ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಮಂಗನ ಕಾಯಿಲೆ ಸಾವಿನ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ NHRC ನೋಟಿಸ್, ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲು ಸೂಚನೆಕರ್ನಾಟಕದಲ್ಲಿ ಈ 4 ದಿನ ಹವಾಮಾನ ಎಚ್ಚರಿಕೆ: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಬೆಂಗಳೂರಿಗೂ ಸಿಡಿಲಿನ ಮುನ್ಸೂಚನೆನವೆಂಬರ್‌ನಲ್ಲಿ ಕನ್ನಡ ಸಿನಿ ಪ್ರೇಮಿಗಳಿಗೆ ಹಬ್ಬ; ಒಂದೇ ತಿಂಗಳಲ್ಲಿ 8 ಹೊಸ ಚಿತ್ರಗಳ ಬಿಡುಗಡೆಗೆ ಸಿದ್ಧತೆ!ಪಂಜಾಬ್‌: ಆಮ್‌ ಆದ್ಮಿ ಪಕ್ಷದಿಂದ ಬಿಜೆಪಿಗೆ ಜಂಪ್‌ ಮಾಡಿದ ಮೂವರು ಶಾಸಕರುಭಾರತದ NavIC ವ್ಯವಸ್ಥೆಗೆ ಮತ್ತಷ್ಟು ಬಲ: NVS-03 ಉಪಗ್ರಹ ಯಶಸ್ವಿಯಾಗಿ ಉಡಾವಣೆ; ಜನರಿಗೆ ಇದರಿಂದ ಏನು ಪ್ರಯೋಜನ?ಬಿಡುಗಡೆಗೂ ಮುನ್ನವೇ ₹75 ಕೋಟಿ ಮುಂಗಡ ಬುಕ್ಕಿಂಗ್ ದಾಖಲೆ; ‘ಅನಿಮಲ್’, ‘ಕೆಜಿಎಫ್-2’ ಚಿತ್ರಗಳನ್ನೇ ಹಿಂದಿಕ್ಕಿದ ‘ರಾಮಾಯಣ’!99. 32 ಲಕ್ಷ ಕನ್ನಡಿಗ ಮತದಾರರ ಹೆಸರು ಮಾಯ! ನಿಮ್ಮ Voter ID ಸೇಫ್‌ ಆಗಿದೆಯೇ? ಹೀಗೆ ಚೆಕ್ ಮಾಡಿ…ಮುಕ್ತ ವ್ಯಾಪಾರ ಒಪ್ಪಂದಗಳ ಲಾಭ ಪಡೆಯಲು ಕರ್ನಾಟಕದ ಉದ್ಯಮಿಗಳಿಗೆ ಸಚಿವ ಎಂ.ಬಿ. ಪಾಟೀಲ್ ಕರೆಜಿಎಸ್‌ಟಿ ಸುಧಾರಣೆ: ಚೇತರಿಕೆ ಕಾಣುತ್ತಾ ರಿಯಲ್ ಎಸ್ಟೇಟ್ ಕ್ಷೇತ್ರ?ದೀಪಾವಳಿ ಪಟಾಕಿ ಸಿಡಿಸಲು ಹೊಸ ನಿಯಮಾವಳಿ : ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮಜೀವಂತ ಇಲಿಯನ್ನು ಸುಟ್ಟ ಆರೋಪ: ಝಾನ್ಸಿಯಲ್ಲಿ ನಾಲ್ಕು ಮುಸ್ಲಿಂ ಯುವಕರ ವಿರುದ್ಧ ಎಫ್‌ಐಆರ್ಪೊಲೀಸ್‌ ಕಮಿಷನರ್‌ ಹೆಡ್‌ ಕಾನ್ಸ್ಟೇಬಲ್‌ಗಿಂತಲೂ ಕಡೆಯಾಗಿ ಹೇಳಿಕೆ ಕೊಡುತ್ತಿದ್ದಾರೆ: ಸಚಿವ ಕುಮಾರಸ್ವಾಮಿಕುತಂತ್ರಗಳ ಮೂಲಕ ಹಿರಿಯ ನಾಯಕರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ: ರಾಮಲಿಂಗಾ ರೆಡ್ಡಿರಾಹುಲ್‌ ಗಾಂಧಿಯನ್ನ ಪ್ರಧಾನಿಯಾಗಿಸುವ ಸೋನಿಯಾ ಕನಸು ಎಂದಿಗೂ ನಿಜವಾಗುವುದಿಲ್ಲ: ಅಮಿತ್‌ ಶಾಸಿದ್ದರಾಮಯ್ಯ ಸ್ಟಿಂಗ್ | ಕುಮಾರಸ್ವಾಮಿ ಮನೆಗೆ ಮೊಬೈಲ್ ತಲುಪಿತ್ತು: ಪ್ರಿಯಾಂಕ್ ಖರ್ಗೆ ಆರೋಪಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್: ಮಲೇಷ್ಯಾ ವಿರುದ್ಧ ಭಾರತಕ್ಕೆ 4–2 ಗೋಲುಗಳ ಗೆಲುವುಫ್ಲೋರಿಡಾದಲ್ಲಿ ಬಹಾಮಾಸ್‌ಗೆ ತೆರಳುತ್ತಿದ್ದ ಖಾಸಗಿ ವಿಮಾನ ಪತನ: ಒಂಬತ್ತು ಮಂದಿ ಸಾವುದೆಹಲಿಯಲ್ಲಿ ಇಂಡಿಯಾ ಒಕ್ಕೂಟದಿಂದ ಬೃಹತ್ ರ‍್ಯಾಲಿ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಮತದಾರರ ಪಟ್ಟಿಯಿಂದ ಮಹಿಳೆಯರು, ಯುವಕರ ಹೆಸರು ಹೆಚ್ಚು ಡಿಲೀಟ್: ಬೆಂಗಳೂರಿನಲ್ಲಿ ಅತಿ ಹೆಚ್ಚು ಬದಲಾವಣೆಆಂಧ್ರ ಕರಾವಳಿಯತ್ತ ಮುರಸು ಚಂಡಮಾರುತ: 120 ಕಿ.ಮೀ ವೇಗದ ಬಿರುಗಾಳಿ, ಭಾರಿ ಮಳೆ ಮುನ್ಸೂಚನೆ

ದೀಪಾವಳಿ ಪಟಾಕಿ ಸಿಡಿಸಲು ಹೊಸ ನಿಯಮಾವಳಿ : ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ದೀಪಾವಳಿ ಪಟಾಕಿ ಸಿಡಿಸಲು ಹೊಸ ನಿಯಮಾವಳಿ : ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗಬಹುದಾದ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಣದ ಜೊತೆಗೆ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಬೆಂಗಳೂರು ನಗರ ಪೊಲೀಸರು ಸೂಚನೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ಈ ಅವಧಿಯನ್ನು ಮೀರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಅನುಮತಿಸಲಾದ ಸಮಯದ ಹೊರತಾಗಿ ಪಟಾಕಿ ಸಿಡಿಸುವುದು, ಅಕ್ರಮವಾಗಿ ಪಟಾಕಿ ಮಾರಾಟ ಮಾಡುವುದು ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಸ್ಫೋಟಕ ಕಾಯ್ದೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪ್ರಮಾಣೀಕೃತ ಹಸಿರು ಪಟಾಕಿಗಳನ್ನೇ ಬಳಸಬೇಕು. ಅಕ್ರಮ ಪಟಾಕಿ ಮಾರಾಟ ಅಥವಾ ನಿಯಮಬಾಹಿರವಾಗಿ ಸಿಡಿಸುವ ಚಟುವಟಿಕೆಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಅಗ್ನಿ ಅವಘಡ ಮತ್ತು ಅನಾಹುತಗಳನ್ನು ತಪ್ಪಿಸಲು ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು, ಗ್ಯಾಸ್ ಕೇಂದ್ರಗಳು, ಧಾರ್ಮಿಕ ಕೇಂದ್ರಗಳು, ವೃದ್ಧಾಶ್ರಮಗಳು ಹಾಗೂ ಮಕ್ಕಳ ಆರೈಕೆ ಕೇಂದ್ರಗಳ ಸಮೀಪ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಪಟಾಕಿ ಬಳಸುವ ಸಂದರ್ಭದಲ್ಲಿ ಕೈಗಳಿಗೆ ಗ್ಲೌಸ್ ಮತ್ತು ಕಣ್ಣುಗಳಿಗೆ ರಕ್ಷಣಾತ್ಮಕ ಕನ್ನಡಕ ಧರಿಸುವುದರೊಂದಿಗೆ ಮುನ್ನೆಚ್ಚರಿಕೆ ವಹಿಸಬೇಕು. ಅಗ್ನಿ ಅವಘಡ ಎದುರಾದಲ್ಲಿ ತಕ್ಷಣ ಸ್ಪಂದಿಸಲು ನೀರು, ಮರಳು ಹಾಗೂ ಅಗ್ನಿಶಾಮಕ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮಕ್ಕಳು ಪೋಷಕರ ನೇರ ಮೇಲ್ವಿಚಾರಣೆಯಲ್ಲಿಯೇ ಪಟಾಕಿ ಸಿಡಿಸಬೇಕು. ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಡಿಮೆ ಶಬ್ದದ ಪಟಾಕಿಗಳಿಗೆ ಆದ್ಯತೆ ನೀಡಬೇಕು. ಯಾವುದೇ ಅನಾಹುತ ಸಂಭವಿಸಿದಲ್ಲಿ ತುರ್ತು ನೆರವಿಗಾಗಿ 112 ಅಥವಾ 108 ಸಹಾಯವಾಣಿಯನ್ನು ಸಂಪರ್ಕಿಸುವಂತೆ ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹಬ್ಬದ ಸಂಭ್ರಮದ ಹೆಸರಿನಲ್ಲಿ ಇತರರ ಆರೋಗ್ಯ, ನೆಮ್ಮದಿ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗದಂತೆ ಜವಾಬ್ದಾರಿಯುತವಾಗಿ ದೀಪಾವಳಿ ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು