ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
2022ರ ಮತಾಂತರ ನಿಷೇಧ ಕಾಯ್ದೆಯನ್ನೇ ಮರುಜಾರಿಗೆ ಕಾಂಗ್ರೆಸ್ ಬದ್ಧ: ಬಿ.ಕೆ. ಹರಿಪ್ರಸಾದ್ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿE-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!ಏಳು ಷರತ್ತುಗಳಿಗೆ ಒಪ್ಪಿದರಷ್ಟೇ ಮಾತುಕತೆ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ; ಸಂಧಾನಕ್ಕೆ ವ್ಯಾನ್ಸ್ ಪ್ರಯತ್ನಶಿಶುನಾಳ ಶರೀಫರ ತತ್ವಪದಗಳ ಭಾಷಾ ವೈಶಿಷ್ಟ್ಯತೆಸಿಸಿಬಿ ವಿರುದ್ಧ ಕೃಪಾ ಆಳ್ವ ಅಸಮಾಧಾನಸೋನಿಯಾ ಗಾಂಧಿ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌ ಜೀವನಪೂರ್ತಿ ಸುಳ್ಳುಗಳನ್ನು ಹರಡಿವೆ: ಪ್ರಿಯಾಂಕಾ ಗಾಂಧಿಉತ್ತರ ಪ್ರದೇಶ ಚುನಾವಣೆ: ಓವೈಸಿ–ಚಂದ್ರಶೇಖರ್ ಆಜಾದ್ ಮೈತ್ರಿ ಘೋಷಣೆ; ‘ಸಾಮಾಜಿಕ ಪರಿವರ್ತನಾ ಮೋರ್ಚಾ’ಗೆ ಕಾಂಗ್ರೆಸ್‌, ಎಸ್‌ಪಿಗೂ ಆಹ್ವಾನಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ ರೈಲು ಟಿಕೆಟ್‌ ಬುಕ್ಕಿಂಗ್‌ ಆರಂಭ: ಮಂಗಳೂರು, ಉಡುಪಿ, ಕುಂದಾಪುರದಿಂದ ಪ್ರಯಾಣ ದರವೆಷ್ಟು?ಹಾಸನದ DC ಕಚೇರಿಯಲ್ಲಿ ಕೋಟ್ಯಂತರ ರೂ. ಅಕ್ರಮ: ತನಿಖೆಗೆ ನಡೆಸುವಂತೆ ಶಾಲಿನಿ ರಜನೀಶ್ ಅವರಿಗೆ ದೂರು ವ್ಯಕ್ತಿ ಅಪಹರಿಸಿ 1.15 ಕೋಟಿ ರೂ. ದರೋಡೆ: ಸಂಚಾರ ಪೊಲೀಸ್ ಸಿಬ್ಬಂದಿ ಜೊತೆ – ಐವರ ಬಂಧನಮೆಟ್ರೋ 3 ನಿಲ್ದಾಣಗಳಲ್ಲಿ ಹೆಸರು ಬದಲಾವಣೆ – ಕೇಂದ್ರ ಅನುಮೋದನೆಕನ್ನಡಿಗರ ನಿಜ ಬದುಕಿನ ಸಮಸ್ಯೆಗಳನ್ನು ಪರಿಹರಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ: ಕರವೇ ಅಧ್ಯಕ್ಷ ನಾರಾಯಣ ಗೌಡಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯ ಮೃತದೇಹ ಪತ್ತೆ; ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಹಿಂದಿನ ಕಾಲದ ಪಟಾಕಿಗಳು ಕೀಟಗಳನ್ನು ನಾಶಪಡಿಸಿ ವಾತಾವರಣವನ್ನು ಶುದ್ಧಗೊಳಿಸುತ್ತಿದ್ದವು: ಮೋಹನ್‌ ಭಾಗವತ್‌ಇರಾನ್‌ ಯುದ್ಧದ ವಿಚಾರದಲ್ಲಿ ಟ್ರಂಪ್‌–ನೆತನ್ಯಾಹು ನಡುವೆ ಭಿನ್ನಮತ; ದೂರವಾಣಿ ಮಾತುಕತೆಯಲ್ಲಿ ತೀವ್ರ ವಾಗ್ವಾದಮೋದಿಯನ್ನು ಟೀಕಿಸಿದ್ದಕ್ಕಾಗಿ ನನಗೆ ಭಾರತದ ವೀಸಾ ನಿರಾಕರಿಸಲಾಗಿದೆ: ನಾರ್ವೆ ಪತ್ರಕರ್ತೆ ಹೆಲೆ ಲಿಂಗ್‌ಸಿಎಮ್ ಡಿ.ಕೆ. ಶಿವಕುಮಾರ್, ರಾಹುಲ್‌ ಗಾಂಧಿ ಬಳಿ ತನ್ನ ಸ್ಥಾನ ಉಳಿಸಿಕೊಡುವಂತೆ ಗೋಗರೆಯುತ್ತಿದ್ದಾರೆ – ಬಿ ವೈ ವಿಜಯೇಂದ್ರ

ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿ

ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿ

ಹಾಸನ: ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ ತನಿಖೆ ನಡೆಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಲು ಮುಂದಾದರು.

ಜಿಲ್ಲಾಧಿಕಾರಿಗಳ ಮೇಲೆ ನೇರ ಆರೋಪ ಕೇಳಿಬಂದಿದ್ದು, ಅವರ ಪಿಎಗೆ ಸಂಬಂಧಿಸಿದ ವಾಟ್ಸ್‌ಆ್ಯಪ್ ಚಾಟ್‌ಗಳು ಬಹಿರಂಗವಾಗಿವೆ ಎನ್ನಲಾದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತಿರುವುದಾಗಿ ಕಾರ್ಯಕರ್ತರು ತಿಳಿಸಿದರು.

ಕುಮಾರಸ್ವಾಮಿ ತಪ್ಪು ಮಾಡಿದರೂ ಶಿಕ್ಷೆಯಾಗಲಿ, ಡಿಸಿ ತಪ್ಪು ಮಾಡಿದರೂ ಶಿಕ್ಷೆಯಾಗಲಿ’

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನೂ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ, “ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ. ಅವರ ಮೇಲೂ ತನಿಖೆಯಾಗಲಿ. ಕುಮಾರಸ್ವಾಮಿ ತಪ್ಪು ಮಾಡಿದರೆ ಕಾನೂನಿನ ಪ್ರಕಾರ ಅವರಿಗೂ ಶಿಕ್ಷೆಯಾಗಬೇಕು. ಜಿಲ್ಲಾಧಿಕಾರಿ ತಪ್ಪು ಮಾಡಿದರೂ ಅವರಿಗೂ ಶಿಕ್ಷೆಯಾಗಬೇಕು” ಎಂದು ಹೇಳಿದರು.

ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಎದುರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಿಬ್ಬಂದಿ ರಜೆ ಮೇಲೆ ತೆರಳುವಂತೆ ಮನವಿ

ಇದೇ ವೇಳೆ, ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಯಬೇಕು ಎಂಬ ಬೇಡಿಕೆಯೊಂದಿಗೆ ಸಂಬಂಧಪಟ್ಟ ಸಿಬ್ಬಂದಿ ರಜೆ ಮೇಲೆ ಮನೆಗೆ ತೆರಳುವಂತೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸಲು ಮುಂದಾದರು.

ಒಟ್ಟಿನಲ್ಲಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಪ್ರಕರಣ ಇದೀಗ ಹಾಸನದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪಾರದರ್ಶಕ ತನಿಖೆಗೆ ಒತ್ತಾಯ ಕೇಳಿಬಂದಿದೆ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು