Home ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್​, ಬಿಗ್ ಶಾಕ್ ?

ಮೆಟ್ರೋ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್​, ಬಿಗ್ ಶಾಕ್ ?

ಬೆಂಗಳೂರು : ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಜೀವನಾಡಿಯೇ ಆಗಿದೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಮೂಲಕ ಪ್ರಯಾಣ ಮಾಡೋದೆ ಬೆಸ್ಟ್ ಅಂತಾರೆ. ನಮ್ಮ ಮೆಟ್ರೋಗಳಲ್ಲಿ ಪ್ರಯಾಣಿಕರ (Passenger) ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜೊತೆಗೆ ಮೆಟ್ರೋ ಟಿಕೆಟ್ (Metro Ticket)​ ದರ ಏನು ಕಡಿಮೆ ಇಲ್ಲ. ಕಳೆದ ವರ್ಷ ಭಾರಿ ಏರಿಕೆಯ ಶಾಕ್ ಕೊಟ್ಟಿದ್ದ ಬಿಎಂಆರ್​ಸಿಎಲ್ (BMRCL)​ ಇದೀಗ ಮತ್ತೆ ಪ್ರಯಾಣಿಕರಿಗೆ ದರ ಏರಿಕೆ ಶಾಕ್​ ಕೊಡಲು ಮುಂದಾಗಿದೆ. BMRCL ಬೋರ್ಡ್ ಮೀಟಿಂಗ್​ ನಡೆದಿದ್ದು, ದರ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ದರ ಏರಿಕೆಗೆ ಗ್ರೀನ್ ಸಿಗ್ನಲ್

ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಬಿಎಂಆರ್​ಸಿಎಲ್​ ನಿರ್ಧರಿಸಿದೆ. ಈ ಸಂಬಂಧ BMRCL ಬೋರ್ಡ್ ಮೀಟಿಂಗ್ ಕೂಡ ನಡೆದಿದೆ. ಮಹತ್ವ ಚರ್ಚೆ ಬಳಿಕ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸರ್ಕಾರದ ಅನುಮತಿಗಾಗಿ ನಮ್ಮ ಮೆಟ್ರೋ ಕಾಯುತ್ತಿದೆ.

ಶೇಕಡಾ 5 ರಷ್ಟು ದರ ಏರಿಕೆ!

ದರ ಏರಿಕೆ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಮಾಡಬೇಕಿದ್ದು, ಇದೀಗ ಸಭೆಯಲ್ಲಿ ಶೇಕಡಾ 5 ರಷ್ಟು ದರ ಏರಿಕೆ ಮಾಡಲು ನಮ್ಮ ಮೆಟ್ರೋ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಈ ವರ್ಷ ಟಿಕೆಟ್​ ದರ ಏರಿಕೆ ಮಾಡಿದ್ರೆ, ಮುಂದಿನ ವರ್ಷ ಶೇ.10% ರಷ್ಟು ದರ ಏರಿಕೆ ಮಾಡಬೇಕಾಗುತ್ತದೆ ಎಂದು BMRCL ತಿಳಿಸಿದೆ

You cannot copy content of this page

Exit mobile version