Tuesday, November 25, 2025

ಸತ್ಯ | ನ್ಯಾಯ |ಧರ್ಮ

ಮೆಕ್ಕೆಜೋಳ ಬೆಲೆಯ ಏರಿಕೆ, ಖರೀದಿ ಕೇಂದ್ರಗಳ ಆರಂಭಕ್ಕೆ ರೈತರ ಹೋರಾಟ

ಹಾಸನ : ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರು ಇಂದು ಹಾಸನದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಮೆಕ್ಕೆಜೋಳ ಬೆಂಬಲ ಬೆಲೆಯನ್ನು 600 ರೂ. ಹೆಚ್ಚಿಸಿ 3000 ರೂ. ಮಾಡಬೇಕು ಹಾಗೂ ತಕ್ಷಣ ಸರ್ಕಾರಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಹೋಗಿ, ಸರ್ಕಾರಕ್ಕೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ಗ್ರಾಮಾಂತರ ಪ್ರದೇಶಗಳಿಂದಲೂ ಹಲವು ರೈತರು ಆಗಮಿಸಿದ್ದರು. ಮಾರುಕಟ್ಟೆಯಲ್ಲಿ ಬೆಳೆ ಬೇಗನೆ ಹಾಳಾಗುವ ಭಯ, ವ್ಯಾಪಾರಿಗಳ ಇಚ್ಛೆಮಾತಿನ ದರ ಹಾಗೂ ಸರ್ಕಾರದ ಖರೀದಿ ಕೇಂದ್ರಗಳ ವಿಳಂಬ — ಈ ಸಮಸ್ಯೆಗಳನ್ನು ಪರಿಹರಿಸುವಂತೆ ರೈತರು ಪ್ರತಿಭಟಿಸಿದರು.


ರೈತ ಮುಖಂಡ ಕಣಗಾಲ್ ಮೂರ್ತಿ ಮಾತನಾಡಿ, 2400 ರೂ. MSP ನಮ್ಮ ಉತ್ಪಾದನಾ ವೆಚ್ಚವನ್ನೂ ಮುಚ್ಚುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ 3000 ರೂ. ಬೆಂಬಲ ಬೆಲೆ ರೈತರಿಗೆ ಜೀವದಂಡ ಎಂದು ಬೇಡಿಕೆ ಸಲ್ಲಿಸಿದರು. ಖರೀದಿ ಕೇಂದ್ರಗಳು ಎಲ್ಲೆಡೆ ಆರಂಭವಾಗದಿರುವುದರಿಂದ ರೈತರು ತಮ್ಮ ಬೆಳೆಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ, MSP 3000 ರೂ.ಗೆ ಏರಿಕೆ, ತಕ್ಷಣ ಖರೀದಿ ಕೇಂದ್ರಗಳ ಆರಂಭ, ಬೆಳೆ ನಷ್ಟ ಪರಿಹಾರ ತಕ್ಷಣ ಬಿಡುಗಡೆ, ಮಾರುಕಟ್ಟೆ ದುರೋಪಯೋಗಕ್ಕೆ ನಿಯಂತ್ರಣ ಇವುಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಂಜು ಬಿಟ್ಟಗೌಡನಹಳ್ಳಿ, ಪ್ರಕಾಶ್ ಮರ್ಕುಲಿ, ಶಿವಕುಮಾರ್, ಬುವನೇಶ್, ಮನು ಕಿರಗಾಡಲು, ಮಗ್ಗೆ ಪ್ರಕಾಶ್, ಹಾಲಪ್ಪ ಹಾಗೂ ಇತರರು ರೈತರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page