ಹಾಸನ : ಬಾಕಿ ಇರುವ ಎನ್ಯೂಮರೇಷನ್ ನಮೂನೆಗಳನ್ನು ಕೂಡಲೆ ಹಿಂದಿರುಗಿಸಬೇಕು – ಜಿಲ್ಲಾಧಿಕಾರಿ ಲತಾ ಕುಮಾರಿ

ಹಾಸನ : ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಡಿ ಶೇ.100ರಷ್ಟು ಎನ್ಯೂಮರೇಷನ್ ನಮೂನೆಗಳನ್ನು ವಿತರಿಸಲಾಗಿದ್ದು, ಶೇ.97ರಷ್ಟು ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಉಳಿದ ಶೇ.3ರಷ್ಟು, ಅಂದರೆ ಸುಮಾರು 52 ಸಾವಿರ ಎನ್ಯೂಮರೇಷನ್ ನಮೂನೆಗಳನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಹಿ ಮಾಡಿ ಇಂದೇ ಮತಗಟ್ಟೆ ಅಧಿಕಾರಿಗಳಿಗೆ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಮತದಾರರು ಆಗಸ್ಟ್ 8ರವರೆಗೆ ಸಮಯವಿದೆ ಎಂದು ಭಾವಿಸಿ ಕೊನೆಯ ಕ್ಷಣದವರೆಗೂ ಕಾಯಬಾರದು. ಮನೆಯಲ್ಲಿರುವ ಎಲ್ಲ ವಯಸ್ಕರು ತಮ್ಮ ಎನ್ಯೂಮರೇಷನ್ ನಮೂನೆಗಳನ್ನು ಭರ್ತಿ ಮಾಡಿ, ಕಡ್ಡಾಯವಾಗಿ ಸಹಿ ಮಾಡಿ, ತಮ್ಮ ಹೆಸರನ್ನು ನಮೂದಿಸಿ ಕೂಡಲೇ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಮತಗಟ್ಟೆ ಅಧಿಕಾರಿಗಳಿಗೆ ನಮೂನೆಗಳ ಪರಿಶೀಲನೆ ಹಾಗೂ ಇತರೆ ತಾಂತ್ರಿಕ ಕಾರ್ಯಗಳೂ ಇರುವುದರಿಂದ ಕೊನೆಯ ದಿನದವರೆಗೆ ಕಾಯುವುದರಿಂದ ಕೆಲಸದ ಒತ್ತಡ ಹೆಚ್ಚಾಗಲಿದೆ. ಆದ್ದರಿಂದ ಸಾರ್ವಜನಿಕರು ತ್ವರಿತವಾಗಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು