ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
E-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!ಏಳು ಷರತ್ತುಗಳಿಗೆ ಒಪ್ಪಿದರಷ್ಟೇ ಮಾತುಕತೆ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ; ಸಂಧಾನಕ್ಕೆ ವ್ಯಾನ್ಸ್ ಪ್ರಯತ್ನಶಿಶುನಾಳ ಶರೀಫರ ತತ್ವಪದಗಳ ಭಾಷಾ ವೈಶಿಷ್ಟ್ಯತೆಸಿಸಿಬಿ ವಿರುದ್ಧ ಕೃಪಾ ಆಳ್ವ ಅಸಮಾಧಾನಸೋನಿಯಾ ಗಾಂಧಿ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌ ಜೀವನಪೂರ್ತಿ ಸುಳ್ಳುಗಳನ್ನು ಹರಡಿವೆ: ಪ್ರಿಯಾಂಕಾ ಗಾಂಧಿಉತ್ತರ ಪ್ರದೇಶ ಚುನಾವಣೆ: ಓವೈಸಿ–ಚಂದ್ರಶೇಖರ್ ಆಜಾದ್ ಮೈತ್ರಿ ಘೋಷಣೆ; ‘ಸಾಮಾಜಿಕ ಪರಿವರ್ತನಾ ಮೋರ್ಚಾ’ಗೆ ಕಾಂಗ್ರೆಸ್‌, ಎಸ್‌ಪಿಗೂ ಆಹ್ವಾನಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ ರೈಲು ಟಿಕೆಟ್‌ ಬುಕ್ಕಿಂಗ್‌ ಆರಂಭ: ಮಂಗಳೂರು, ಉಡುಪಿ, ಕುಂದಾಪುರದಿಂದ ಪ್ರಯಾಣ ದರವೆಷ್ಟು?ಹಾಸನದ DC ಕಚೇರಿಯಲ್ಲಿ ಕೋಟ್ಯಂತರ ರೂ. ಅಕ್ರಮ: ತನಿಖೆಗೆ ನಡೆಸುವಂತೆ ಶಾಲಿನಿ ರಜನೀಶ್ ಅವರಿಗೆ ದೂರು ವ್ಯಕ್ತಿ ಅಪಹರಿಸಿ 1.15 ಕೋಟಿ ರೂ. ದರೋಡೆ: ಸಂಚಾರ ಪೊಲೀಸ್ ಸಿಬ್ಬಂದಿ ಜೊತೆ – ಐವರ ಬಂಧನಮೆಟ್ರೋ 3 ನಿಲ್ದಾಣಗಳಲ್ಲಿ ಹೆಸರು ಬದಲಾವಣೆ – ಕೇಂದ್ರ ಅನುಮೋದನೆಕನ್ನಡಿಗರ ನಿಜ ಬದುಕಿನ ಸಮಸ್ಯೆಗಳನ್ನು ಪರಿಹರಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ: ಕರವೇ ಅಧ್ಯಕ್ಷ ನಾರಾಯಣ ಗೌಡಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯ ಮೃತದೇಹ ಪತ್ತೆ; ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಹಿಂದಿನ ಕಾಲದ ಪಟಾಕಿಗಳು ಕೀಟಗಳನ್ನು ನಾಶಪಡಿಸಿ ವಾತಾವರಣವನ್ನು ಶುದ್ಧಗೊಳಿಸುತ್ತಿದ್ದವು: ಮೋಹನ್‌ ಭಾಗವತ್‌ಇರಾನ್‌ ಯುದ್ಧದ ವಿಚಾರದಲ್ಲಿ ಟ್ರಂಪ್‌–ನೆತನ್ಯಾಹು ನಡುವೆ ಭಿನ್ನಮತ; ದೂರವಾಣಿ ಮಾತುಕತೆಯಲ್ಲಿ ತೀವ್ರ ವಾಗ್ವಾದಮೋದಿಯನ್ನು ಟೀಕಿಸಿದ್ದಕ್ಕಾಗಿ ನನಗೆ ಭಾರತದ ವೀಸಾ ನಿರಾಕರಿಸಲಾಗಿದೆ: ನಾರ್ವೆ ಪತ್ರಕರ್ತೆ ಹೆಲೆ ಲಿಂಗ್‌ಸಿಎಮ್ ಡಿ.ಕೆ. ಶಿವಕುಮಾರ್, ರಾಹುಲ್‌ ಗಾಂಧಿ ಬಳಿ ತನ್ನ ಸ್ಥಾನ ಉಳಿಸಿಕೊಡುವಂತೆ ಗೋಗರೆಯುತ್ತಿದ್ದಾರೆ – ಬಿ ವೈ ವಿಜಯೇಂದ್ರಮೋದಿ ಭೇಟಿ ಹಿನ್ನೆಲೆ: ಆನೇಕಲ್‌ನಲ್ಲಿ ಮದ್ಯದಂಗಡಿ, ಮಾಂಸದಂಗಡಿಗಳಿಗೆ ಎರಡು ದಿನ ನಿರ್ಬಂಧನಕಲಿ ಶೈಕ್ಷಣಿಕ ದಾಖಲೆ ಸಲ್ಲಿಸಿದ ಆರೋಪ: ಇಂಡೋನೇಷ್ಯಾದ ಉಪಾಧ್ಯಕ್ಷ ಗಿಬ್ರಾನ್ ರಾಕಬುಮಿಂಗ್ ರಾಕಾ ದಿಢೀರ್ ರಾಜೀನಾಮೆ!

ನಕಲಿ ಹೈಕೋರ್ಟ್ ಆದೇಶಗಳನ್ನು ನಂಬಿ 129 ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ: ಪೊಲೀಸ್ ತನಿಖೆ ಆರಂಭ

ಅಲಹಾಬಾದ್ ಮತ್ತು ರಾಜಸ್ಥಾನ ಹೈಕೋರ್ಟ್‌ಗಳ ಹೆಸರಿನಲ್ಲಿ ಸೃಷ್ಟಿಸಲಾದ ನಕಲಿ ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ಕೇಂದ್ರ ದೂರಸಂಪರ್ಕ ಇಲಾಖೆ 129 ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿರುವುದು ರಾಯಿಟರ್ಸ್ ತನಿಖೆಯಲ್ಲಿ ಬಯಲಾಗಿದೆ.

PPeepal Media

Peepal Media ದೇಶ

• 2 ನಿಮಿಷದ ಓದು

ಅಲಹಾಬಾದ್ ಮತ್ತು ರಾಜಸ್ಥಾನ ಹೈಕೋರ್ಟ್‌ಗಳ ಹೆಸರಿನಲ್ಲಿ ಸೃಷ್ಟಿಸಲಾದ ನಕಲಿ ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ಕೇಂದ್ರ ದೂರಸಂಪರ್ಕ ಇಲಾಖೆ 129 ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿರುವುದು ರಾಯಿಟರ್ಸ್ ತನಿಖೆಯಲ್ಲಿ ಬಯಲಾಗಿದೆ.

ನ್ಯಾಯಾಲಯದ ನಕಲಿ ಆದೇಶಗಳನ್ನು (Fake Court Orders) ನಿಜವೆಂದು ನಂಬಿ ಕೇಂದ್ರ ಸರ್ಕಾರವು ಈ ವರ್ಷ ದೇಶದಾದ್ಯಂತ 129 ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISPs) ಆದೇಶಿಸಿರುವ ಆಘಾತಕಾರಿ ಸಂಗತಿಯನ್ನು ಸುದ್ದಿ ಸಂಸ್ಥೆ ‘ರಾಯಿಟರ್ಸ್‘ (Reuters) ತನಿಖಾ ವರದಿ ಬಯಲಿಗೆಳೆದಿದೆ. ರಾಜಸ್ಥಾನ ಮತ್ತು ಅಲಹಾಬಾದ್ ಹೈಕೋರ್ಟ್‌ಗಳ ಹೆಸರಿನಲ್ಲಿ ಸೃಷ್ಟಿಸಲಾದ ಈ ನಕಲಿ ಆದೇಶಗಳು ಸರ್ಕಾರದ ಅಧಿಕೃತ ವಿಷಯ ನಿರ್ಬಂಧನಾ ವ್ಯವಸ್ಥೆಯ ಕಣ್ಣುತಪ್ಪಿಸಿ ಜಾರಿಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಈ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್, ನಕಲಿ ಆದೇಶ ಸೃಷ್ಟಿಸಿದ ಅಪರಿಚಿತರ ವಿರುದ್ಧ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಕಳೆದ ಜುಲೈ 21 ಮತ್ತು ಸೆಪ್ಟೆಂಬರ್ 2ರಂದು ಎರಡು ಪ್ರತ್ಯೇಕ ವೆಬ್‌ಸೈಟ್ ನಿರ್ಬಂಧನಾ ನಿರ್ದೇಶನಗಳನ್ನು ಹೊರಡಿಸಿತ್ತು. ಇಲಾಖೆಯ ವೆಬ್‌ಸೈಟ್‌ನಲ್ಲಿ ಎಂದಿನಂತೆ ಅಪ್‌ಲೋಡ್ ಮಾಡಲಾಗಿದ್ದ ಈ ನಿರ್ದೇಶನಗಳೊಂದಿಗೆ ರಾಜಸ್ಥಾನ ಮತ್ತು ಉತ್ತರ ಪ್ರದೇಶ ಹೈಕೋರ್ಟ್‌ಗಳ ಹೆಸರಿನಲ್ಲಿದ್ದ ಇ-ಮೇಲ್ ಪ್ರತಿಗಳನ್ನು ಲಗತ್ತಿಸಲಾಗಿತ್ತು.

ಆದರೆ, ಈ ಎರಡೂ ಆದೇಶಗಳು ಸಂಬಂಧಪಟ್ಟ ನ್ಯಾಯಾಲಯಗಳ ಅಧಿಕೃತ ಆನ್‌ಲೈನ್ ದಾಖಲೆಗಳಲ್ಲಿ ಎಲ್ಲಿಯೂ ನೋಂದಣಿಯಾಗಿಲ್ಲ ಎಂಬುದು ರಾಯಿಟರ್ಸ್ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ಕುರಿತು ರಾಯಿಟರ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಜಸ್ಥಾನ ಹೈಕೋರ್ಟ್‌ನ ರಿಜಿಸ್ಟ್ರಾರ್, ತಮ್ಮ ನ್ಯಾಯಾಲಯದ ಹೆಸರಿನಲ್ಲಿರುವ ಆದೇಶವು ಮೇಲ್ನೋಟಕ್ಕೆ ನಕಲಿಯಂತೆ ಕಂಡುಬರುತ್ತಿದೆ ಹಾಗೂ ತಮ್ಮ ಸರ್ವರ್‌ನಲ್ಲಿ ಅಂತಹ ಯಾವುದೇ ದಾಖಲೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಅಲಹಾಬಾದ್ ಹೈಕೋರ್ಟ್ ಕೂಡ ಇದು ನಕಲಿ ಆದೇಶವೆಂದು ದೃಢಪಡಿಸಿ ನವೆಂಬರ್ 6ರಂದು ಪೊಲೀಸ್ ದೂರು ದಾಖಲಿಸಿದೆ.

ತನಿಖೆಯ ವಿವರಗಳ ಪ್ರಕಾರ, ಜುಲೈ 19ರ ಭಾನುವಾರ ರಾತ್ರಿ 8:59ಕ್ಕೆ ದೂರಸಂಪರ್ಕ ಇಲಾಖೆಗೆ ‘ಆರ್ಯನ್ ಚೌಧರಿ’ ಎಂಬ ವಕೀಲರ ಹೆಸರಿನಲ್ಲಿ ಇ-ಮೇಲ್ ಬಂದಿತ್ತು. ಅದರೊಂದಿಗೆ ರಾಜಸ್ಥಾನ ಹೈಕೋರ್ಟ್‌ನ ನಕಲಿ ಆದೇಶವನ್ನು ಲಗತ್ತಿಸಲಾಗಿತ್ತು. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಡಿ ಭಾರತೀಯ ಐಟಿ ಕಾಯ್ದೆಯ ಪ್ರಬಲ ಸೆಕ್ಷನ್‌ಗಳನ್ನು ಉಲ್ಲೇಖಿಸಿ, 24 ಗಂಟೆಗಳ ಒಳಗಾಗಿ 34 ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಅದರಲ್ಲಿ ಸೂಚಿಸಲಾಗಿತ್ತು. ಅದಾದ ಎರಡೇ ದಿನಗಳಲ್ಲಿ ಸರ್ಕಾರವು ಇಂಟರ್ನೆಟ್ ಕಂಪನಿಗಳಿಗೆ ಈ 34 ಸೈಟ್‌ಗಳನ್ನು ತೆಗೆದುಹಾಕಲು ಆದೇಶಿಸಿತ್ತು. ವಿಪರ್ಯಾಸವೆಂದರೆ, ಆ ಇ-ಮೇಲ್ ವಿಳಾಸಕ್ಕೆ ರಾಯಿಟರ್ಸ್ ಸಂದೇಶ ಕಳುಹಿಸಿದಾಗ ‘ಅಂತಹ ವಿಳಾಸ ಅಸ್ತಿತ್ವದಲ್ಲಿಲ್ಲ’ (Recipient not found) ಎಂಬ ಉತ್ತರ ಬಂದಿದೆ.

ಇನ್ನೊಂದು ಪ್ರಕರಣದಲ್ಲಿ, ಆಗಸ್ಟ್ 22ರಂದು ‘ಕಾರ್ತಿಕೇಯ ಪಾಂಡೆ’ ಎಂಬ ವಕೀಲರ ಹೆಸರಿನಲ್ಲಿ ಭಾರತೀಯ ಅಧಿಕಾರಿಗಳಿಗೆ ಮತ್ತೊಂದು ನಕಲಿ ಆದೇಶವನ್ನು ಕಳುಹಿಸಲಾಗಿತ್ತು. ಆಗಸ್ಟ್ 14ರ ದಿನಾಂಕವಿದ್ದ ಈ ಆದೇಶದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಾಂಛನ, ನೀಲಿ ಮೊಹರು ಹಾಗೂ ನ್ಯಾಯಮೂರ್ತಿ ಗರಿಮಾ ಪ್ರಸಾದ್ ಅವರ ನಕಲಿ ಸಹಿಯನ್ನು ಬಳಸಲಾಗಿತ್ತು. ಅಷ್ಟೇ ಅಲ್ಲದೆ, ಅಸಲಿಯೆಂದು ನಂಬಿಸಲು ಕ್ಯೂಆರ್ ಕೋಡ್ (QR Code) ಕೂಡ ಅಳವಡಿಸಲಾಗಿತ್ತು.

ಆದರೆ, ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅದು ಯಾವುದೋ ಅನಾಮಧೇಯ ವೆಬ್‌ಪುಟಕ್ಕೆ ಕರೆದೊಯ್ದು ಕೇವಲ ಒಂದು ಸಾಲಿನ ಕೇಸ್ ಸಂಖ್ಯೆಯನ್ನು ತೋರಿಸುತ್ತಿತ್ತು. ಅಧಿಕಾರಿಗಳ ನಡುವಿನ ಪತ್ರವ್ಯವಹಾರದ ನಂತರ, ಸೆಪ್ಟೆಂಬರ್ 2ರಂದು ಕೇಂದ್ರ ಅಧಿಕಾರಿಯೊಬ್ಬರು 95 ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಆದೇಶ ಹೊರಡಿಸಿದ್ದರು. “ನ್ಯಾಯಮೂರ್ತಿ ಗರಿಮಾ ಪ್ರಸಾದ್ ಅವರ ಪೀಠದಿಂದ ಇಂತಹ ಯಾವುದೇ ಆದೇಶ ಹೊರಬಿದ್ದಿಲ್ಲ” ಎಂದು ಅವರ ಕಚೇರಿ ಪೊಲೀಸ್ ದೂರಿನಲ್ಲಿ ಸ್ಪಷ್ಟಪಡಿಸಿದೆ.

ನ್ಯಾಯಾಧೀಶರ ನಕಲಿ ಸಹಿಗಳನ್ನು ಬಳಸಿ ಆದೇಶಗಳನ್ನು ಸೃಷ್ಟಿಸುವುದು ಸಾರ್ವಜನಿಕರ ವಿಶ್ವಾಸದ ಬುಡಕ್ಕೇ ಕೊಡಲಿ ಪೆಟ್ಟು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಕಲಿ ಆದೇಶಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆಯೇ ಎಂಬ ನಿಟ್ಟಿನಲ್ಲಿ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ:

ಕುಡಿಯುವ ನೀರಿನ ಯೋಜನೆಯಲ್ಲಿ ನಿರ್ಲಕ್ಷ್ಯ: ಎಲ್‌ಆ್ಯಂಡ್‌ಟಿಗೆ ಕಪ್ಪುಪಟ್ಟಿ ಬಿಸಿ ಮುಟ್ಟಿಸಿದ ಸಚಿವ ಈಶ್ವರ ಖಂಡ್ರೆ!

https://peepalmedia.com/karnataka/minister-ishwara-khandre-who-touched-the-blacklist

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು