ನವದೆಹಲಿ : ಉದ್ಯಮಿ ಗೌತಮ್ ಅದಾನಿ (Gautam Adani ) ಸಮೂಹದ ಪ್ರಮುಖ ಸಂಸ್ಥೆಯಾದ ‘ಅದಾನಿ ಪವರ್ ಲಿಮಿಟೆಡ್’ ( Adani Power Ltd) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ದೇಶಾದ್ಯಂತ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡಾ 46 ರಷ್ಟು ಭಾರಿ ಏರಿಕೆ ಕಂಡುಬಂದಿದ್ದು, ಒಟ್ಟು ₹4,806 ಕೋಟಿ ಲಾಭ ಗಳಿಸಿದೆ.
ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹3,385 ಕೋಟಿ ಲಾಭ ದಾಖಲಿಸಿತ್ತು. ಈ ಬಾರಿ ಕಂಪನಿಯ ಕಾರ್ಯಕ್ಷಮತೆ ಹಾಗೂ ಪವರ್ ಯುನಿಟ್‌ಗಳ ಸಮರ್ಥ ನಿರ್ವಹಣೆಯಿಂದ ಲಾಭದ ಪ್ರಮಾಣದಲ್ಲಿ ಶರವೇಗದ ಜಿಗಿತ ಕಂಡುಬಂದಿದೆ.
ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಕಾರಣ ಅದಾನಿ ಪವರ್ ಭರ್ಜರಿ ಲಾಭದಲ್ಲಿದೆ. ಇದೇ ವೇಳೆ ಕಂಪನಿ ಕಾರ್ಯನಿರ್ವಹಣೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಪವರ್ ಯುನಿಟ್, ಹಂಚಿಕೆ ಹೆಚ್ಚಿಸಲಾಗಿದೆ.
ಜೂನ್ ತ್ರೈಮಾಸಿಕ ಆದಾಯ ಶೇಕಡಾ 34ರಷ್ಟು ಏರಿಕೆಯಾಗಿವು ಮೂಲ 18,902 ಕೋಟಿ ರೂಪಾಯಿಗೆ ತಲುಪಿತ್ತು. ವಿದ್ಯುತ್ ಪ್ರಮಾಣ 16.9ರಷ್ಟು ಹೆಚ್ಚಳವಾಗಿದೆ. ಈ ಮೂಲಕ 28.8 ಬಿಲಿಯನ್ ಯೂನಿಟ್ ತಲುಪಿದೆ.
EBITDA ಬಡ್ಡಿ ತೆರಿಗೆ ಶೇಕಡಾ 40 ರಷ್ಟು ಏರಿಕೆ ಕಂಡು 7,948 ಕೋಟಿ ರೂಪಾಯಿ ತಲುಪಿದೆ. ಇದರಿಂದಾಗಿ ಕಂಪನಿಯ ಇಬಿಐಟಿಡಿಎ ಮಾರ್ಜಿನ್ ಶೇ. 40.3 ರಿಂದ ಶೇ. 42.05 ಕ್ಕೆ ವಿಸ್ತರಿಸಿದೆ.
₹15,000 ಕೋಟಿ ಬಂಡವಾಳ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್!
ಅದಾನಿ ಪವರ್ ಭರ್ಜರಿ ಲಾಭ ಕಾಣುತ್ತಿದ್ದಂತೆ ಅರ್ಹತಾ ಆಧಾರಿತ ಸಾಂಸ್ಥಿಕ ಹೂಡಿಕೆ (QIP) ಇದೀಗ ಇತರ ಮೂಲಗಳ ಮೂಲಕ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಬಂಡವಾಳ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಅದಾನಿ ಪವಾರ್ ಮತ್ತಷ್ಟು ವಿಸ್ತರಣೆಗೊಳ್ಳಲಿದೆ. ಇಷ್ಟೇ ಅಲ್ಲ ಮುಂದಿನ ಹಣಕಾಸು ವರ್ಷದಲ್ಲಿ ಲಾಭ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
