Friday, May 3, 2024

ಸತ್ಯ | ನ್ಯಾಯ |ಧರ್ಮ

ಅದಾನಿಗೆ ಮತ್ತೊಂದು ಆಘಾತ: ಹೊಸ ಆರೋಪಗಳಿಂದ ಹೂಡಿಕೆದಾರರಲ್ಲಿ ತಲ್ಲಣ, ಕುಸಿಯುತ್ತಿದೆ ಕೋಟ್ಯಧಿಪತಿಯ ಕೋಟೆ

Adani Group Stock Today: ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್‌ನ ಸಂಕಷ್ಟಗಳು ಮತ್ತೊಮ್ಮೆ ಹೆಚ್ಚಿವೆ, ಪರಿಣಾಮವಾಗಿ ಅದಾನಿ ಗ್ರೂಪ್‌ನ ಷೇರುಗಳು ಇಂದು ಗುರುವಾರ ಎಲ್ಲರ ಗಮನದಲ್ಲಿವೆ. ಸಮೂಹದ ಎಲ್ಲ ಷೇರುಗಳಲ್ಲಿ ಭಾರಿ ಕುಸಿತ ಕಾಣುತ್ತಿದೆ.

ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಗ್ರೀನ್ ಸೊಲ್ಯೂಷನ್ಸ್ ಮತ್ತು ಅದಾನಿ ವಿಲ್ಮರ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇಯಲ್ಲಿ 4% ಕ್ಕಿಂತ ಹೆಚ್ಚು ಕುಸಿದವು. ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಎಂಬ ಜಾಗತಿಕ ಸಂಸ್ಥೆಯು ಗೌತಮ್ ಅದಾನಿ ಗ್ರೂಪ್ ಅಕ್ರಮಗಳ ಆರೋಪ ಮಾಡಿದ ನಂತರ ಷೇರುಗಳಲ್ಲಿ ಈ ವ್ಯತ್ಯಾಸಗಳು ಉಂಟಾಗುತ್ತಿವೆ.

ಆರೋಪವೇನು?

OCCRP ವರದಿಯ ಪ್ರಕಾರ, ಅದಾನಿ ಗ್ರೂಪ್ ತನ್ನದೇ ಆದ ಷೇರುಗಳನ್ನು ರಹಸ್ಯವಾಗಿ ಖರೀದಿಸುವ ಮೂಲಕ ಸ್ಟಾಕ್ ಎಕ್ಸ್ಚೇಂಜಿನಲ್ಲಿ ಮಿಲಿಯನ್ ಡಾಲರುಗಳನ್ನು ಹೂಡಿಕೆ ಮಾಡಿದೆ.

ಪ್ರವರ್ತಕ ಕುಟುಂಬಕ್ಕೆ ಸಂಬಂಧಿಸಿದ ಜನರು ಮಾರಿಷಸ್ ಮೂಲದ “ಅನಾಮಧೇಯ” ಹೂಡಿಕೆ ನಿಧಿಗಳ ಮೂಲಕ ಅದಾನಿ ಗ್ರೂಪ್ ಷೇರುಗಳಲ್ಲಿ ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಬಿಲಿಯನೇರ್ ಜಾರ್ಜ್ ಸೊರೊಸ್ ಮತ್ತು ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್‌ನಂತಹ ಸಂಸ್ಥೆಗಳಿಂದ OCCRP ಹಣವನ್ನು ಪಡೆಯುತ್ತದೆ ಎಂದು ಅದು ಆರೋಪಿಸಿದೆ. ಈ ಜಾರ್ಜ್ ಸೊರೊಸ್ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಕಾಲಕಾಲಕ್ಕೆ ಟೀಕಿಸುತ್ತಲೇ ಇರುವ ಕೋಟ್ಯಾಧಿಪತಿ. ಈತ ಕಾಂಗ್ರೆಸ್‌ ಬೆಂಬಲಿಗ ಎಂದು ಬಲಪಂಥೀಯ ಟ್ರೋಲ್‌ಗಳು ಆರೋಪಿಸುತ್ತಿದ್ದವು. ಆದರೆ ಈಗ ಈತನ ಹೆಸರು ಅದಾನಿಯೊಂದಿಗೆ ತೇಲಿ ಬರುವುದರೊಂದಿಗೆ ಟ್ರೋಲ್‌ಗಳು ಕಂಗಾಲಾಗಿವೆ

ಯಾವ ಸ್ಟಾಕ್ ಎಷ್ಟು ಕಡಿಮೆಯಾಗಿದೆ?

ಅದಾನಿ ಎಂಟರ್‌ಪ್ರೈಸಸ್- ಆರಂಭಿಕ ವಹಿವಾಟಿನಲ್ಲಿ 4.3% ಕುಸಿದು 2403.60 ರೂ.

ಅದಾನಿ ಪೋರ್ಟ್ – ಅದಾನಿ ಪೋರ್ಟ್ ಷೇರುಗಳು 2.81% ಕುಸಿದು 795.95 ರೂ.

ಅದಾನಿ ಪವರ್ – ಅದಾನಿ ಪವರ್ ಷೇರುಗಳು 4.58% ಕುಸಿದು 313.35 ರೂ.

ಅದಾನಿ ಗ್ರೀನ್ ಎನರ್ಜಿ – ಅದಾನಿ ಗ್ರೀನ್ ಎನರ್ಜಿ ಷೇರುಗಳು 4.35% ಕುಸಿದು 805.05 ರೂ.

ಅದಾನಿ ಗ್ರೀನ್ ಸೊಲ್ಯೂಷನ್ – ಅದಾನಿ ಗ್ರೀನ್ ಸೊಲ್ಯೂಷನ್ ಷೇರುಗಳು 4% ರಷ್ಟು ಕುಸಿದು 626.40 ರೂ.

ಅದಾನಿ ವಿಲ್ಮಾರ್ – ಅದಾನಿ ವಿಲ್ಮರ್ ಷೇರುಗಳು 1.8% ಕುಸಿದು 362 ರೂ.

Related Articles

ಇತ್ತೀಚಿನ ಸುದ್ದಿಗಳು