Sunday, January 18, 2026

ಸತ್ಯ | ನ್ಯಾಯ |ಧರ್ಮ

ಕಾರವಾರ ಜೆಡಿಎಸ್ ಮುಖಂಡನ ಕಿರುಕುಳ ಯುವತಿ ಬಲಿ – ಪಿಎಸ್‌ಐ ಸಸ್ಪೆಂಡ್

ಕಾರವಾರ : ಕಾರವಾರದ (Karwar) ಜೆಡಿಎಸ್ ಮುಖಂಡೆಯ (Jds Leader) ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ (Crime) ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಮೇಲೆ ಕದ್ರಾ ಠಾಣೆ ಪಿಎಸ್‌ಐ ಸುನೀಲ್ ಎಂಬುವವರನ್ನು ಅಮಾನತು (Police suspend) ಮಾಡಲಾಗಿದೆ.

ಜೆಡಿಎಸ್ ಮುಖಂಡೆಯ ಪುತ್ರನ ಚಿರಾಗ್ ಎಂಬಾತನನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖೆ ನೇರವಾಗಿ ಪಿಎಸ್ಐ ಸುನೀಲ್ ಎಂಬುವವರು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಇತ್ತೀಚೆಗಷ್ಟೇ ರೀನಾ ಹಾಗೂ ಕ್ರಿಸ್ತೋದ್ ಡಿಸೋಜಾ ಪುತ್ರಿ ರಿಶೇಲ್ ಡಿಸೋಜಾ‌ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುರು ದಾಖಲಾದ ಮರುದಿನವೇ CPI ಗೆ ಕೇಸ್ ಹಸ್ತಾಂತರವಾಗಿತ್ತು. ಆದರೆ ಇದೀಗ ಆರೋಪಿ ಚಿರಾಗ್ ನನ್ನ ಬಂದಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೇ ಹಲವು ಪ್ರಭಾವಿ ರಾಜಕಾರಣಿಗಳ, ಸಂಘ ಸಂಸ್ಥೆಗಳಿಂದ ಒತ್ತಡ ಕೂಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನಲೆ ನೇರವಾಗಿ ಪಿಎಸ್ಐ ಸುನೀಲ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಪೋಲಿಸ್ ಇಲಾಖೆ ಆದೇಶ ಹೊರಡಿಸಿದೆ. ಇತ್ತ ಯಾವುದೆ ತಪ್ಪು ಇಲ್ಲದೆ ಕರ್ತವ್ಯದಿಂದ PSI ಅಮಾನತು ಮಾಡಲಾಗಿದೆ.

ಏನಿದು ವಿವರ

ಜೆಡಿಎಸ್ ಮುಖಂಡೆಯೊಬ್ಬರ ಪುತ್ರ ಚಿರಾಗ್ ಎಂಬಾತ ಪ್ರೀತಿ ಹೆಸರಲ್ಲಿ ದಿನನಿತ್ಯ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ರಿಶೇಲ್ ಡಿಸೋಜಾ‌ ಜ.9 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page