ನವದೆಹಲಿ: 2020-21 ರಿಂದ 2024-25 ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ದೇಶದ 23 ಐಐಟಿಗಳಲ್ಲಿ (IIT) ಒಟ್ಟು 45 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ 28 ವಿದ್ಯಾರ್ಥಿಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.ಇವರಲ್ಲಿ 12 ಮಂದಿ ಒಬಿಸಿ, 9 ಮಂದಿ ಎಸ್‌ಸಿ ಮತ್ತು 7 ಮಂದಿ ಎಸ್‌ಟಿ ವರ್ಗದ ವಿದ್ಯಾರ್ಥಿಗಳು ಸೇರಿದ್ದಾರೆ.ಉಳಿದಂತೆ 16 ವಿದ್ಯಾರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ, ಒಬ್ಬರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) ಸೇರಿದವರಾಗಿದ್ದಾರೆ.
2023-24 ರ ಶೈಕ್ಷಣಿಕ ವರ್ಷದಿಂದ ಐಐಟಿಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿವೆ.2022-23 ರಲ್ಲಿ 6 ಸಾವುಗಳು ದಾಖಲಾಗಿದ್ದರೆ, 2023-24 ರಲ್ಲಿ ಈ ಸಂಖ್ಯೆ 16 ಕ್ಕೆ ಹಾಗೂ 2024-25 ರಲ್ಲಿ 13 ಕ್ಕೆ ಏರಿಕೆಯಾಗಿದೆ.ಈ ಐದು ವರ್ಷಗಳ ಅವಧಿಯಲ್ಲಿ ಐಐಟಿ-ಹೈದರಾಬಾದ್‌ನಲ್ಲಿ ಅತಿ ಹೆಚ್ಚು ಅಂದರೆ 7 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದಲ್ಲದೆ, ಐಐಟಿಗಳಲ್ಲಿ ಇದೇ ಐದು ವರ್ಷಗಳ ಅವಧಿಯಲ್ಲಿ ಪ್ರತ್ಯೇಕವಾಗಿ ಎಂಟು ಅಸಹಜ ಸಾವುಗಳು ಕೂಡ ದಾಖಲಾಗಿವೆ.
