ಡಿಜಿಟಲ್ ಅರೆಸ್ಟ್ ದೇಶಾದ್ಯಂತ 30,000 ಕೋಟಿ ಸೈಬರ್ ವಂಚನೆ – ಜಾಲ ಭೇದಿಸಿದ ED

ಮುಂಬೈ : ಕೇವಲ ಒಂದು ಫೋನ್ ಕರೆ ಅಥವಾ ವಿಡಿಯೋ ಕರೆಯ ಮೂಲಕ ಪೊಲೀಸರು, ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಹೆದರಿಸಿ ಲಕ್ಷಾಂತರ ರೂಪಾಯಿ ದೋಚುವ ಡಿಜಿಟಲ್ ಅರೆಸ್ಟ್ ಜಾಲಗಳ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗೆಯೇ, ಡಿಜಿಟಲ್ ಅರೆಸ್ಟ್ ಮೂಲಕ ದೇಶಾದ್ಯಂತ ಹಲವು ಜನರನ್ನ ಕೋಟಿ ಕೋಟಿ ವಂಚಿಸಿದ್ದ ದೊಡ್ಡ ಮಟ್ಟದ ಸೈಬರ್ ದಂಧೆ ಎಂದು ಹೇಳಲಾದ ಬೃಹತ್ ಜಾಲವನ್ನು ಜಾರಿ ನಿರ್ದೇಶನಾಲಯ ಭೇದಿಸಿದೆ. ಅದರಂತೆ, ಸುಮಾರು ₹30,000 ಕೋಟಿ ಮೌಲ್ಯದ ಬೃಹತ್ ಸೈಬರ್ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ED ಇಬ್ಬರನ್ನು ಬಂಧಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಡಿಜಿಟಲ್ ಅರೆಸ್ಟ್‌ ಹೆಸರಿನಲ್ಲಿ, ಗೋವಾದ ಮಹಿಳೆಯೊಬ್ಬರನ್ನು ವಂಚಕರು ಬೆದರಿಸಿ, ‘ಸೀಕ್ರೆಟ್ ಸೂಪರ್‌ವಿಷನ್ ಅಕೌಂಟ್‌ಗಳಿಗೆ’ ₹2.60 ಕೋಟಿ ಹಣವನ್ನು ವರ್ಗಾಯಿಸಿಕೊಂಡಿದ್ದರು. ಈ ದೂರಿನ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದಾಗ ಈ ಬೃಹತ್ ಜಾಲ ಪತ್ತೆಯಾಗಿದ್ದು,  ಫಹೀಮ್ ಮೊಯಿನ್ ಹುಸೇನ್ ಸಯ್ಯದ್ ಮತ್ತು ನಯೀಮ್ ಮುಯೀನ್ ಸಯ್ಯದ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಾಲಗಿದೆ. ಅದರಂತೆ,  ಈ ಸೈಬರ್ ಅಪರಾಧಿಗಳ ಜಾಲವು ಸುಮಾರು ₹27,000 ಕೋಟಿ ಬ್ಯಾಂಕ್ ವಹಿವಾಟು ಮತ್ತು ₹3,000 ಕೋಟಿ ನಗದು ವ್ಯವಹಾರ ನಡೆಸಿರುವ ಶಂಕೆಯನ್ನು ಇಲಾಖೆ ವ್ಯಕ್ತಪಡಿಸಿದೆ.

ಏತನ್ಮಧ್ಯೆ, ಈ ಜಾಲದ ವಿರುದ್ಧ ಈಗಾಗಲೇ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 150 ಕ್ಕೂ ಹೆಚ್ಚು ಎಫ್‌ಐಆರ್‌ಗಳು ಹಾಗೂ 300 ಕ್ಕೂ ಹೆಚ್ಚು ಸಂತ್ರಸ್ತರ ದೂರುಗಳು ದಾಖಲಾಗಿವೆ. ಅದರಂತೆ, ಸಾರ್ವಜನಿಕರಿಂದ ನೇರವಾಗಿ ಸುಮಾರು ₹4,000 ಕೋಟಿ ಲೂಟಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು, ವಂಚನೆಯ ಹಣವನ್ನು ವರ್ಗಾಯಿಸಲು ಇವರು ಹಲವು ನಕಲಿ (ಶೆಲ್) ಕಂಪನಿಗಳನ್ನು ಸೃಷ್ಟಿಸಿದ್ದರು. ಸಿಂಗಲ್ ರೂಮ್‌ಗಳಲ್ಲಿ ವಾಸಿಸುವ ಬಡ ಚಾಲಕರು ಮತ್ತು ಸಾಮಾನ್ಯ ಉದ್ಯೋಗಿಗಳನ್ನು ಈ ಕಂಪನಿಗಳ ನಿರ್ದೇಶಕರನ್ನಾಗಿ ಮಾಡಿ ಹಣದ ಆಟವಾಡುತ್ತಿದ್ದರು ಎನ್ನಲಾಗಿದೆ.

ನಕಲಿ ಬ್ಯಾಂಕ್ ಅಕೌಂಟ್ ಮೂಲಕ ವಿದೇಶಕ್ಕೆ ಹಣ?

ವಂಚಕರು, ವಂಚಿಸಿದ ಹಣವನ್ನು ಮೊದಲು ಬೇರೆಯವರ ಹೆಸರಿನ ನಕಲಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿತ್ತು. ಆ, ಬಳಿಕ ಎಟಿಎಂ ಹಾಗೂ ಕ್ಯಾಶ್ ಡೆಪಾಸಿಟ್ ಯಂತ್ರಗಳ ಮೂಲಕ ಈ ಹಣವನ್ನು ನಗದಾಗಿ ಹಿಂಪಡೆಯಲಾಗುತ್ತಿತ್ತು. ಕೊನೆಯದಾಗಿ ಆರ್‌ಬಿಐ ಪರವಾನಗಿ ಪಡೆದ ಮನಿ ಚೇಂಜರ್‌ಗಳ ಮೂಲಕ ಈ ಭಾರತೀಯ ರೂಪಾಯಿಗಳನ್ನು ವಿದೇಶಿ ಕರೆನ್ಸಿಗೆ ಪರಿವರ್ತಿಸಿ ಸಾಗಿಸಲಾಗುತ್ತಿತ್ತು.

Related Articles

ಇತ್ತೀಚಿನ ಸುದ್ದಿಗಳು