Wednesday, December 3, 2025

ಸತ್ಯ | ನ್ಯಾಯ |ಧರ್ಮ

ಸಾರಿಗೆ ಇಲಾಖೆಯಿಂದ ಆರ್​ಸಿ – ಡಿಎಲ್​ ಹೊಸ‌ ಸ್ಮಾರ್ಟ್ ಕಾರ್ಡ್​ಗೆ ಚಾಲನೆ

ಬೆಂಗಳೂರು : ಒಂದು ಸ್ಕ್ಯಾನ್​ನಲ್ಲಿ ಮಾಹಿತಿ ಸಿಗುವಂತೆ ಡ್ರೈವಿಂಗ್​ ಲೈಸೆನ್ಸ್ (Driving Licence) ಹಾಗೂ RC ಕಾರ್ಡ್ (RC Card)​ ವಿತರಣೆಯನ್ನ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಆರ್​ಸಿ ಮತ್ತು ಡಿಎಲ್​​ ಕಾರ್ಡ್ ಮತ್ತಷ್ಟು ಹೈಟೆಕ್ (HighTech) ಆಗಲಿದೆ. ಒನ್ ನೇಷನ್, ಒನ್ ಕಾರ್ಡ್ (One Nation One Card) ಅಡಿಯಲ್ಲಿ ಸಾರಿಗೆ ಇಲಾಖೆಯಿಂದ (Transport Department) ಆರ್​ಸಿ – ಡಿಎಲ್​ ಹೊಸ‌ ಸ್ಮಾರ್ಟ್ ಕಾರ್ಡ್​ಗೆ ಚಾಲನೆ ನೀಡಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೊಸ RC ಸ್ಮಾರ್ಟ್ ಕಾರ್ಡ್ ಚಾಲನೆ ನೀಡಿದ್ದಾರೆ.

ಕಾರ್ಡ್​ನಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಹೊಸ ಕಾರ್ಡ್​ಗೆ ಚಾಲನೆ ಕೊಟ್ಟ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಅರ್ಜಿ ಸಲ್ಲಿಸದವರಿಗೆ ಹೊಸ ಅರ್ಜಿ ಸಲ್ಲಿಸದವರಿಗೆ ಹೊಸ  RC ಸ್ಪಾರ್ಟ್​ ಕಾರ್ಡ್​ ಸಿಗಲಿದೆ. ಹೊಸ ಕಾರ್ಡ್​ನಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಕ್ಯೂಆರ್​​ ಕೋಡ್​ ಸ್ಕ್ಯಾನ್​ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಒಂದು ಕಾರ್ಡ್​ಗೆ ₹200 ಫಿಕ್ಸ್​​

ಹೈಟೆಕ್​ ಸ್ಪರ್ಶ ಪಡೆದಿರುವ ಕಾರ್ಡ್​ಗೆ ಸಾರಿಗೆ ಇಲಾಖೆ ಒಂದು ಕಾರ್ಡ್​ಗೆ 200 ರೂ ಶುಲ್ಕ ವಿಧಿಸಿದೆ. ಈ ಪೈಕಿ 135 ರೂ ಸರ್ಕಾರಕ್ಕೆ ಹೊದರೆ 64.46 ಸೇವಾದಾರರ ಪಾಲಾಗಲಿದೆ. ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗುತ್ತಿದ್ದು, ಒಂದು ಗಂಟೆಗೆ 500-600 ಕಾರ್ಡ್ ಪ್ರಿಂಟ್​ ಮಾಡಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page