ಕೇಂದ್ರ ಬಜೆಟ್ | ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಬಜೆಟ್‌ನಲ್ಲಿ ಕೊಡುಗೆಗಳ ಸುರಿಮಳೆ, ವಿಶೇಷ ಕಾರಿಡಾರ್‌ಗಳು, ವಿಶೇಷ ಪ್ರೋತ್ಸಾಹಕಗಳು

ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೊಡುಗೆಗಳ ಸುರಿಮಳೆಗೈದಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನ ಪ್ರಸಿದ್ಧ ಕಾಂಚಿಪುರಂ ಸೀರೆಯುಟ್ಟು ಬಜೆಟ್ ಭಾಷಣ ಪೂರೈಸಿರುವುದು ಗಮನಾರ್ಹ.

ತಮಿಳುನಾಡಿಗೆ ಅಪರೂಪದ ಭೂಮಿ ಕಾರಿಡಾರ್‌ಗಳು (Rare Earth Corridors), ಹೈಸ್ಪೀಡ್ ರೈಲು ಸಂಪರ್ಕ ಮಾರ್ಗಗಳು, ಪ್ರವಾಸೋದ್ಯಮ ಪ್ರೋತ್ಸಾಹಕಗಳು ಮತ್ತು ಬೆಳೆಗಳಿಗೆ ಬೆಂಬಲ ಯೋಜನೆಗಳನ್ನು ನೀಡಿದ್ದರೆ; ಪಶ್ಚಿಮ ಬಂಗಾಳಕ್ಕೆ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಸರಕು ಸಾಗಣೆ ಕಾರಿಡಾರ್), ಹೈಸ್ಪೀಡ್ ರೈಲು ಸಂಪರ್ಕ, ಕೈಗಾರಿಕಾ ಕಾರಿಡಾರ್ ನೋಡ್ ಮತ್ತು ಹಲವಾರು ಪ್ರವಾಸೋದ್ಯಮ ಯೋಜನೆಗಳನ್ನು ಕೇಂದ್ರ ಪ್ರಕಟಿಸಿದೆ.

ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಕೇಂದ್ರದ ಎನ್‌ಡಿಎ ಸರ್ಕಾರ ಈ ಕೊಡುಗೆಗಳನ್ನು ನೀಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು