ಹೊಸದಿಲ್ಲಿ: ಶಾಲಾ ಬಾಲಕಿಯ ಮೇಲೆ ಆಸಿಡ್ ದಾಳಿ ನಡೆದಿದ್ದು, ವಿದ್ಯಾರ್ಥಿನಿ ಗಂಭೀರವಾಗಿ ಗಾಯಕೊಂಡಿರುವ ಘಟನೆ ದೆಹಲಿಯಲ್ಲಿ ದ್ವಾರಕ ಪ್ರದೇಶದಲ್ಲಿ ನಡೆದಿದೆ.
ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಶಾಲೆಗೆ ಹೊರಟಿದ್ದ ಬಾಲಕಿಯ ಮೇಲೆ ಆಸಿಡ್ ಎರಚಿದ್ದು, ಆಕೆಯ ಮುಖ ಸುಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಆಕೆಯ ತಂದೆ ಮಾಧ್ಯಗಳಿಗೆ ತಿಳಿಸಿದ್ದಾರೆ.

ಈ ಅಮಾನವೀಯ ಘಟನೆಯ ಬಗ್ಗೆ ತಂದೆ ಮಾತನಾಡಿ, ʼನನಗೆ ಇಬ್ಬರು ಮಕ್ಕಳಿದ್ದಾರೆ, ಇಂದು ಬೆಳಿಗ್ಗೆ ಇಬ್ಬರು ಒಟ್ಟಿಗೆ ಶಾಲೆಗೆ ಹೊರಟಿದ್ದ ವೇಳೆ ಇಬ್ಬರು ಪುರುಷರು ಬೈಕ್‌ನಲ್ಲಿ ಬಂದು ನನ್ನ ತನ್ನ ಹಿರಿಯ ಮಗಳ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಆಸಿಡ್ ಎರಚಿದ ಇಬ್ಬರು ವ್ಯಕ್ತಿಗಳು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಸಂತ್ರಸ್ಥೆಯು ನೀಡಿರುವ ಪ್ರಕಾರ ಇಬ್ಬರು ಆಕೆಯ ವಿರುದ್ಧ ಆಸಿಡ್ ದಾಳಿ ನಡೆಸಿದ್ದು, ಅವರಲ್ಲಿ ಈಗಾಗಲೇ ಒಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.