ಜಾರ್ಖಂಡ್‌ನಲ್ಲಿ ಕೊನೆಯ ಮಾವೋವಾದಿ ಅಗ್ರನಾಯಕನ ಬಂಧನ; ನಾಲ್ವರು ಸಹಚರರೂ ವಶಕ್ಕೆ

ಮಾವೋವಾದಿ ಪಕ್ಷದ ಪೊಲಿಟ್ ಬ್ಯುಸೊ ಸದಸ್ಯ ಹಾಗೂ ಕೊನೆಯ ಮಾವೋವಾದಿ ಅಗ್ರನಾಯಕ ಬಿಸ್ರಾ ಮತ್ತು ಆತನ ನಾಲ್ವರು ಸಹಚರರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.

ಮಿಸಿರ್ ಬಿಸ್ರಾ ಅಲಿಯಾಸ್ ಭಾಸ್ಕರ್ ಅಲಿಯಾಸ್ ಸಾಗರ್ ಪ್ರಸ್ತುತ ಮಾವೋವಾದಿ ಪಕ್ಷದ ಕೇಂದ್ರ ಸಮಿತಿಯಲ್ಲಿ ಪೊಲಿಟ್ ಬ್ಯುಸೊ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಎಡಪಂಥೀಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಗಿರಿದಿಹ್ ಜಿಲ್ಲೆಗೆ ಸೇರಿದ ಬಿಸ್ರಾನನ್ನು ಕೇಂದ್ರ ಭದ್ರತಾ ಪಡೆಗಳು ಮತ್ತು ಜಾರ್ಖಂಡ್ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಭಾಗವಾಗಿ ಧನ್‌ಬಾದ್ ಜಿಲ್ಲೆಯ ಏಜೆನ್ಸಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಧೃಡಪಡಿಸಲಾಗಿದೆ.

ಬಿಸ್ರಾ ವಿರುದ್ಧ ಇದುವರೆಗೆ ವಿವಿಧ ರಾಜ್ಯಗಳಲ್ಲಿ 154 ಕ್ರಿಮಿನಲ್ ಪ್ರಕರಣಗಳಿದ್ದು, ಆತನ ಮೇಲೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು