Saturday, April 27, 2024

ಸತ್ಯ | ನ್ಯಾಯ |ಧರ್ಮ

ಸಿದ್ದ ಮಾದರಿಗಳನ್ನು ಮೀರಿದ ದಾರಿಬುತ್ತಿ

ಚಿಕ್ಕ ಪುಟ್ಟದ್ದನ್ನೇ ದೊಡ್ಡದಾಗಿ ವೈಭವೀಕರಿಸಿಕೊಂಡು ಪರಾಕುಗಳಿಗೆ ಮುಗಿಬೀಳುವವರೇ ಹೆಚ್ಚಿರುವ ಈ ಹೊತ್ತಲ್ಲಿ, ಬಿದ್ದುದನ್ನು ಎತ್ತಿ ಕಟ್ಟುತ್ತಾ,ಪ್ರೀತಿಯಿರುವ ಕಡೆ ಮೌನವಾಗಿ ನಿಲ್ಲುವ ತುಮಕೂರಿನ ಪ್ರಸಿದ್ಧ ಲೇಖಕಿ,ಕವಯಿತ್ರಿ,ಸಂಘಟಕಿ ಬಾ.ಹ ರಮಾಕುಮಾರಿ.

 ತುಮಕೂರಿನ ಒಂದಿಷ್ಟು ಸಮಾನ ಮನಸ್ಕರ ದಾರಿಬುತ್ತಿ ಅನ್ನುವ ಬಳಗವೊಂದು ಮೊನ್ನೆಯ ಕಾರ್ಯಕ್ರಮದಲ್ಲಿ  ರಮಾಕುಮಾರಿ ಯವರ ಕೃತಿ ಮತ್ತು ಸಂಘಟನೆಯ ದಾರಿ ಕುರಿತಂತೆ ಮಾತು-ಸಂವಾದ  ಕಾರ್ಯಕ್ರಮವನ್ನು ಅಮಾನಿಕೆರೆಯ ಪಾರ್ಕಿನಲ್ಲಿ ಹಮ್ಮಿಕೊಂಡಿತ್ತು.
ರಮಾಕುಮಾರಿಯವರ ಕತೆಗಳನ್ನು ಕುರಿತು ಗೀತಾ ನಾರಾಯಣ್,ಕಾವ್ಯ ಕುರಿತು ವಿದ್ಯಾ ಅರಮನೆ,ದರ್ಶನ್. ಗದ್ಯ ಬರಹಗಳನ್ನು ಕುರಿತು ಲೋಕೇಶ್ ಮನ್ವಿತ್,ಎಂ.ಪ್ರವೀಣ  ಹಾಗೂ ಸಂಘಟನೆಗಳ ಜತೆಗೆ ರಮಾಕುಮಾರಿ ಯವರ ಹೆಜ್ಜೆಗಳನ್ನು ಕುರಿತು ಮೇ.ನಾ ತರಂಗಿಣಿ ಮಾತನಾಡಿದರು.

ಎನಗಿಂತ ಕಿರಿಯರಿಲ್ಲ ಎನ್ನುವ ವಿನೀತ ಭಾವದಲ್ಲಿ ಸರಳತೆಯನ್ನೇ ಬದುಕಾಗಿಸಿಕೊಂಡಿರುವ ರಮಾಕುಮಾರಿಯವರ ಬದುಕಿನ ಪುಟಗಳ ಅಚ್ಚರಿ,ಆತಂಕ,ಸಾಧನೆ,ಸಿದ್ಧಿಗಳು ತೆರೆದುಕೊಂಡ ಹಾಗೆಲ್ಲ ಸೇರಿದ್ದವರ ಕಣ್ಣಲ್ಲಿ ಎಷ್ಟೊಂದು ಅಭಿಮಾನ,ಆಶ್ಚರ್ಯಗಳು ಮೆರೆಯುತ್ತಿದ್ದವು.ಪರೋಪಕಾರ,ನಿಲುವು,ಸೌಅಹಾರ್ದತೆ ಇಂತಹವುಗಳನ್ನೆಲ್ಲ ಪದಗಳಾಗಿರಿಸದೆ ಅಕ್ಷರಶಃ ಆಚರಿಸುತ್ತಿರುವ ರಮಾಕುಮಾರಿ ಈ ನೆಲದ ಮಹತ್ವವೂ…ಹೆಮ್ಮೆಯೂ ಎಂಬುದು ಕಾರ್ಯಕ್ರಮದಲ್ಲಿ ಸೇರಿದವರೆಲ್ಲರ ಅಭಿಪ್ರಾಯ ವಾಗಿತ್ತು.


ಕಾರ್ಯಕ್ರಮದಲ್ಲಿ ಬದುಕು ಬಳಗದ ಭಾಗ್ಯ,ನಿಮ್ಹಾನ್ಸ್ ನಲ್ಲಿ ಶುಶ್ರೂಷಕಿಯಾದ ಲೇಖಕಿ ಲಕ್ಷ್ಮಿ ಸಾಗರ್,ಶೈಲಜ,ಬಾಬು ಮನಸೇ,ಗಾಯಕಿ ಗಂಗಲಕ್ಷ್ಮಿ,ಕವಯಿತ್ರಿ ಸುರಭಿ ರೇಣುಕಾಂಬಿಕೆ,ಕೃಷ್ಣ,ರಜನಿ,ಬಾ.ಹ ಉಪೇಂದ್ರ,ಹೊದೇಕಲ್ ಕುಮಾರಸ್ವಾಮಿ ,ಲೇಖಕ ದಾದಾಪೀರ್ ಮುಂತಾದವರು ಭಾಗವಹಿಸಿದ್ದರು.


ಸಿದ್ಧ ಮಾದರಿಗಳಿಂದ ಹೊರತಾದ ಕಾರ್ಯಕ್ರಮದಲ್ಲಿ ಸರಳ ಊಟವೂ…ಸೊಗಸಿನ ಹಾಡುಗಳೂ ತುಂಬಿದ್ದವು.
ಲೇಖಕಿ ರಂಗಮ್ಮ ಹೊದೇಕಲ್ ಕಾರ್ಯಕ್ರಮ ನಿರ್ವಹಿಸಿದರು.

Related Articles

ಇತ್ತೀಚಿನ ಸುದ್ದಿಗಳು