Wednesday, January 14, 2026

ಸತ್ಯ | ನ್ಯಾಯ |ಧರ್ಮ

ನಟ ಯಶ್‌ ಕುಟುಂಬ ಕಾನೂನು ಬದ್ಧ ದಾಖಲೆಗಳಿದ್ದರೆ ಬಹಿರಂಗಪಡಿಸಲಿ – ದೇವರಾಜು

ಹಾಸನ: ಯಶ್ ಅವರ ತಾಯಿ ಬಳಿ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ಬದ್ಧ ದಾಖಲೆಗಳಿದ್ದರೆ ಅವುಗಳನ್ನು ಕೂಡಲೇ ಬಹಿರಂಗಪಡಿಸಲಿ ಆದರೇ ದಾಖಲೆಗಳಿಲ್ಲದೆ ಇಲ್ಲಸಲ್ಲದ ಆರೋಪ ಮಾಡಬಾರದು ಬೇಕಾದರೇ ಈ ಬಗ್ಗೆ ಮಂಜುನಾಥ ಸ್ವಾಮಿ ಆಣೆ ಮಾಡಲು ಸಿದ್ದರಿದ್ದೇವೆ ಎಂದು ಜಿಪಿಎ ಹೊಂದಿರುವ ದೇವರಾಜು ಸ್ಪಷ್ಟನೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಇಂದು  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಾದಿತ ನಿವೇಶನವು 1965ರಿಂದಲೂ ಮೂಲ ಮಾಲೀಕೆಯಾಗಿರುವ ಕರೀಗೌಡ ಸಿದ್ದೇಗೌಡ. ನಂತರ ಎರಡು ಜನರಿಗೆ 5 ಮತ್ತು ಗುಂಟೆ ಜಾಗವನ್ನು ಮಾರಾಟ ಮಾಡುತ್ತಾರೆ. ಒಬ್ಬರೂ ರಾಮಕೃಷ್ಣ, ಮತ್ತೊಬ್ಬರು ನಮ್ಮ ಮಾಲೀಕರಾದ ಲಕ್ಷ್ಮಮ್ಮ ಅವರ ಹೆಸರಿನಲ್ಲೇ ದಾಖಲಾಗಿದ್ದು, ಅವರೇ ನನಗೆ ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು. ಈ ಜಿಪಿಎಗೆ ಲಕ್ಷ್ಮಮ್ಮ ಅವರ ಮಕ್ಕಳ ಸಹಿ ಸಹ ಇದ್ದು, ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧವಾಗಿದೆ. 2025ರ ನವೆಂಬರ್.11 ರಂದು ನಿವೇಶನದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ಕಾಂಪೌಂಡ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನ್ಯಾಯಾಲಯದ ಆದೇಶದಂತೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ದೇವರಾಜು ಹೇಳಿದರು. ಯಶ್ ಅವರ ತಾಯಿ ನಿರ್ಮಿಸಿರುವ ಮನೆ ಕೂಡ ಕಾಲುಧಾರಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ಸ್ಪಷ್ಟಪಡಿಸಿದರು.

ನನಗೆ ಜಿಪಿಎ ನೀಡಿರುವ 95 ವರ್ಷದ ಲಕ್ಷ್ಮಮ್ಮ ಅವರು ಇಂದಿಗೂ ಬದುಕಿದ್ದು, ಮೈಸೂರಿನಲ್ಲಿ ವಾಸವಾಗಿದ್ದಾರೆ. ಬೇಕಿದ್ದರೆ ಯಾರೂ ಬೇಕಾದರೂ ಅವರನ್ನು ಪ್ರಶ್ನಿಸಬಹುದು. ಈ ಪ್ರಕರಣ ಸಂಬಂಧ ನಮ್ಮ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಎಫ್‌ಐಆರ್ ದಾಖಲಿಸಲಾಗಿದೆ.  ಪ್ರತಿಯಾಗಿ ಯಶ್ ಅವರ ತಾಯಿ ಪುಷ್ಪ ಅವರಿಗೆ ನಿವೇಶನ ಮಾರಾಟ ಮಾಡಿರುವ ದುರ್ಗಾಪ್ರಸಾದ್ ಹಾಗೂ ನಟರಾಜ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ದೇವರಾಜು ತಿಳಿಸಿದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page