ಅದಾನಿ ಡ್ಯೂಟಿ ಫ್ರೀ ಅಂಗಡಿಗಳಲ್ಲಿ ಕಾನೂನುಬಾಹಿರವಾಗಿ ನಿಕೋಟಿನ್ ಪೌಚ್‌ಗಳ ಮಾರಾಟ: ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಅದಾನಿ ಸಮೂಹದ ಒಡೆತನದ ಡ್ಯೂಟಿ ಫ್ರೀ ಅಂಗಡಿಗಳಲ್ಲಿ, ಸರ್ಕಾರದಿಂದ ನಿಷೇಧಿಸಲ್ಪಟ್ಟ ನಿಕೋಟಿನ್ ಪೌಚ್‌ಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

ಭಾರತವು ‘ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆ’ಯ ಅಡಿಯಲ್ಲಿ ಇ-ಸಿಗರೆಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ, ಧೂಮಪಾನ ತ್ಯಜಿಸಲು ಸಹಕಾರಿಯಾಗುವ ನಿಕೋಟಿನ್ ಪ್ಯಾಚ್‌ಗಳಂತಹ ಕೆಲವು ಪರ್ಯಾಯ ಉತ್ಪನ್ನಗಳಿಗೆ ಅನುಮತಿ ನೀಡಲಾಗಿದ್ದರೂ, ಅವುಗಳ ಮಾರಾಟಕ್ಕೆ ಸೂಕ್ತ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ.

ಆದರೆ, ಅದಾನಿ ಒಡೆತನದ ಈ ಅಂಗಡಿಗಳಲ್ಲಿ ಯಾವುದೇ ರೀತಿಯ ಅನುಮತಿ ಇಲ್ಲದೆಯೇ ವಿದೇಶದಿಂದ ಆಮದು ಮಾಡಿಕೊಂಡ ನಿಕೋಟಿನ್ ಪೌಚ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ಡ್ರಗ್ ಕಂಟ್ರೋಲ್ ವಿಭಾಗದ ತಪಾಸಣೆಯ ವೇಳೆ ದೃಢಪಟ್ಟಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅದಾನಿ ಸಂಸ್ಥೆಯು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ. “ನಿಕೋಟಿನ್ ಪೌಚ್‌ಗಳು ಮಾದಕದ್ರವ್ಯಗಳಲ್ಲ” ಎಂದು ಸಂಸ್ಥೆಯು ನ್ಯಾಯಾಲಯದಲ್ಲಿ ವಾದಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಜುಲೈ 14 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದ್ದು, ಅಲ್ಲಿಯವರೆಗೆ ಡ್ಯೂಟಿ ಫ್ರೀ ಅಂಗಡಿಗಳಲ್ಲಿರುವ ಪ್ರಸ್ತುತ ಸ್ಟಾಕ್ ಮೇಲೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು