Home ದೇಶ ಭಯದ ನೆರಳಿನಲ್ಲಿ ಶೈಕ್ಷಣಿಕ ಕ್ಷೇತ್ರ: ಮೋದಿ ಆಡಳಿತದಲ್ಲಿ ಕುಸಿಯುತ್ತಿದೆ ಶೈಕ್ಷಣಿಕ ಸ್ವಾತಂತ್ರ್ಯ

ಭಯದ ನೆರಳಿನಲ್ಲಿ ಶೈಕ್ಷಣಿಕ ಕ್ಷೇತ್ರ: ಮೋದಿ ಆಡಳಿತದಲ್ಲಿ ಕುಸಿಯುತ್ತಿದೆ ಶೈಕ್ಷಣಿಕ ಸ್ವಾತಂತ್ರ್ಯ

0

ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ಭಾರತದ ಶೈಕ್ಷಣಿಕ ಕ್ಷೇತ್ರವು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಶೈಕ್ಷಣಿಕ ಸ್ವಾತಂತ್ರ್ಯವು ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಕಳೆದ ಹತ್ತು ವರ್ಷಗಳಲ್ಲಿ ಅಧ್ಯಾಪಕರಿಗೆ ಬೋಧನೆ, ಸಂಶೋಧನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆಯುಂಟಾಗಿದ್ದು, ವಿಶ್ವವಿದ್ಯಾಲಯಗಳ ಸ್ವಾಯತ್ತತೆಯು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.


ಸ್ವೀಡನ್‌ನ ವಿ-ಡೆಮ್ (V-Dem) ಸಂಸ್ಥೆ ಬಿಡುಗಡೆ ಮಾಡಿದ ‘ಅಕಾಡೆಮಿಕ್ ಫ್ರೀಡಂ ಇಂಡೆಕ್ಸ್’ ವರದಿಯು ಭಾರತದ ಶೈಕ್ಷಣಿಕ ಸ್ವಾತಂತ್ರ್ಯದ ಸೂಚ್ಯಂಕವು 2012ರಲ್ಲಿ 0.65 ಇದ್ದದ್ದು 2025ರ ವೇಳೆಗೆ 0.14ಕ್ಕೆ ಭಾರಿ ಕುಸಿತ ಕಂಡಿದೆ ಎಂದು ಉಲ್ಲೇಖಿಸಿದೆ. ಕಳೆದ ವರ್ಷ ವಿಶ್ವದ 179 ದೇಶಗಳಲ್ಲಿ ಭಾರತವು 156ನೇ ಸ್ಥಾನದಲ್ಲಿದ್ದು, ಪ್ರಸ್ತುತವೂ ಅಟ್ಟಕ್ಕೇ ಸೀಮಿತವಾಗಿದೆ. ಅದೇ ರೀತಿ, ‘ಸ್ಕಾಲರ್ಸ್ ಎಟ್ ರಿಸ್ಕ್’ (SAR) ಸಂಸ್ಥೆಯ ‘ಫ್ರೀ ಟು ಥಿಂಕ್ 2025’ ವರದಿಯು ಶೈಕ್ಷಣಿಕ ಸ್ವಾತಂತ್ರ್ಯದ ವಿಷಯದಲ್ಲಿ ಆತಂಕಕಾರಿ ಪರಿಸ್ಥಿತಿ ಹೊಂದಿರುವ ವಿಶ್ವದ 16 ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಿದೆ.

ಈ ವರದಿಗಳು ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ಧೋರಣೆಯನ್ನು ತೀವ್ರವಾಗಿ ಆಕ್ಷೇಪಿಸಿವೆ. ಬಿಜೆಪಿ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಘಾತ ಉಂಟುಮಾಡುತ್ತಾ, ಅವುಗಳ ಮೇಲೆ ಹಿಂದುತ್ವ ರಾಷ್ಟ್ರೀಯತಾವಾದದ ಅಜೆಂಡಾವನ್ನು ಹೇರುತ್ತಿದೆ ಎಂದು ಆರೋಪಿಸಲಾಗಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ 2014 ರಿಂದ 2026 ರವರೆಗೆ, ಕನಿಷ್ಠ 62 ಅಧ್ಯಾಪಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳಿಗಾಗಿ ವಿವಿಧ ಶಿಕ್ಷೆಗಳಿಗೆ ಗುರಿಯಾಗಿದ್ದಾರೆ. ಇವರಲ್ಲಿ 10 ಮಂದಿಯನ್ನು ವಜಾ ಮಾಡಲಾಗಿದ್ದರೆ, 16 ಜನರನ್ನು ಅಮಾನತುಗೊಳಿಸಲಾಗಿದೆ, 12 ಮಂದಿಯಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಮತ್ತು 21 ಪ್ರಕರಣಗಳಲ್ಲಿ ಬಂಧನಗಳು ನಡೆದಿವೆ. ಈ ಶಿಕ್ಷೆಗೆ ಒಳಗಾದವರಲ್ಲಿ ಬಹುತೇಕರು ಸರ್ಕಾರ ಅಥವಾ ಹಿಂದುತ್ವ ರಾಜಕಾರಣವನ್ನು ಟೀಕಿಸಿದವರೇ ಆಗಿದ್ದಾರೆ ಎಂಬುದು ಗಮನಾರ್ಹ.

ವರದಿಗಳ ಪ್ರಕಾರ, 2018ರಲ್ಲಿ ಕೇಂದ್ರ ಸರ್ಕಾರಿ ಸೇವಾ ನಿಯಮಗಳನ್ನು (CCS) ವಿಶ್ವವಿದ್ಯಾಲಯಗಳಿಗೆ ಅನ್ವಯಿಸಿದ್ದು ಒಂದು ಪ್ರಮುಖ ತಿರುವು ಎನ್ನಲಾಗಿದೆ. ಈ ನಿಯಮಗಳ ಅನ್ವಯ ಅಧ್ಯಾಪಕರು ಸರ್ಕಾರವನ್ನು ಟೀಕಿಸುವಂತಿಲ್ಲ, ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಟ್ಟುನಿಟ್ಟಿನ ಮಿತಿಗಳನ್ನು ಪಾಲಿಸಬೇಕು. ಇದರಿಂದಾಗಿ ಅಧ್ಯಾಪಕರ ಮೇಲೆ ಆಂಕ್ಷೆಗಳು ಹೆಚ್ಚಾಗಿವೆ. ಅಲ್ಲದೆ, ಅಧ್ಯಾಪಕರ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಹಾಗೂ ತರಗತಿಗಳ ಉಪನ್ಯಾಸಗಳ ಮೇಲೂ ಈಗ ನಿಘಾ ಇಡಲಾಗುತ್ತಿದೆ. ಫೇಸ್‌ಬುಕ್ ಪೋಸ್ಟ್‌ಗಾಗಿ ಬಂಧನ, ಪರೀಕ್ಷಾ ಪ್ರಶ್ನೆಗಳ ಕಾರಣಕ್ಕಾಗಿ ಉದ್ಯೋಗ ಕಳೆದುಕೊಳ್ಳುವುದು ಮತ್ತು ಆನ್‌ಲೈನ್ ಕಾಮೆಂಟ್‌ಗಳಿಗಾಗಿ ಅಮಾನತುಗೊಳ್ಳುವ ಘಟನೆಗಳು ಶಿಕ್ಷಕರಲ್ಲಿ ಭಯದ ವಾತಾವರಣ ನಿರ್ಮಿಸಿವೆ.

ಶೈಕ್ಷಣಿಕ ಪ್ರಬಂಧಗಳು ಅಥವಾ ಲೇಖನಗಳನ್ನು ಪ್ರಕಟಿಸಲು ಈಗ ಮುನ್ನಚೂಚನೆ ಅಥವಾ ಅನುಮತಿ ಪಡೆಯಬೇಕಾದ ವಾತಾವರಣ ಸೃಷ್ಟಿಯಾಗಿದೆ. ಅಕಾಡೆಮಿಕ್ ಸ್ವಾತಂತ್ರ್ಯದ ಕೊರತೆಯಿಂದಾಗಿ ಅನೇಕ ಪ್ರೊಫೆಸರ್‌ಗಳು ರಾಜೀನಾಮೆ ನೀಡಿದ್ದಾರೆ. ಉದ್ಯಮ ಹಾಗೂ ವಿದ್ಯಾರ್ಥಿ ಚಳವಳಿಗಳಲ್ಲಿ ಪಾಲ್ಗೊಳ್ಳುವುದು ಕೂಡ ಈಗ ಅಪಾಯಕಾರಿಯಾಗಿ ಪರಿಣಮಿಸಿದ್ದು, ಪ್ರತಿಭಟನೆಗಳಲ್ಲಿ ಪಾಲ್ಗೊಂಡವರಿಗೆ ವರ್ಗಾವಣೆ ಹಾಗೂ ‘ಉಪಾ’ (UAPA) ದಂತಹ ಕಠಿಣ ಕಾನೂನುಗಳ ಅಡಿಯಲ್ಲಿ ಬಂಧನಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳು ದೇಶದ ಶೈಕ್ಷಣಿಕ ವಾತಾವರಣವನ್ನು ಬದಲಿಸುತ್ತಿದ್ದು, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ತಜ್ಞರು ಟೀಕಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಜೆಎನ್‌ಯು ಪ್ರೊಫೆಸರ್ ಸುರಾಜಿತ್ ಮಜುಂದಾರ್ ಅವರಂತಹ ಕೆಲವರು, “ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಕರು ಸರ್ಕಾರದ ಸೇವಕರಲ್ಲ, ಸತ್ಯವನ್ನು ಮಾತನಾಡುವುದು ನಮ್ಮ ಜವಾಬ್ದಾರಿ” ಎಂದು ಪ್ರತಿರೋಧ ತೋರುತ್ತಿದ್ದಾರೆ.

You cannot copy content of this page

Exit mobile version