ಬೆಂಗಳೂರು : ಪುನೀತ್ ಕೆರೆಹಳ್ಳಿ ಬಂಧನದ ವಿಷಯದಲ್ಲಿ ಪ್ರತಿಭಟನೆಗೆ ಕರೆ ನೀಡಿ ಎಸಿಪಿ ಚಂದನ್ ಅವರಿಗೆ ಸಾವಾಲು ಎಸೆದಿದ್ದ ಮಾಜಿಸಂಸದ ಪ್ರತಾಪ್ ಸಿಂಹ ಭಾರೀ ಮುಖಭಂಗವನ್ನು ಎದುರಿಸಿದ್ದಾರೆ.
ರಜೆಯ ಮೇಲೆ ಹೋಗಿದ್ದ ಎಸಿಪಿ ಚಂದನ್ ಅವರು ತಮ್ಮ ಊರಿಗೆ ಹೋಗಿದ್ದರು. ಆದರೆ ಪ್ರತಾಪ ಸಿಂಹ ಸಾಮಾಜಿಕ ಜಾಲತಾಣದಲ್ಲಿ ನೀಡಿದ ಚಾಲೆಂಜನ್ನು ಸ್ವೀಕರಿಸಿ ಇಂದು ಅವರು ಠಾಣೆಗೆ ಹಾಜರಾಗಿದ್ದರು. ನಂತರ ಪ್ರತಾಪ ಸಿಂಹ ಎದುರಿನಲ್ಲೇ ಪುನೀತ ಕೆರೆಹಳ್ಳಿಯನ್ನು ವಶಕ್ಕೆ ಪಡೆದು ನಂತರ ತೀವ್ರ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.
ರೈಲ್ವೇ ನಿಲ್ದಾಣದಲ್ಲಿ ನಡೆದ ಮಾಂಸ ಸಾಗಾಟದ ವಿವಾದದಲ್ಲಿ ಬಂಧನಕ್ಕೊಳಗಾಗಿದ್ದ ಪುನೀತ್ ನಂತರ ಆಸ್ಪತ್ರೆಗೆ ಭರ್ತಿಯಾಗಿದ್ದ. ಅದರ ನಂತರ ಅವನಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ ಹೊರಬಂದ ಕೆರೆಹಳ್ಳಿ ಪೊಲೀಸರ ವಿರುದ್ಧ ಭರಪೂರ ಆರೋಪಗಳನ್ನು ಎಸಗಿದ್ದ.
“ಪೊಲೀಸರು ನನಗೆ ಒಳಉಡುಪು ಸಹ ಬಿಚ್ಚಿ ಹಲ್ಲೆ ನಡೆಸಿದ್ದಾರೆ. ಎಲ್ಲಾ ದಾಖಲೆಗಳಿರುವ ಪೆನ್ ಡ್ರೈವ್ ಒಂದು ನನ್ನ ಬಳಿ ಇತ್ತು ಅದನ್ನು ಪೊಲೀಸರು ಕಿತ್ತುಕೊಂಡಿದ್ದಾರೆ” ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದ.
ಅದರ ನಂತರ ಮಾಜಿ ಸಂಸದ ಪ್ರತಾಪ ಸಿಂಹ ಪೊಲೀಸರು ಕೆರೆಹಳ್ಳಿಯನ್ನು ಬೆತ್ತಲೆ ನಿಲ್ಲಿಸಿ ಹೊಡೆದಿದ್ದಾರೆ. ಅವರ ವಿರುದ್ಧ ಕ್ರಮ ಆಗಬೇಕು. ನಾನು ನಾಳೆ ಠಾಣೆಗೆ ಬರುತ್ತೇನೆ. ಎಸಿಪಿ ಚಂದನ್ ಅವರೇ ನೀವೂ ಇರಬೇಕು ಎಂದು ಎಚ್ಚರಿಕೆ ರೀತಿಯ ಪೋಸ್ಟ್ ಹಾಕಿದ್ದರು.
ಪೊಲೀಸರು ರಜಾಕ್ ಮೇಲೆ ಕೇಸ್ ಮಾಡುವ ಬದಲು ಹೋರಾಟ ಮಾಡಿದವರ ಮೇಲೆ ಕೇಸ್ ಹಾಕಿದ್ದಾರೆ. ನಾನು ಈ ಕುರಿತು ಡಿಸಿಪಿ ಜೊತೆ ಕಮಿಷನರ್ ಜೊತೆ ಮಾತನಾಡಿದ್ದೇವೆ. ಬೇಗನೆ ಎಸಿಪಿ ಚಂದನ್ ಮೇಲೆ ಕ್ರಮ ಆಗಬೇಕು.ಜೊತೆಗೆ ರಜಾಕ್ ಮೇಲೆ ಎಫ್‌ಐಆರ್ ಆಗಬೇಕು ಎಂದು ಪ್ರತಾಪ್ ಆಗ್ರಹಿಸಿದ್ದಾರೆ.