Home ಬ್ರೇಕಿಂಗ್ ಸುದ್ದಿ “ಯಂತ್ರ ನಾಗರಿಕತೆಯ ಒಂದು ಲಕ್ಷಣವೇ, ವೇಗ ಆವೇಗ, ಹಿಂಸೆ, ಅಸಮಾಧಾನ – ಗಾಂಧಿವಾದಿ ಪ್ರಸನ್ನ

“ಯಂತ್ರ ನಾಗರಿಕತೆಯ ಒಂದು ಲಕ್ಷಣವೇ, ವೇಗ ಆವೇಗ, ಹಿಂಸೆ, ಅಸಮಾಧಾನ – ಗಾಂಧಿವಾದಿ ಪ್ರಸನ್ನ

ಸಕಲೇಶಪುರ : ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ ಕೈ ಜೋಡಿಸಿರುವುದು ತುಂಬಾ ತೃಪ್ತಿದಾಯಕವಾಗಿದೆ. ಈ ನಷೆ ಅನಾದಿ ಕಾಲದಿಂದ ನಮ್ಮ ಜತೆಗಿರುವ ಸಂಗತಿ. ಇದರ ಹಿತ ಮಿತದಿಂದ ಸನ್ಯಾಸಿಗಳು ಬಳಸುತ್ತಿದ್ದರು, ಆದರೆ ಪ್ರಸ್ತುತದಲ್ಲಿ ಮಿತಿ ಮೀರಿರುವ ಮಾದಕ ಸೇವನೆ ಆಧುನಿಕತೆಗೆ ಮಾರಕವಾಗಿದೆ ಎಂದು ಗಾಂಧಿವಾದಿ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹಮ್ಮಿಕೊಂಡಿರುವ ʼಡ್ರಗ್ಸ್‌ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಯಂತ್ರ ನಾಗರಿಕತೆಯ ಒಂದು ಲಕ್ಷಣ, ವೇಗ ಆವೇಗ, ಹಿಂಸೆ, ಅಸಮಾಧಾನ ಅಸಹನೆ ಎಲ್ಲವನ್ನೂ ಮೀರಲು ಮಾದಕತೆಗೆ ವಾಲುತ್ತಿದ್ದಾರೆ. ಮೊಬೈಲ್‌ ಬಳಕೆ ಕೂಡ ಒಂದು ಮಾದಕತೆ. ಬದುಕನ್ನು ಸಂಭ್ರಮಿಸಬೇಕಾದರೆ ಮಕ್ಕಳ ಹಿತರಕ್ಷಣೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗ್ರತರಾಗಬೇಕು. ಚಳವಳಿಗಾರರು ಮುನ್ನುಗ್ಗಬೇಕು, ಮನೆಯಲ್ಲಿ ಪೋಷಕರೂ ಕೂಡ ಮಕ್ಕಳಿಗೆ ಹೆಚ್ಚು ಸಮಯ ಕೊಡುವ ಮೂಲಕ ಅವರೊಟ್ಟಿಗೆ ತೊಡಗಿಸಿಕೊಳ್ಳಬೇಕು. ಎಲ್ಲ ಧರ್ಮಗಳೂ ಕೂಡ ವ್ಯಸನ ಮುಕ್ತವಾಗಿರುವುದನ್ನೇ ಬೋಧಿಸುತ್ತವೆ” ಎಂದು ಹೇಳಿದರು.

ದೇವರನ್ನು ಪೀಠದಿಂದ ಕೆಳಗಿಟ್ಟು, ಅಮಲನ್ನು ಪೀಠದ ಮೇಲೆ ಕೂರಿಸಿದ್ದೇವೆ. ದೇವರು ದೇವರಾದರೆ, ಡ್ರಗ್ಸ್‌ ಒಂದು ಸೈತಾನ್‌ ಇದ್ದಂತೆ. ಎಲ್ಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು, ಸಾರ್ವಜನಿಕರು ಎಚ್ಚೆತ್ತುಕೊಂಡು ಡ್ರಗ್ಸ್‌ ಪೆಡ್ಲರ್‌ಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡಬೇಕು” ಎಂದರು

You cannot copy content of this page

Exit mobile version