Friday, April 26, 2024

ಸತ್ಯ | ನ್ಯಾಯ |ಧರ್ಮ

ಒಡಿಶಾದ ಗೋಪಾಲ್‌ಪುರ ಬಂದರಿನ 95% ಷೇರ್‌ ಅದಾನಿಗೆ!

ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ (Adani Ports and Special Economic Zone) ಮಾರ್ಚ್ 26, ಮಂಗಳವಾರ ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ನ ಭಾಗವಾಗಿದ್ದ ಒಡಿಶಾದ ಗೋಪಾಲ್‌ಪುರ ಬಂದರಿನ 95% ಷೇರನ್ನು 3,080 ಕೋಟಿ ರುಪಾಯಿಗೆ ಖರೀದಿಸಲಿದೆ.

ರಾಯಿಟರ್ಸ್ ಪ್ರಕಾರ , ಅದಾನಿ ಪೋರ್ಟ್ಸ್ ಗೋಪಾಲ್‌ಪುರ ಬಂದರಿನಲ್ಲಿ 56% ಪಾಲನ್ನು ಶಾಪೂರ್ಜಿ ಪಲ್ಲೊಂಜಿ ಗ್ರೂಪ್‌ನಿಂದ ಮತ್ತು 39% ಪಾಲನ್ನು ಒರಿಸ್ಸಾ ಸ್ಟೀವಡೋರ್ಸ್‌ನಿಂದ ಖರೀದಿಸಲಿದೆ.

2015 ರಿಂದ ಕಾರ್ಯಾಚರಿಸುತ್ತಿರುವ ಈ ಗೋಪಾಲಪುರ ಬಂದರು ರಾಷ್ಟ್ರೀಯ ಹೆದ್ದಾರಿ-516 ಮೂಲಕ ಗೋಲ್ಡನ್ ಚತುಷ್ಪಥಕ್ಕೆ ಸಂಪರ್ಕವನ್ನು ಹೊಂದಿದೆ. ಪರದೀಪ್ ಬಂದರು ಮತ್ತು ವೈಜಾಗ್ ಬಂದರನ್ನೂ ಸಂಪರ್ಕಿಸುತ್ತದೆ, ಅತ್ಯುತ್ತಮ ರೈಲು ಮತ್ತು ರಸ್ತೆ ಸಂಪರ್ಕವನ್ನು ಹೊಂದಿದೆ.

ಗೋಪಾಲಪುರ ಬಂದರು ಕಬ್ಬಿಣದ ಅದಿರು, ಕಲ್ಲಿದ್ದಲು, ಸುಣ್ಣದ ಕಲ್ಲು, ಇಲ್ಮೆನೈಟ್ ಮತ್ತು ಅಲ್ಯುಮಿನಾಗಳಂತಹ ಬೃಹತ್ ಸರಕುಗಳನ್ನು ನಿರ್ವಹಿಸುತ್ತದೆ. ಅದಾನಿ ಫೋರ್ಟ್ಸ್ ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿ ಸರಿಸುಮಾರು 12 ಬಂದರುಗಳು ಮತ್ತು ಟರ್ಮಿನಲ್‌ಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸುತ್ತಿದೆ.

“GPL (ಗೋಪಾಲ್‌ಪುರ ಬಂದರು) ಅದಾನಿ ಗ್ರೂಪ್‌ನ ಪ್ಯಾನ್-ಇಂಡಿಯಾ ಪೋರ್ಟ್ ನೆಟ್‌ವರ್ಕ್‌ಗೆ ಸೇರುತ್ತದೆ,” ಎಂದು ಅದಾನಿ ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ತಿಳಿಸಿದ್ದಾರೆ.

ಗೋಪಾಲ್‌ಪುರ ಬಂದರು ಮತ್ತು ಪೆಟ್ರೋನೆಟ್ ಎಲ್‌ಎನ್‌ಜಿ ಗ್ರೀನ್‌ಫೀಲ್ಡ್ ಎಲ್‌ಎನ್‌ಜಿ ರಿಗ್ಯಾಸಿಫಿಕೇಶನ್ ಸ್ಟೇಷನ್ ಅನ್ನು ನಿರ್ಮಿಸಲು ನಿರ್ಧರಿಸಿವೆ, ಇದು ಬಂದರಿಗೆ ಸ್ಥಿರವಾದ, ದೀರ್ಘಾವಧಿಯ ಹಣದ ಹರಿವನ್ನು ನೀಡಲಿದೆ ಎಂದು ಗ್ರೂಪ್ ಹೇಳಿದೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ , ಶಪೂರ್ಜಿ ಪಲ್ಲೋಂಜಿ ಗ್ರೂಪ್‌ ಕಳೆದ ಕೆಲವು ತಿಂಗಳುಗಳಲ್ಲಿ ಇದು ತನ್ನ ಎರಡನೇ ಬಂದರನ್ನು ಮಾಡಿದೆ. ಇದಕ್ಕೂ ಮೊದಲು ಧರ್ಮತಾರ್ ಬಂದರನ್ನು ಜೆಎಸ್ಡಬ್ಲ್ಯೂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ 710 ಕೋಟಿ ರುಪಾಯಿಗೆ ಮಾರಾಟ ಮಾಡಿತ್ತು.

ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಅನ್ನು ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಅಕೌಂಟಿಂಗ್ ವಂಚನೆ ಆರೋಪ ಮಾಡಿದ ಒಂದು ವರ್ಷದ ನಂತರ ಸಂಭಾವ್ಯ ಸ್ವಾಧೀನದ ಸುದ್ದಿ ಹೊರ ಬಂದಿದೆ . ಈ ಆರೋಪಗಳನ್ನು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತನಿಖೆ ನಡೆಸುತ್ತಿದೆ.

ಕಳೆದ ವರ್ಷ ಆಗಸ್ಟ್ 14 ರಂದು ಸೆಬಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿತ್ತು, ಇದನ್ನು ಹಲವು ಬಾರಿ ವಿಸ್ತರಿಸಲಾಯಿತು. ಸೆಬಿ ತನ್ನ ವರದಿಯನ್ನು ಯಾವಾಗ ಸಲ್ಲಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Related Articles

ಇತ್ತೀಚಿನ ಸುದ್ದಿಗಳು