ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
‘ಸೌಜನ್ಯ ಕೊಲೆ ಪ್ರಕರಣ’: 14 ವರ್ಷಗಳ ಬಳಿಕ ಹೊಸ ತನಿಖೆ; SIT ಮುಂದಿರುವ ಪ್ರಮುಖ ಪ್ರಶ್ನೆಗಳು!ಪಶ್ಚಿಮ ಬಂಗಾಳದಲ್ಲಿ ಚರ್ಚ್ ಉದ್ಘಾಟನೆ ವೇಳೆ ದಾಂಧಲೆ: ಬಿಷಪ್, ಪಾದ್ರಿಗಳು ಮತ್ತು ಭಕ್ತರ ಮೇಲೆ ಹಲ್ಲೆಪತ್ರಿಕೆ, ಟಿವಿ, OTT, ಸೋಶಿಯಲ್ ಮೀಡಿಯಾಗಳಿಗೆ ಹೊಸ ನಿಯಂತ್ರಣ? ಮಾಧ್ಯಮ ಕಾನೂನುಗಳ ಪರಿಶೀಲನೆಗೆ ಮುಂದಾದ ಸಂಸದೀಯ ಸಮಿತಿರಾಜ್ಯ ಸರ್ಕಾರವಾಗಲಿ, ಅದರ ಅಧಿಕಾರಿಗಳಾಗಲಿ ನನ್ನನ್ನು ಮುಟ್ಟಲು ಸಾಧ್ಯವಿಲ್ಲ: ಎಚ್‌ ಡಿ ಕುಮಾರಸ್ವಾಮಿಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆ ಬರೆಯ ಸೂಚನೆ ಕೊಟ್ಟ ಸಚಿವ ಬೈರತಿಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ವಿವಾದಕ್ಕೆ ಹೊಸ ತಿರುವು: ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಜಾಡು; ನ್ಯಾಯಸಮ್ಮತ ತನಿಖೆಯಷ್ಟೆ ಪರಿಹಾರ!ಮಂಗನ ಕಾಯಿಲೆ ಸಾವಿನ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ NHRC ನೋಟಿಸ್, ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲು ಸೂಚನೆಕರ್ನಾಟಕದಲ್ಲಿ ಈ 4 ದಿನ ಹವಾಮಾನ ಎಚ್ಚರಿಕೆ: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಬೆಂಗಳೂರಿಗೂ ಸಿಡಿಲಿನ ಮುನ್ಸೂಚನೆನವೆಂಬರ್‌ನಲ್ಲಿ ಕನ್ನಡ ಸಿನಿ ಪ್ರೇಮಿಗಳಿಗೆ ಹಬ್ಬ; ಒಂದೇ ತಿಂಗಳಲ್ಲಿ 8 ಹೊಸ ಚಿತ್ರಗಳ ಬಿಡುಗಡೆಗೆ ಸಿದ್ಧತೆ!ಪಂಜಾಬ್‌: ಆಮ್‌ ಆದ್ಮಿ ಪಕ್ಷದಿಂದ ಬಿಜೆಪಿಗೆ ಜಂಪ್‌ ಮಾಡಿದ ಮೂವರು ಶಾಸಕರುಭಾರತದ NavIC ವ್ಯವಸ್ಥೆಗೆ ಮತ್ತಷ್ಟು ಬಲ: NVS-03 ಉಪಗ್ರಹ ಯಶಸ್ವಿಯಾಗಿ ಉಡಾವಣೆ; ಜನರಿಗೆ ಇದರಿಂದ ಏನು ಪ್ರಯೋಜನ?ಬಿಡುಗಡೆಗೂ ಮುನ್ನವೇ ₹75 ಕೋಟಿ ಮುಂಗಡ ಬುಕ್ಕಿಂಗ್ ದಾಖಲೆ; ‘ಅನಿಮಲ್’, ‘ಕೆಜಿಎಫ್-2’ ಚಿತ್ರಗಳನ್ನೇ ಹಿಂದಿಕ್ಕಿದ ‘ರಾಮಾಯಣ’!99. 32 ಲಕ್ಷ ಕನ್ನಡಿಗ ಮತದಾರರ ಹೆಸರು ಮಾಯ! ನಿಮ್ಮ Voter ID ಸೇಫ್‌ ಆಗಿದೆಯೇ? ಹೀಗೆ ಚೆಕ್ ಮಾಡಿ…ಮುಕ್ತ ವ್ಯಾಪಾರ ಒಪ್ಪಂದಗಳ ಲಾಭ ಪಡೆಯಲು ಕರ್ನಾಟಕದ ಉದ್ಯಮಿಗಳಿಗೆ ಸಚಿವ ಎಂ.ಬಿ. ಪಾಟೀಲ್ ಕರೆಜಿಎಸ್‌ಟಿ ಸುಧಾರಣೆ: ಚೇತರಿಕೆ ಕಾಣುತ್ತಾ ರಿಯಲ್ ಎಸ್ಟೇಟ್ ಕ್ಷೇತ್ರ?ದೀಪಾವಳಿ ಪಟಾಕಿ ಸಿಡಿಸಲು ಹೊಸ ನಿಯಮಾವಳಿ : ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮಜೀವಂತ ಇಲಿಯನ್ನು ಸುಟ್ಟ ಆರೋಪ: ಝಾನ್ಸಿಯಲ್ಲಿ ನಾಲ್ಕು ಮುಸ್ಲಿಂ ಯುವಕರ ವಿರುದ್ಧ ಎಫ್‌ಐಆರ್ಪೊಲೀಸ್‌ ಕಮಿಷನರ್‌ ಹೆಡ್‌ ಕಾನ್ಸ್ಟೇಬಲ್‌ಗಿಂತಲೂ ಕಡೆಯಾಗಿ ಹೇಳಿಕೆ ಕೊಡುತ್ತಿದ್ದಾರೆ: ಸಚಿವ ಕುಮಾರಸ್ವಾಮಿಕುತಂತ್ರಗಳ ಮೂಲಕ ಹಿರಿಯ ನಾಯಕರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ: ರಾಮಲಿಂಗಾ ರೆಡ್ಡಿರಾಹುಲ್‌ ಗಾಂಧಿಯನ್ನ ಪ್ರಧಾನಿಯಾಗಿಸುವ ಸೋನಿಯಾ ಕನಸು ಎಂದಿಗೂ ನಿಜವಾಗುವುದಿಲ್ಲ: ಅಮಿತ್‌ ಶಾ

ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆ ಬರೆಯ ಸೂಚನೆ ಕೊಟ್ಟ ಸಚಿವ ಬೈರತಿ

ಕರ್ನಾಟಕದಲ್ಲಿ ನವೆಂಬರ್ 5ರಿಂದ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಯಾಗಲಿದೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಹೊಸ ದರದ ಬಗ್ಗೆ ನವೆಂಬರ್ 4ರಂದು ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ.

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆ ಬರೆಯ ಸೂಚನೆ ಕೊಟ್ಟ ಸಚಿವ ಬೈರತಿ

ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಬಸ್ ಪ್ರಯಾಣದ ದರ ಏರಿಕೆಯ ಬಿಸಿ ತಟ್ಟಲಿದೆ. ನಾಲ್ಕು ಸರ್ಕಾರಿ ಸಾರಿಗೆ ಸಂಸ್ಥೆಗಳ ಒಟ್ಟು ನಷ್ಟ 9,000 ಕೋಟಿ ರೂಪಾಯಿ ತಲುಪಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವವರು ನವೆಂಬರ್ 5ರಿಂದ ಹೆಚ್ಚಿನ ಹಣ ತೆರಬೇಕಾಗಬಹುದು. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದು, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಬೇಕು ಎಂಬುದನ್ನು ನವೆಂಬರ್ 4ರಂದು ಅಂತಿಮಗೊಳಿಸಲಿದೆ.

ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ನಾಲ್ಕು ಸಾರಿಗೆ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನವೆಂಬರ್ 4ರಂದು ಸಭೆ ನಡೆಸಿ ದರ ಏರಿಕೆಯ ಪ್ರಮಾಣ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಬಿಎಂಟಿಸಿ, ಕೆಎಸ್ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಾಲ್ಕು ಸಂಸ್ಥೆಗಳ ಒಟ್ಟು ನಷ್ಟ ಸುಮಾರು 9,000 ಕೋಟಿ ರೂಪಾಯಿ ಇದೆ. ವರ್ಷಕ್ಕೆ ಸುಮಾರು 2,000 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಐದು ಬಾರಿ ಡೀಸೆಲ್ ಬೆಲೆ ಹೆಚ್ಚಿಸಿರುವುದು ಸಾರಿಗೆ ಸಂಸ್ಥೆಗಳ ವೆಚ್ಚ ಹೆಚ್ಚಲು ಕಾರಣವಾಗಿದೆ ಎಂದು ಭೈರತಿ ಸುರೇಶ್ ಆರೋಪಿಸಿದ್ದಾರೆ. ಸಂಸ್ಥೆಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎಂದೂ ಅವರು ಹೇಳಿದ್ದಾರೆ.

ಇನ್ನೊಂದೆಡೆ, ಸಾರ್ವಜನಿಕ ಸಾರಿಗೆ ಪ್ರಯಾಣ ದರ ನಿಯಂತ್ರಣ ಸಮಿತಿ (ಪಿಟಿಎಫ್‌ಆರ್‌ಸಿ) ಬಿಎಂಟಿಸಿ ಪ್ರಯಾಣ ದರದಲ್ಲಿ ಶೇ 45ರಷ್ಟು ಹಾಗೂ ಉಳಿದ ಮೂರು ಸಾರಿಗೆ ಸಂಸ್ಥೆಗಳಲ್ಲಿ ಶೇ 28ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ಆದರೆ, ಇದು ಸಮಿತಿಯ ಶಿಫಾರಸು ಮಾತ್ರ. ಸರ್ಕಾರ ಅಂತಿಮವಾಗಿ ಎಷ್ಟು ಹೆಚ್ಚಳ ಮಾಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದರ ಏರಿಕೆಯನ್ನು ವಿರೋಧಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸರ್ಕಾರ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿದೆ ಎಂದು ಟೀಕಿಸಿದ್ದಾರೆ. ಪ್ರಸ್ತಾವಿತ ದರ ಏರಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದೂ ಎಚ್ಚರಿಸಿದ್ದಾರೆ.

ನವೆಂಬರ್ 1ರಿಂದ ನಂದಿನಿ ಹಾಲಿನ ಬೆಲೆಯನ್ನೂ ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆಯೂ ಜಾರಿಗೆ ಬಂದರೆ ಜನರ ತಿಂಗಳ ಖರ್ಚು ಮತ್ತಷ್ಟು ಹೆಚ್ಚಾಗಲಿದೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು