10ರೂ ಚಿಲ್ಲರೆಗೆ ಗ್ರಾ ಮಾಜಿ ಸದಸ್ಯನ ಕೊ* ಕೇಸ್, 6 ಜನ ಅರೆಸ್ಟ್‌

ರಾಯಚೂರು : ಜಿಲ್ಲೆಯ (Raichur) ಹಂಚಿನಾಳ ಕ್ಯಾಂಪ್ ವ್ಯಾಪ್ತಿಯ ಪೆಟ್ರೋಲ್ ಬಂಕ್ (Petrol bunk) ಒಂದರಲ್ಲಿ 10 ರೂಪಾಯಿ ವಿಚಾರಕ್ಕೆ ನಡೆದ ವಾಗ್ವಾದ ಭೀಕರ ಕೊಲೆಯಲ್ಲಿ (Crime) ಅಂತ್ಯವಾಗಿದೆ. ಮಹೇಶ್ ಹಾಗೂ ನಾಗರಾಜ್ ಎಂಬ ವ್ಯಕ್ತಿಗಳು ಬಾಟಲಿಯಲ್ಲಿ 110/- ಗೆ ಇಂಧನ ಪಡೆದು ನೂರು ರೂಪಾಯಿ ಪಾವತಿಸಿದ್ದು, ಉಳಿದ ಹತ್ತು ರೂಪಾಯಿ ಬಾಕಿಗಾಗಿ ಅಲ್ಲಿನ ನೌಕರರೊಂದಿಗೆ ತೀವ್ರ ಮಾತಿನ ಚಕಮಕಿ ಆರಂಭವಾಗಿತ್ತು.

ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದ ಗಿಲ್ಲೆಸುಗೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ 42 ವರ್ಷದ ಮೇಘನಾಥ್ ಎಂಬುವವರ ಮೇಲೆ ಬಂಕ್ ಸಿಬ್ಬಂದಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಘರ್ಷಣೆಯ ಪರಿಣಾಮವಾಗಿ ಅವರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದು, ಈ ಇಡೀ ರಕ್ತಪಾತದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಪನೂರು ಠಾಣೆಯ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್ ಮತ್ತು ಪ್ರವೀಣ್ ಎಂಬ ಆರು ಮಂದಿ ಸಿಬ್ಬಂದಿಯನ್ನು ಸದ್ಯ ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು, ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು