ಆಮ್‌ ಆದ್ಮಿ ಶಾಸಕ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ

ದೆಹಲಿ : ಹಿಂದೂ ದೇವರುಗಳ ಮೇಲೆ ನಂಬಿಕೆ ಇಡದೆ ಬೌದ್ಧ ಧರ್ಮಕ್ಕೆ ಮತಾಂತರ ಗೊಳ್ಳುವಂತೆ ತೀರ್ಮಾನ ಮಾಡಿದ್ದ ಆಮ್ ಆದ್ಮಿ ಪಕ್ಷದ ಶಾಸಕ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಾಸಕ ರಾಜೇಂದ್ರ ಪಾಲ್ ಗೌತಮ್ ಅಕ್ಟೋಬರ್‌ 5 ರಂದು ಬೌದ್ಧ ಧರ್ಮಕ್ಕೆ ಮತಾಂತರ ಮಾಡುವ ಉದ್ದೇಶದಿಂದ ದೆಹಲಿಯ ಅಂಬೇಡ್ಕರ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಿಹಿಸಿದ್ದರು. ಹಿಂದೂ ದೇವರು ಮತ್ತು ದೇವತೆಗಳನ್ನು ನಿರಾಕರಿಸುವ ಪ್ರತಿಜ್ಞೆ ಮಾಡುವಂತಹ ಸಾಮೂಹಿಕ ಧಾರ್ಮಿಕ  ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಇದರ ವಿರುದ್ದ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿತ್ತು. ಈ ಬೆನ್ನಲ್ಲೇ  ರಾಜೇಂದ್ರ ಪಾಲ್ ಗೌತಮ್ ಇಂದು ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ. ಈ ರಾಜೀನಾಮೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

ಇದನ್ನೂ ನೋಡಿ : ಧರ್ಮ ಮರೆತ ನಾಡಿನಲ್ಲಿ ಸೌಜನ್ಯಾಳ ದುರಂತ ಕಥನ

ರಾಜ್ಯಾದ್ಯಂತ ದಿಗ್ಭ್ರಮೆ ಮೂಡಿಸಿದ ಧರ್ಮಸ್ಥಳದ ಸೌಜನ್ಯಾಳ ಸಾವಿಗೆ ಇಂದಿಗೆ ಹತ್ತು ವರ್ಷಗಳು. ಪೊಲೀಸರ ಸಂಪೂರ್ಣ ವೈಫಲ್ಯ ಮತ್ತು ಪ್ರಭಾವಿಗಳ ಕೈವಾಡಕ್ಕೆ ಸಿಲುಕಿ ಪ್ರಕರಣ ಹಳ್ಳಹಿಡಿದಿದೆ. ಈ ಪ್ರಕರಣದ ಕುರಿತು ಡಾ. ಅಶೋಕ್‌ ಕೆ. ಆರ್ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು