ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ತಿರುಪ್ಪರಂಕುಂದ್ರಂ ಬೆಟ್ಟದ ದೀಪ ವಿವಾದ: ಸುಪ್ರೀಂ ಕೋರ್ಟ್ ಆದೇಶ, ತಮಿಳುನಾಡು ಸರ್ಕಾರದ ವಿರೋಧ; ಧರ್ಮ ಮತ್ತು ಸಂವಿಧಾನದ ನಡುವೆ ಸಂಘರ್ಷರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ (AI) ತಂತ್ರಜ್ಞಾನದ ಬಲ – ಸಿಎಸ್ ಡಾ. ಶಾಲಿನಿ ರಜನೀಶ್ಜಿಲ್ಲಾಧಿಕಾರಿ ವಿರುದ್ಧದ ಆರೋಪ – ಪೊಲೀಸ್ ನೋಟಿಸ್‌ಗೆ ಡೋಂಟ್‌ ಕೇರ್ ಎಂದ ಕುಮಾರಸ್ವಾಮಿಬಾಂಗ್ಲಾದೇಶಕ್ಕೆ ಶೇಖ್ ಹಸೀನಾ: ಭಾರತದಿಂದ ವಾಪಸ್; ರಾಷ್ಟ್ರೀಯ ವಿಮಾನವೇ ಬೇಕೆಂಬ ಬೇಡಿಕೆ; ಬಂಧನಕ್ಕೆ ಸಿದ್ಧವಾಗಿರುವ ಸರ್ಕಾರ!ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ – ಒಂದೇ ವಾರದಲ್ಲಿ 744 ಕೇಸ್‌28 ಎಸೆತಗಳಲ್ಲಿ ಶತಕ, 15ನೇ ವಯಸ್ಸಿನಲ್ಲೇ ವಿಶ್ವದಾಖಲೆ: ವೈಭವ್ ಸೂರ್ಯವಂಶಿ ಎಂಬ ಕ್ರಿಕೆಟ್ ವಿಸ್ಮಯ!ಆಶಾ ಕಾರ್ಯಕರ್ತೆಯರ ಬೇಡಿಕೆ ಇಡೇರಿಸಿ ಇಲ್ಲವಾದರೆ ಕರ್ನಾಟಕ ಬಂದ್​​​ – ವಾಟಾಳ್‌ ನಾಗರಾಜ್‌ನ.26ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶವ್ಯಾಪಿ ಪ್ರತಿಭಟನೆ; ಮುಕ್ತ ವ್ಯಾಪಾರ ಒಪ್ಪಂದ ರದ್ದತಿಗೆ ಆಗ್ರಹಇಸ್ರೇಲ್ ದೇಶದಿಂದ ಶಸ್ತ್ರಾಸ್ತ್ರ ಖರೀದಿಗೆ ರಾಹುಲ್ ಗಾಂಧಿ ಬೆಂಬಲ: ಎಡಪಕ್ಷಗಳ ನಾಯಕರಿಂದ ಟೀಕೆಅಪ್ಪನನ್ನು ಕೊಲ್ಲಲೆಂದೇ ಸೆಕ್ಯುರಿಟಿ ತೆಗೆದುಹಾಕಲಾಗಿತ್ತು: ಅಂದಿನ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಆರೋಪಪಾಲಕ್ಕಾಡ್ ಶಾಲೆಯಲ್ಲಿ ಸಹಪಾಠಿಯಿಂದ ಗುಂಡಿನ ದಾಳಿ: 9ನೇ ತರಗತಿ ವಿದ್ಯಾರ್ಥಿಗೆ ಗಾಯ; ವಿದ್ಯಾರ್ಥಿ ವಶಕ್ಕೆಎರಡು ಮಕ್ಕಳಿರುವ ಹೆಂಗಸನ್ನು ಮದುವೆಯಾಗುವುದಾಗಿ ಹಟ ಹಿಡಿದ ಮಗನನ್ನು ಕೊಂದು ಮುಗಿಸಿದ ತಾಯಿಬೆಂಗಳೂರಿನ ಇತಿಹಾಸ, ಕಲೆ, ಸಾಹಿತ್ಯಕ್ಕೆ ಹೊಸ ವೇದಿಕೆ: ಡಿಸೆಂಬರ್ 4ರಿಂದ 10 ದಿನಗಳ ಬೆಂಗಳೂರು ಜಾತ್ರೆಕೆಪಿಎಸ್‌ಸಿ ನೇಮಕಾತಿ ಹಗರಣ: 384 ಕೆಎಎಸ್ ಅಧಿಕಾರಿಗಳ ಆಯ್ಕೆಯ ಮೇಲೂ ಅನುಮಾನದ ನೆರಳು; ತನಿಖೆಗೆ ಹೈಕೋರ್ಟ್ ಆದೇಶಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್ ಭರವಸೆಹಿಜಾಬ್ ನಿಯಮಕ್ಕೆ ಸೆಡ್ಡು ಹೊಡೆದ ಗಾಯಕಿಗೆ 74 ಚಡಿಯೇಟು; ಇರಾನ್‌ನಲ್ಲಿ ಕಠಿಣ ಶಿಕ್ಷೆಲಾಭ ಹೆಚ್ಚುತ್ತಿದೆ, ಉದ್ಯೋಗ ಮತ್ತು ವೇತನ ಏಕೆ ಹೆಚ್ಚುತ್ತಿಲ್ಲ? ಉದ್ಯಮ ವಲಯಕ್ಕೆ ಪ್ರಧಾನಿ ಮೋದಿ ನೇರ ಪ್ರಶ್ನೆಸಮತಾವಾದಿ ಬಸವ ಸಿದ್ದಾಂತದ ಮೇಲೆ ಸನಾತನಿಗಳ ದಾಳಿಯೆಮನ್‌ನಲ್ಲಿ ಸೌದಿ ಅರೇಬಿಯಾದ ವೈಮಾನಿಕ ದಾಳಿ: 25 ಮಂದಿ ಸಾವು ಅಥವಾ ನಾಪತ್ತೆ; ಆರು ಜನರಿಗೆ ಗಾಯಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ, ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?

ಹಿರಿಯ ನಟ ಅನಂತ್ ನಾಗ್‌ಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗರಿ: ಕರ್ನಾಟಕಕ್ಕೆ ಸಂದ 3ನೇ ಗೌರವ

PPeepal Media

Peepal Media ಸಿನಿಮಾ

• 1 ನಿಮಿಷದ ಓದು

ಹಿರಿಯ ನಟ ಅನಂತ್ ನಾಗ್‌ಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗರಿ: ಕರ್ನಾಟಕಕ್ಕೆ ಸಂದ 3ನೇ ಗೌರವ

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ನಟನೆಯ ಮೂಲಕ ಛಾಪು ಮೂಡಿಸಿರುವ ಖ್ಯಾತ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದಿದೆ. ಈ ತಿಂಗಳ 22ರಂದು ಗುಜರಾತ್‌ನ ಏಕ್ತಾನಗರದಲ್ಲಿ (ಕೇವಾಡಿಯಾ) ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುತ್ತದೆ.

ಈ ಮೂಲಕ ಡಾ. ರಾಜ್‌ಕುಮಾರ್ (1995) ಮತ್ತು ಖ್ಯಾತ ಛಾಯಾಗ್ರಾಹಕ ವಿ.ಕೆ. ಮೂರ್ತಿ (2008) ಅವರ ನಂತರ ಕರ್ನಾಟಕದಿಂದ ಈ ಮಹೋನ್ನತ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಅನಂತ್ ನಾಗ್ ಭಾಜನರಾಗಿದ್ದಾರೆ. ಇವರಿಗೆ 2025ರಲ್ಲಿ ಪದ್ಮಭೂಷಣ ಗೌರವವೂ ಸಂದಿತ್ತು.

1948 ಸೆಪ್ಟೆಂಬರ್ 4 ರಂದು ಜನಿಸಿದ ಅನಂತ್ ನಾಗ್, ರಂಗಭೂಮಿಯ ಮೂಲಕ ತಮ್ಮ ಅಭಿನಯ ಯಾನ ಆರಂಭಿಸಿ ಕಾಲೇಜು ದಿನಗಳಲ್ಲೇ 50ಕ್ಕೂ ಹೆಚ್ಚು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದರು. ‘ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು, ಇದುವರೆಗೆ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1970ರ ದಶಕದಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ‘ಅಂಕುರ್’, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಕಲಿಯುಗ್’ ಮುಂತಾದ ಸಮಾಂತರ ಚಿತ್ರಗಳಲ್ಲಿನ ಅವರ ನೈಜ ಮತ್ತು ಆಳವಾದ ಅಭಿನಯ ರಾಷ್ಟ್ರಮಟ್ಟದಲ್ಲಿ ಅಪಾರ ಮನ್ನಣೆ ತಂದುಕೊಟ್ಟಿತು.

ಕನ್ನಡದಲ್ಲಿ ‘ಹಂಸಗೀತೆ’, ‘ಮಿಂಚಿನ ಓಟ’, ‘ಬಾರಾ’, ‘ಚಂದನದ ಗೊಂಬೆ’, ‘ನಾ ನಿನ್ನ ಬಿಡಲಾರೆ’, ‘ಬಯಲು ದಾರಿ’, ‘ಹೊಸ ನೀರು’, ‘ಅವಸ್ಥೆ’ ಸೇರಿದಂತೆ ‘ಗಣೇಶನ ಮದುವೆ’, ‘ಗೌರಿ ಗಣೇಶ’ ಮುಂತಾದ ಹಾಸ್ಯಪ್ರಧಾನ ಚಿತ್ರಗಳು ಇವರ ವೃತ್ತಿಜೀವನದ ಮೈಲಿಗಲ್ಲುಗಳಾಗಿವೆ. ಸಹೋದರ ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಅನಂತ್ ನಾಗ್, ಗಂಭೀರ, ನಾಯಕ, ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ.

ನಾಲ್ಕು ಬಾರಿ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ, ಫಿಲ್ಮ್‌ಫೇರ್, ರಾಜ್ಯೋತ್ಸವ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು 2023ರಲ್ಲಿ ಬೆಳ್ಳಿಪರದೆಯಲ್ಲಿ 50 ವರ್ಷ ಪೂರೈಸಿದ್ದರು. ನಟನೆಯಷ್ಟೇ ಅಲ್ಲದೆ, 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ 1994ರಿಂದ 1999ರವರೆಗೆ ಮಲ್ಲೇಶ್ವರಂ ಶಾಸಕರಾಗಿ ಮತ್ತು ಸಚಿವರಾಗಿಯೂ ಜನಸೇವೆ ಸಲ್ಲಿಸಿದ್ದಾರೆ.

PPeepal Media

Peepal Media

Peepal Media · ಸಿನಿಮಾ ವಿಭಾಗ

ಸಂಬಂಧಿತ ಸುದ್ದಿಗಳು