರ್ಮಿಸಿದೆ ಎಂದು ಜಿಲ್ಲಾಡಳಿತದಿಂದ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page