ಪೆಲೆಟ್ ಗನ್ ಬಳಕೆಯಿಂದ ಸಿಜೆಪಿ ಪ್ರತಿಭಟನೆಯ ವೇಳೆ 10 ಮಂದಿಗೆ ಗಾಯ: ಆರ್‌ಟಿಐ ವರದಿಯಿಂದ ಬಹಿರಂಗ

ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಜುಲೈ 20 ರಂದು ಹಮ್ಮಿಕೊಂಡಿದ್ದ ಸಂಸತ್ ಚಲೋ ಮೆರವಣಿಗೆಯ ವೇಳೆ ಸಂಭವಿಸಿದ ಗಲಾಟೆಯಲ್ಲಿ ಪೋಲಿಸರು ನಡೆಸಿದ ಕಾರ್ಯಾಚರಣೆ ಕುರಿತು ಹೊಸ ಆರ್‌ಟಿಐ ಮಾಹಿತಿ ಹೊರಬಿದ್ದಿದೆ. ರ್ಯಾಲಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ, ಪೆಲೆಟ್ ಗನ್‌ಗಳನ್ನು (Pellet Guns) ಬಳಸಲಾಗಿತ್ತು.

ಈ ವೇಳೆ ಪೆಲೆಟ್‌ಗಳಿಂದಾಗಿ ಸುಮಾರು 10 ಮಂದಿಗೆ ಗಾಯಗಳಾಗಿವೆ ಎಂದು ಮಾಹಿತಿ ಹಕ್ಕು (RTI) ಅರ್ಜಿಯ ಮೂಲಕ ತಿಳಿದುಬಂದಿದೆ. ದೆಹಲಿಯ ಎರಡು ಆಸ್ಪತ್ರೆಗಳು ಈ ಕುರಿತು ಮಾಹಿತಿ ನೀಡಿವೆ. ಜುಲೈ 20 ರಂದು ನಡೆದ ಸಂಸತ್ ಮಾರ್ಚ್ ವೇಳೆ ಕನಿಷ್ಠ 10 ಮಂದಿಗೆ ಪೆಲೆಟ್ ಗಾಯಗಳಾಗಿರುವುದು ದೃಢಪಟ್ಟಿದೆ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೆತ್ ಗೋಖಲೆ ತಿಳಿಸಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ 9 ಮಂದಿ ಪೆಲೆಟ್ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜು ವರದಿಯಲ್ಲಿ ತಿಳಿಸಿದೆ. ಇನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಒಬ್ಬರು ಪೆಲೆಟ್ ಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಆರ್‌ಟಿಐ ವರದಿಯ ಪ್ರಕಾರ, ಪೆಲೆಟ್ ಗಾಯಗಳ ಕುರಿತು ಏಮ್ಸ್ (AIIMS) ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗಳ ಸಂಪೂರ್ಣ ವಿವರಗಳು ಇನ್ನಷ್ಟೇ ಬರಬೇಕಿದೆ. ಪೆಲೆಟ್ ಗನ್‌ಗಳ ಬಳಕೆಯ ಕುರಿತು ಪ್ರಸ್ತುತ ತೀವ್ರ ಚರ್ಚೆಗಳು ನಡೆಯುತ್ತಿವೆ. ದೆಹಲಿ ಪೋಲಿಸರು ತಾವು ಪೆಲೆಟ್‌ಗಳನ್ನು ಬಳಸಿಲ್ಲ ಎಂದು ಹೇಳಿದ್ದಾರಾದರೂ, ಆರ್‌ಪಿಎಫ್ ನೇತೃತ್ವದ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಪೆಲೆಟ್‌ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ.

ಈ ಪೆಲೆಟ್ ಗನ್‌ಗಳ ವಿಷಯದಲ್ಲೂ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಿಜೆಪಿ ಪ್ರತಿಭಟನಾಕಾರರನ್ನು ತಡೆಯಲು ರ್ಯಾಪಿಡ್ ಆಕ್ಷನ್ ಫೋರ್ಸ್ 55 ರೌಂಡ್ ನಾನ್-ಎಲೆಕ್ಟ್ರಿಕಲ್ ಶೆಲ್‌ಗಳು, 15 ರೌಂಡ್ ಎಲೆಕ್ಟ್ರಿಕಲ್ ಶೆಲ್‌ಗಳು, 5 ಅಶ್ರುವಾಯು ಗ್ರೆನೇಡ್‌ಗಳು, ಎರಡು ರೌಂಡ್ ಆಂಟಿ-ರಯೋಟ್ ಗನ್‌ಗಳು ಹಾಗೂ ಎರಡು ರೌಂಡ್ ಪ್ಲಾಸ್ಟಿಕ್ ಪೆಲೆಟ್‌ಗಳನ್ನು ಬಳಸಿದೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು