Home ದೇಶ ವಿಡಿಯೋ ಸ್ಟೋರಿ | ಟೋಲ್ ಪ್ಲಾಜಾದಲ್ಲಿ ಕಾರು ಅಪಘಾತ, ಹಲವರು ಸಾವು

ವಿಡಿಯೋ ಸ್ಟೋರಿ | ಟೋಲ್ ಪ್ಲಾಜಾದಲ್ಲಿ ಕಾರು ಅಪಘಾತ, ಹಲವರು ಸಾವು

0

ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟೋಲ್ ಪ್ಲಾಜಾದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ವಾಹನಗಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿವರಗಳ ಪ್ರಕಾರ, ಮುಂಬೈಯ ವರ್ಲಿ ಪ್ರದೇಶದ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಹಲವಾರು ವಾಹನಗಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಗುರುವಾರ ರಾತ್ರಿ ವರ್ಲಿಯಿಂದ ಬಾಂದ್ರಾಕ್ಕೆ ತೆರಳುತ್ತಿದ್ದ ಇನ್ನೋವಾ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ವರ್ಲಿಯಲ್ಲಿನ ಸೀ ಲಿಂಕ್‌ನಲ್ಲಿ ಟೋಲ್ ಪ್ಲಾಜಾಕ್ಕಿಂತ 100 ಮೀಟರ್ ಮೊದಲು ಮರ್ಸಿಡಿಸ್ ಕಾರಿಗೆ ಡಿಕ್ಕಿ ಹೊಡೆದು ನಂತರ ಎರಡು ಅಥವಾ ಮೂರು ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಡಿಸಿಪಿ ಕೃಷ್ಣಕಾಂತ್ ಉಪಾಧ್ಯಾಯ ಬಹಿರಂಗಪಡಿಸಿದ್ದಾರೆ.

ಮರ್ಸಿಡಿಸ್ ಮತ್ತು ಇನ್ನೋವಾ ಸೇರಿದಂತೆ ಒಟ್ಟು ಆರು ಕಾರುಗಳು ಅಪಘಾತಕ್ಕೀಡಾಗಿವೆ ಎಂದು ಅವರು ವಿವರಿಸಿದರು. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ನಾಲ್ವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದರು.

You cannot copy content of this page

Exit mobile version