ದಕ್ಷಿಣ ಕನ್ನಡ: ಹಿಂದೂ ಹುಡುಗಿ ಮತ್ತು ಮುಸ್ಲಿಂ ವ್ಯಕ್ತಿಯ ನಡುವಿನ ಅಂತರ್ ಧರ್ಮೀಯ ಸಂಬಂಧದ ಬಗ್ಗೆ ಕಾಲೇಜು ಆವರಣದಲ್ಲಿ ವಾಗ್ವಾದ ನಡೆದ ನಂತರ ಕರ್ನಾಟಕದ ದಕ್ಷಿಣ ಕನ್ನಡದ ಖಾಸಗಿ ಕಾಲೇಜೊಂದರಲ್ಲಿ ಒಟ್ಟು 18 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ವಿದ್ಯಾರ್ಥಿಗಳೆಲ್ಲರೂ ತಮ್ಮ ಪದವಿ ಪೂರ್ವ ಕೋರ್ಸ್ (ಪಿಯುಸಿ) ಅಂತಿಮ ವರ್ಷದಲ್ಲಿದ್ದಾರೆ. ಅಮಾನತುಗೊಂಡ 18 ವಿದ್ಯಾರ್ಥಿಗಳಲ್ಲಿ ಮೂವರು ಬಾಲಕಿಯರು ಸಹ ಸೇರಿದ್ದು, ವಿದ್ಯಾರ್ಥಿಗಳಲ್ಲಿ ಹತ್ತು ಮಂದಿ ಹಿಂದೂಗಳಾಗಿದ್ದರೆ, ಇತರ ಎಂಟು ಮಂದಿ ಮುಸ್ಲಿಮರು ಎಂದು ತಿಳಿದು ಬಂದಿದೆ.
ಮೂರು ತಿಂಗಳ ಹಿಂದೆ ಹಿಂದೂ ಹುಡುಗಿ ಮತ್ತು ಒಬ್ಬ ಮುಸ್ಲಿಂ ವ್ಯಕ್ತಿ ಪ್ರೀತಿಸಿದಾಗ ಈ ವಾಗ್ವಾದವು ಪ್ರಾರಂಭವಾಗಿತ್ತು, ಹೀಗಾಗಿ ಈ ವಿಚಾರ ಕಾಲೇಜು ಅಧಿಕಾರಿಗಳಿಗೆ ತಿಳಿದಿದ್ದು, ಆ ಸಮಯದಲ್ಲಿ, ಅವರು ಹುಡುಗಿಯ ಪೋಷಕರನ್ನು ಕರೆದು ಸಂಬಂಧದ ವಿರುದ್ಧ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ, ಕಾಲೇಜು ಅಧಿಕಾರಿಗಳು ಹುಡುಗಿಯ ಬಳಿ ಇರುವ ಪ್ರೇಮ ಪತ್ರವನ್ನು ಕಂಡುಕೊಂಡರು, ಅದನ್ನು ಅವಳು ಹುಡುಗನಿಗೆ ಬರೆದಿದ್ದಳು ಎಂದು ತಿಳಿದ ಬಳಿಕ, ಕಾಲೇಜು ತಕ್ಷಣವೇ ಅವಳ ಕುಟುಂಬವನ್ನು ಕರೆದು ಏನಾಯಿತು ಎಂಬುದರ ಬಗ್ಗೆ ಅವರಿಗೆ ಸೂಚನೆ ನೀಡಿದೆ. ಇದಕ್ಕೆ ಕೆಲವು ವಿದ್ಯಾರ್ಥಿಗಳು ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಲೇಜು ಆವರಣದಲ್ಲಿ ಆಕ್ಷೇಪಣೆಗಳು ವಾಗ್ವಾದಕ್ಕೆ ತಿರುಗಿದ್ದು. ವಾಗ್ವಾದದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಮತ್ತು ಹಿಂದೂ ಹುಡುಗಿ ಮತ್ತು ಮುಸ್ಲಿಂ ಪುರುಷನಿಗೆ ಸಹಾಯ ಮಾಡಿದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಿರುವ ವಿದ್ಯಾರ್ಥಿಗಳನ್ನು ನೇರವಾಗಿ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಲಾಗಿದ್ದು, ಕೆಲವು ದಿನಗಳ ನಂತರ ಅಮಾನತು ಹಿಂಪಡೆಯಲಾಗುವುದು ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.