ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!ಏಳು ಷರತ್ತುಗಳಿಗೆ ಒಪ್ಪಿದರಷ್ಟೇ ಮಾತುಕತೆ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ; ಸಂಧಾನಕ್ಕೆ ವ್ಯಾನ್ಸ್ ಪ್ರಯತ್ನಶಿಶುನಾಳ ಶರೀಫರ ತತ್ವಪದಗಳ ಭಾಷಾ ವೈಶಿಷ್ಟ್ಯತೆಪದೇಪದೆ ವಿಚಾರಣೆಗೆ ಕರೆದ ಸಿಸಿಬಿ ವಿರುದ್ಧ ಕೃಪಾ ಆಳ್ವ ಅಸಮಾಧಾನಸೋನಿಯಾ ಗಾಂಧಿ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌ ಜೀವನಪೂರ್ತಿ ಸುಳ್ಳುಗಳನ್ನು ಹರಡಿವೆ: ಪ್ರಿಯಾಂಕಾ ಗಾಂಧಿಉತ್ತರ ಪ್ರದೇಶ ಚುನಾವಣೆ: ಓವೈಸಿ–ಚಂದ್ರಶೇಖರ್ ಆಜಾದ್ ಮೈತ್ರಿ ಘೋಷಣೆ; ‘ಸಾಮಾಜಿಕ ಪರಿವರ್ತನಾ ಮೋರ್ಚಾ’ಗೆ ಕಾಂಗ್ರೆಸ್‌, ಎಸ್‌ಪಿಗೂ ಆಹ್ವಾನಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ ರೈಲು ಟಿಕೆಟ್‌ ಬುಕ್ಕಿಂಗ್‌ ಆರಂಭ: ಮಂಗಳೂರು, ಉಡುಪಿ, ಕುಂದಾಪುರದಿಂದ ಪ್ರಯಾಣ ದರವೆಷ್ಟು?ಹಾಸನದ DC ಕಚೇರಿಯಲ್ಲಿ ಕೋಟ್ಯಂತರ ರೂ. ಅಕ್ರಮ: ತನಿಖೆಗೆ ನಡೆಸುವಂತೆ ಶಾಲಿನಿ ರಜನೀಶ್ ಅವರಿಗೆ ದೂರು ವ್ಯಕ್ತಿ ಅಪಹರಿಸಿ 1.15 ಕೋಟಿ ರೂ. ದರೋಡೆ: ಸಂಚಾರ ಪೊಲೀಸ್ ಸಿಬ್ಬಂದಿ ಜೊತೆ – ಐವರ ಬಂಧನಮೆಟ್ರೋ 3 ನಿಲ್ದಾಣಗಳಲ್ಲಿ ಹೆಸರು ಬದಲಾವಣೆ – ಕೇಂದ್ರ ಅನುಮೋದನೆಕನ್ನಡಿಗರ ನಿಜ ಬದುಕಿನ ಸಮಸ್ಯೆಗಳನ್ನು ಪರಿಹರಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ: ಕರವೇ ಅಧ್ಯಕ್ಷ ನಾರಾಯಣ ಗೌಡಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯ ಮೃತದೇಹ ಪತ್ತೆ; ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಹಿಂದಿನ ಕಾಲದ ಪಟಾಕಿಗಳು ಕೀಟಗಳನ್ನು ನಾಶಪಡಿಸಿ ವಾತಾವರಣವನ್ನು ಶುದ್ಧಗೊಳಿಸುತ್ತಿದ್ದವು: ಮೋಹನ್‌ ಭಾಗವತ್‌ಇರಾನ್‌ ಯುದ್ಧದ ವಿಚಾರದಲ್ಲಿ ಟ್ರಂಪ್‌–ನೆತನ್ಯಾಹು ನಡುವೆ ಭಿನ್ನಮತ; ದೂರವಾಣಿ ಮಾತುಕತೆಯಲ್ಲಿ ತೀವ್ರ ವಾಗ್ವಾದಮೋದಿಯನ್ನು ಟೀಕಿಸಿದ್ದಕ್ಕಾಗಿ ನನಗೆ ಭಾರತದ ವೀಸಾ ನಿರಾಕರಿಸಲಾಗಿದೆ: ನಾರ್ವೆ ಪತ್ರಕರ್ತೆ ಹೆಲೆ ಲಿಂಗ್‌ಸಿಎಮ್ ಡಿ.ಕೆ. ಶಿವಕುಮಾರ್, ರಾಹುಲ್‌ ಗಾಂಧಿ ಬಳಿ ತನ್ನ ಸ್ಥಾನ ಉಳಿಸಿಕೊಡುವಂತೆ ಗೋಗರೆಯುತ್ತಿದ್ದಾರೆ – ಬಿ ವೈ ವಿಜಯೇಂದ್ರಮೋದಿ ಭೇಟಿ ಹಿನ್ನೆಲೆ: ಆನೇಕಲ್‌ನಲ್ಲಿ ಮದ್ಯದಂಗಡಿ, ಮಾಂಸದಂಗಡಿಗಳಿಗೆ ಎರಡು ದಿನ ನಿರ್ಬಂಧನಕಲಿ ಶೈಕ್ಷಣಿಕ ದಾಖಲೆ ಸಲ್ಲಿಸಿದ ಆರೋಪ: ಇಂಡೋನೇಷ್ಯಾದ ಉಪಾಧ್ಯಕ್ಷ ಗಿಬ್ರಾನ್ ರಾಕಬುಮಿಂಗ್ ರಾಕಾ ದಿಢೀರ್ ರಾಜೀನಾಮೆ!ದೀಪಾವಳಿ ಪಟಾಕಿಯಿಂದ ವಾಯುಮಾಲಿನ್ಯ ಹೆಚ್ಚಾದರೆ ಏನಂತೆ?: ಯೋಗಿ ಆದಿತ್ಯನಾಥ್ ಡಾಫೆಯ ಮಾತುಪ್ರಗತಿ ಕಾಣದ ರಷ್ಯಾ–ಉಕ್ರೇನ್ ಶಾಂತಿ ಮಾತುಕತೆ: ಕೈದಿಗಳ ವಿನಿಮಯಕ್ಕೆ ಒಪ್ಪಿಗೆ

ಕನ್ನಡಿಗರ ನಿಜ ಬದುಕಿನ ಸಮಸ್ಯೆಗಳನ್ನು ಪರಿಹರಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ: ಕರವೇ ಅಧ್ಯಕ್ಷ ನಾರಾಯಣ ಗೌಡ

ಕನ್ನಡಿಗರ ಉದ್ಯೋಗ, ಶಿಕ್ಷಣ ಮತ್ತು ಕನ್ನಡ ಶಾಲೆಗಳ ಸಮಸ್ಯೆಗಳಿಗೆ ಪರಿಹಾರ ನೀಡದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವೇನು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

PPeepal Media

Peepal Media ರಾಜ್ಯ

• 2 ನಿಮಿಷದ ಓದು

ಕನ್ನಡಿಗರ ನಿಜ ಬದುಕಿನ ಸಮಸ್ಯೆಗಳನ್ನು ಪರಿಹರಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ: ಕರವೇ ಅಧ್ಯಕ್ಷ ನಾರಾಯಣ ಗೌಡ

ಬೆಂಗಳೂರು: ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಘೋಷಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಬದುಕು, ಉದ್ಯೋಗ, ಶಿಕ್ಷಣ ಮತ್ತು ಕನ್ನಡ ಶಾಲೆಗಳ ಉಳಿವಿನಂತಹ ಗಂಭೀರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕಲ್ಪಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಮುಂದಾಗಿರುವುದರ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನಾರಾಯಣ ಗೌಡ, ಕನ್ನಡವೆಂದರೆ ಕೇವಲ ಒಂದು ಭಾಷೆಯಲ್ಲ, ಅದು ಕನ್ನಡಿಗರ ಬದುಕು ಕೂಡ ಹೌದು ಎಂದು ಹೇಳಿದ್ದಾರೆ. ಕನ್ನಡಿಗರ ಉದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯೇ ಅಪಾಯದಲ್ಲಿರುವಾಗ ಸಮ್ಮೇಳನದ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸುವುದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ನಡೆಸಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ ಎಂಬ ವಿಚಾರಕ್ಕೂ ನಾರಾಯಣ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೀರಪ್ಪ ಮೊಯ್ಲಿ ಅವರು ತ್ರಿಭಾಷಾ ನೀತಿಯ ಪರವಾಗಿದ್ದಾರೆ. ಕನ್ನಡಿಗರ ಮೇಲೆ ಹಿಂದಿ ಕಲಿಕೆಯನ್ನು ಹೇರಲು ಬೆಂಬಲಿಸುವವರ ನೇತೃತ್ವದಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಕನ್ನಡದ ಹಿತಾಸಕ್ತಿಗಳ ಕುರಿತು ಏನು ಮಾತನಾಡಲಾಗುತ್ತದೆ ಎಂದು ಅವರು ಕೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರನೇ ಭಾಷೆಗೆ ಅಂಕ ನೀಡದಿರುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದರೂ, ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುತ್ತೋಲೆ ಹೊರಡಿಸಿದ್ದರಿಂದ ಹೈಕೋರ್ಟ್‌ ಅದನ್ನು ರದ್ದುಗೊಳಿಸಿತ್ತು ಎಂದು ನಾರಾಯಣ ಗೌಡ ನೆನಪಿಸಿದ್ದಾರೆ. ಆದರೆ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ ಎಂದು ಟೀಕಿಸಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷಾ ನೀತಿಯ ಪರವಾಗಿರುವುದಾಗಿ ತಮ್ಮ ಬಳಿ ಹೇಳಿದ್ದರೂ, ವೀರಪ್ಪ ಮೊಯ್ಲಿ ಸೇರಿದಂತೆ ಹಲವರ ವಿರೋಧವಿದೆ ಎಂದೂ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

ಉತ್ತರ ಭಾರತದ ಹಲವು ರಾಜ್ಯಗಳ ಮಕ್ಕಳು ಎರಡು ಭಾಷೆಗಳನ್ನು ಕಲಿಯುವ ಮೂಲಕ ಮೂರನೇ ಭಾಷೆಯ ಬದಲಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ. ಹಾಗಾದರೆ ಕರ್ನಾಟಕದ ಮಕ್ಕಳು ಮಾತ್ರ ಮೂರನೇ ಭಾಷೆಯ ಹೊರೆ ಹೊರಬೇಕೇ ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

ಕನ್ನಡಿಗರ ಉದ್ಯೋಗದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ?

ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ಮತ್ತು ಹೊರರಾಜ್ಯದವರ ನೇಮಕಾತಿ ವಿಚಾರವನ್ನೂ ನಾರಾಯಣ ಗೌಡ ಪ್ರಸ್ತಾಪಿಸಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಮಿತಿಯೊಂದು ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದ ಎಂಜಿನಿಯರಿಂಗ್‌ ಪದವೀಧರರಲ್ಲಿ ಶೇ.17ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆತಿದೆ. ಉಳಿದ ಶೇ.83ರಷ್ಟು ಪದವೀಧರರ ಸ್ಥಿತಿ ಏನು ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಐಟಿ-ಬಿಟಿ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ಹೊರರಾಜ್ಯಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಇದರಿಂದ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂಬುದು ಅವರ ಆರೋಪ. ಖಾಸಗಿ ಸಂಸ್ಥೆಗಳಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಲು ಕಾರ್ಮಿಕ ಇಲಾಖೆ ಮೂರು ಬಾರಿ ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಕಾರ್ಪೊರೇಟ್‌ ಸಂಸ್ಥೆಗಳ ಒತ್ತಡಕ್ಕೆ ಮಣಿದು ಸರ್ಕಾರ ಸಮೀಕ್ಷೆಗೆ ಅನುಮತಿ ನೀಡಲಿಲ್ಲ ಎಂದೂ ಆರೋಪಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಐಟಿ-ಬಿಟಿ ಸಂಸ್ಥೆಗಳಿಗೆ ತೆರಳಿ ಕನ್ನಡಿಗರ ಉದ್ಯೋಗದ ಕುರಿತು ಮಾಹಿತಿ ಕೇಳುವ ಅಭಿಯಾನ ಆರಂಭಿಸಿದಾಗ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘ಮಾರಲ್‌ ಪೊಲೀಸ್‌’ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ಹಾಗಾದರೆ ರಾಜ್ಯವನ್ನು ನಡೆಸುತ್ತಿರುವವರು ಜನಪ್ರತಿನಿಧಿಗಳೋ ಅಥವಾ ಕಾರ್ಪೊರೇಟ್‌ ಕಂಪನಿಗಳೋ ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲ ಹಂತದ ಉದ್ಯೋಗಗಳಲ್ಲಿ ಶೇ.80ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡುವುದಾಗಿ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕಾರ್ಪೊರೇಟ್‌ ಸಂಸ್ಥೆಗಳ ಒತ್ತಡಕ್ಕೆ ಮಣಿದು ಕಾಯ್ದೆ ಜಾರಿಗೆ ತರುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕೆಪಿಎಸ್‌ಸಿ ಮತ್ತು ಕನ್ನಡ ಶಾಲೆಗಳ ಸ್ಥಿತಿಯ ಬಗ್ಗೆಯೂ ಆಕ್ಷೇಪ

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿಗಾಗಿ ಇರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯವೈಖರಿಯ ಬಗ್ಗೆಯೂ ನಾರಾಯಣ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಆರೋಪಗಳು, ಪರೀಕ್ಷೆಗಳ ರದ್ದು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದಿಂದ ವರ್ಷಗಟ್ಟಲೆ ಸಿದ್ಧತೆ ನಡೆಸುವ ಕನ್ನಡದ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಹೇಳಿದ್ದಾರೆ. ಹಲವು ಪರೀಕ್ಷೆಗಳು ನಡೆಯದೇ ಉಳಿದಿದ್ದು, ನಡೆದ ಕೆಲವು ಪರೀಕ್ಷೆಗಳೂ ರದ್ದಾಗಿವೆ ಎಂದು ಆರೋಪಿಸಿದ್ದಾರೆ.

ಇದರ ಜೊತೆಗೆ, ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಉಳಿದ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆಕ್ಷೇಪಿಸಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶದ ವಿಚಾರದಲ್ಲಿ ಶಿಕ್ಷಕರನ್ನು ಗುರಿಯಾಗಿಸುವ ಬದಲು, ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಹೇಳಿದ್ದಾರೆ.

ಕನ್ನಡಿಗರ ಉದ್ಯೋಗ, ಶಿಕ್ಷಣ ಮತ್ತು ಭಾಷೆಯ ಹಿತಾಸಕ್ತಿಗಳನ್ನು ರಕ್ಷಿಸುವ ಕಾಯ್ದೆಗಳನ್ನು ರೂಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ಇಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸಿದರೆ, ಅದು ಕನ್ನಡಿಗರ ಹಿತಕ್ಕಾಗಿ ನಡೆಯುವ ಕಾರ್ಯಕ್ರಮವಾಗದೆ ರಾಜಕೀಯ ಸಮಾವೇಶವಾಗಿ ಉಳಿಯಲಿದೆ ಎಂದು ನಾರಾಯಣ ಗೌಡ ತಮ್ಮ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು