Home ಅಂಕಣ ಯುರೋಪಿಯನ್ನರು ಗುಹೆಗಳಲ್ಲಿ ಹಸಿ ಮಾಂಸ ತಿನ್ನುತ್ತಿದ್ದಾಗ ಆಫ್ರಿಕನ್ನರು ಬೆಂಕಿ ಕಂಡುಹಿಡಿದಿದ್ದರು!

ಯುರೋಪಿಯನ್ನರು ಗುಹೆಗಳಲ್ಲಿ ಹಸಿ ಮಾಂಸ ತಿನ್ನುತ್ತಿದ್ದಾಗ ಆಫ್ರಿಕನ್ನರು ಬೆಂಕಿ ಕಂಡುಹಿಡಿದಿದ್ದರು!

0

“..ಯುರೋಪಿಯನ್ ನಕ್ಷೆ ತಯಾರಕರು ಬಿಡಿಸಿದ ನಕ್ಷೆಗಳನ್ನು ನೀವು ನೋಡಿದರೆ, ಆಫ್ರಿಕಾವನ್ನು ಅಮೇರಿಕಾಕ್ಕಿಂತ ಚಿಕ್ಕದಾಗಿ ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು ಬಹುತೇಕ ಏಷ್ಯಾ ಖಂಡದಷ್ಟೇ ದೊಡ್ಡದಾಗಿದೆ..” ಮೂಲ ಬರಹ ಪಿಎಲ್ಒ ಲುಮುಂಬಾ, ಕನ್ನಡಕ್ಕೆ ಅನುವಾದ ವಿಆರ್ ಕಾರ್ಪೆಂಟರ್

ಆಫ್ರಿಕಾದ ಹೋರಾಟಗಾರರ ಕುರಿತು ಹುಡುಕುತ್ತಿದ್ದಾಗ ಒಂದು ಭಾಷಣದ ವಿಡಿಯೋ ಕಣ್ಣಿಗೆ ಬಿತ್ತು. ಅದು ಪ್ಯಾಟ್ರಿಕ್ ಲಾಕ್ ಒಟಿಯೆನೊ ಲುಮುಂಬಾ ಎಂಬ ಕೀನ್ಯಾದ ಪ್ರಸಿದ್ಧ ವಕೀಲರು, ಶಿಕ್ಷಣತಜ್ಞರು ಮತ್ತು ಪ್ರಖರ ಪ್ಯಾನ್-ಆಫ್ರಿಕನ್ ಚಿಂತಕರದ್ದು. ಆಫ್ರಿಕಾ ಖಂಡದ ಒಗ್ಗಟ್ಟು, ಸ್ವಾವಲಂಬನೆ ಮತ್ತು ಆಫ್ರಿಕನ್ನರು ‘ಬೌದ್ಧಿಕ ವಸಾಹತುಶಾಹಿ’ಯಿಂದ ಮುಕ್ತಿ ಪಡೆಯುವ ಬಗ್ಗೆ ಅವರು ನಿರಂತರವಾಗಿ ದನಿ ಎತ್ತುತ್ತಿದ್ದಾರೆ. ಆಫ್ರಿಕನ್ನರು ತಮ್ಮ ಭವ್ಯ ಇತಿಹಾಸವನ್ನು ಮರೆತು ಪಾಶ್ಚಿಮಾತ್ಯರನ್ನು ಕುರುಡಾಗಿ ಅನುಕರಿಸುವುದನ್ನು ಮತ್ತು ನವ-ವಸಾಹತುಶಾಹಿಗೆ ತಲೆಬಾಗುವುದನ್ನು ಅವರು ಕಟುವಾಗಿ ವಿರೋಧಿಸುತ್ತಾರೆ. ಅದನ್ನೇ ಎಷ್ಟೊಂದು ಚೆನ್ನಾಗಿ ವಿಡಿಯೋದಲ್ಲಿ ಹೇಳಿದರೆಂದರೆ, ಅವರ ಮಾತುಗಳನ್ನು ಹಾಗೆಯೇ ಕೇಳುತ್ತಾ ಹೋದಂತೆ ಆಫ್ರಿಕನ್ನರ ಸಂಕಟ, ಸಂಕೋಲೆಗಳು ಕಣ್ಣಮುಂದೆ ರಾಚಿಕೊಂಡವು. ಅವರ ಮಾತುಗಳನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದೇನೆ…ಓದಿ…

ಅವರು ನಮ್ಮ ಖಂಡಕ್ಕೆ ಬಂದರು ಮತ್ತು ನಮ್ಮನ್ನು ತಾವೇ ಕಂಡುಹಿಡಿದೆವು ಎಂದು ಹೇಳಿಕೊಂಡರು. ಅದೂ ನಾವಿಲ್ಲಿಯೇ ಇದ್ದಾಗ, ಅವರು ‘ಕೇಪ್ ಆಫ್ ಗುಡ್ ಹೋಪ್’ ಅನ್ನು ಕಂಡುಹಿಡಿದರು ಮತ್ತು ನಮ್ಮನ್ನೇ ಕಂಡುಹಿಡಿದೆವು ಎಂದು ಹೇಳಿಕೊಂಡರು. ನಾವಿಲ್ಲಿಯೇ ಇದ್ದಾಗ, ಅವರು ಬಂದು ಎಲ್ಲಾ ಸರೋವರಗಳು ಮತ್ತು ನದಿಗಳನ್ನು ತಾವೇ ಕಂಡುಹಿಡಿದಂತೆ ನಟಿಸಿದರು. ಹೀಗೆಯೇ ಅವರು ಬಂದದ್ದು. ನಾವಿಲ್ಲಿಯೇ ಇದ್ದಾಗ, ಅವರು ಬಂದು ನಮಗೆ ಯಾವುದೇ ಇತಿಹಾಸವಿಲ್ಲ ಎಂದು ಬಿಂಬಿಸಿದರು. ಆದರೆ ಆಫ್ರಿಕಾ ಖಂಡವು ‘ಮಾನವ ನಾಗರಿಕತೆಯ ತೊಟ್ಟಿಲು’ ಎಂಬುದನ್ನು ನಮಗೆ ನಾವೇ ಸಾಬೀತುಪಡಿಸಿಕೊಳ್ಳಲು ಇತಿಹಾಸವನ್ನು ಒಮ್ಮೆ ಅವಲೋಕಿಸೋಣ.

ನಿಮಗೆ ಗೊತ್ತಿರಲಿ, ಯುರೋಪಿಯನ್ನರು ಇನ್ನೂ ಗುಹೆಗಳಲ್ಲಿ ವಾಸಿಸುತ್ತಿದ್ದಾಗಲೇ, ಮಾಲಿಯ ‘ಡೊಗೊನ್’ ಜನರು ನಕ್ಷತ್ರಗಳನ್ನು ಗುರುತಿಸಿದ್ದರು. ಯುರೋಪಿಯನ್ನರು ಇನ್ನೂ ಹಸಿ ಮಾಂಸವನ್ನು ತಿನ್ನುತ್ತಿದ್ದಾಗಲೇ, ಆಫ್ರಿಕನ್ನರು ಬೆಂಕಿಯನ್ನು ಕಂಡುಹಿಡಿದಿದ್ದರು. ಆಫ್ರಿಕನ್ನರೇ ಈ ವಿಚಾರದಲ್ಲಿ ಪ್ರವರ್ತಕರಾಗಿದ್ದರು.

ನೀವು ಎಲ್ಲಾ ಧರ್ಮಗಳನ್ನು ಮತ್ತು ಅವುಗಳ ಸೃಷ್ಟಿಯ ಕಥೆಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ನಾನು ಬೈಬಲ್ ಅನ್ನು ಆಳವಾಗಿ ಓದಿದವನು. ದೇವರು “ನಮ್ಮದೇ ರೂಪದಲ್ಲಿ ಮನುಷ್ಯನನ್ನು ಸೃಷ್ಟಿಸೋಣ* ಎಂದು ಹೇಳಿದನು ಮತ್ತು ಮಣ್ಣನ್ನು ತೆಗೆದುಕೊಂಡು ಅದರಿಂದ ಮನುಷ್ಯನನ್ನು ರೂಪಿಸಿದನು ಎಂದು ಬೈಬಲ್ ಹೇಳುತ್ತದೆ. ನಾನು ಕೊನೆಯ ಬಾರಿ ಪರೀಕ್ಷಿಸಿದಾಗ ಮಣ್ಣು ಕಂದು ಅಥವಾ ಕಪ್ಪು ಬಣ್ಣದ್ದಾಗಿತ್ತು, ಖಂಡಿತ ಬಿಳಿ ಬಣ್ಣದ್ದಾಗಿರಲಿಲ್ಲ!. ಇವತ್ತು ಬೆಳಿಗ್ಗೆಯ ಇವತ್ತು ಬೆಳಿಗ್ಗೆಯೂ ನಾನು ಪರೀಕ್ಷಿಸಿದ್ದೇನೆ, ಮಣ್ಣು ಇನ್ನೂ ಕಪ್ಪಾಗಿದೆ. ಮಣ್ಣು ಇನ್ನೂ ಕಂದು ಬಣ್ಣದಲ್ಲಿದೆ. ಹಾಗಾಗಿ ದೇವರ ರೂಪದಲ್ಲಿ ಯಾರನ್ನಾದರೂ ಸೃಷ್ಟಿಸಿದ್ದರೆ, ಅದು ಕಪ್ಪು ಜನಾಂಗದವರಾದ ನಾವು. ಇಸ್ಲಾಂ ಕೂಡ ಇದನ್ನೇ ಹೇಳುತ್ತದೆ.

ನಿಮಗೆ ಗೊತ್ತಿರಲಿ, ಆಫ್ರಿಕಾವನ್ನು ಬಹಳವಾಗಿ ನಿಂದಿಸಲಾಗಿದೆ. ಯುರೋಪಿಯನ್ ನಕ್ಷೆ ತಯಾರಕರು ಬಿಡಿಸಿದ ನಕ್ಷೆಗಳನ್ನು ನೀವು ನೋಡಿದರೆ, ಆಫ್ರಿಕಾವನ್ನು ಅಮೇರಿಕಾಕ್ಕಿಂತ ಚಿಕ್ಕದಾಗಿ ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು ಬಹುತೇಕ ಏಷ್ಯಾ ಖಂಡದಷ್ಟೇ ದೊಡ್ಡದಾಗಿದೆ. ಅವರು ಸದಾ ನಮ್ಮನ್ನು ಕಡೆಗಣಿಸುತ್ತಾರೆ. ಅವರು ಕರೆಯುವ ಮಧ್ಯಪ್ರಾಚ್ಯ’ (Middle East) ಎಂಬ ಪದವನ್ನೇ ನೋಡಿ, ಅದರಲ್ಲಿ ‘ಮಧ್ಯ’ ಎಲ್ಲಿದೆ?. ಇಸ್ರೇಲ್ ಆಫ್ರಿಕಾದ ಭಾಗವಲ್ಲ, ಆದರೆ ಮಡಗಾಸ್ಕರ್ ಆಫ್ರಿಕಾದ ಭಾಗ ಎಂದು ಹೇಳಲು ಹೇಗೆ ಸಾಧ್ಯ?.

ಮನಸ್ಸಿನ ವಸಾಹತುಶಾಹಿ ನಿರ್ಮೂಲನೆಯ (decolonization of the mind) ಬಗ್ಗೆ ಮಾತನಾಡಲು ನಾವು ಇಲ್ಲಿ ಸೇರಿರುವಾಗ, ನಮ್ಮ ಇತಿಹಾಸವನ್ನು ನಾವು ನೆನಪಿಸಿಕೊಳ್ಳಲೇಬೇಕು. ಪಿರಮಿಡ್‌ಗಳನ್ನು ನಿರ್ಮಿಸಿದ್ದು ಇದೇ ಆಫ್ರಿಕಾದಲ್ಲಿ. ಅದು ಇಂದಿಗೂ ವಾಸ್ತುಶಿಲ್ಪ ಮತ್ತು ಇಂಜಿನಿಯರಿಂಗ್‌ಗೆ ಸವಾಲಾಗಿದೆ. ಅದನ್ನು ನಿರ್ಮಿಸಿದ್ದು ಆಫ್ರಿಕನ್ನರು. ಚೀನಾದ ಮಹಾಗೋಡೆಗಿಂತ ನಾಲ್ಕು ಪಟ್ಟು ಉದ್ದವಿರುವ ಬೆನಿನ್ ಗೋಡೆಗಳಿರುವುದು ಇದೇ ಆಫ್ರಿಕಾದಲ್ಲಿ. ಇಥಿಯೋಪಿಯಾದಲ್ಲಿ ಮಣ್ಣಿನಿಂದಲೇ ಕೊರೆದು ತೆಗೆದ ಲಾಲಿಬೆಲಾ ದೇವಾಲಯಗಳನ್ನು ನಿರ್ಮಿಸಿದ್ದು ಇದೇ ಆಫ್ರಿಕಾದಲ್ಲಿ. ಜಿಂಬಾಬೈಯ ಮೊನೊಮಟಾಪಾದ ಮಹಾಗೋಡೆಗಳನ್ನು ನಿರ್ಮಿಸಿದ್ದು ಇದೇ ಆಫ್ರಿಕಾದಲ್ಲಿ. ನೀವು ಪ್ರಪಂಚದ ಯೋಧರನ್ನು ನೋಡಿದರೆ, ಪ್ರಸ್ತುತ ಬೆನಿನ್ ದೇಶದಲ್ಲಿರುವ ಡಹೋಮಿಯ ಅಮೆಜಾನ್ ಯೋಧರು ಕಂಡುಬಂದಿದ್ದಾರೆ. ಅಂಗೋಲಾದಲ್ಲಿ ರಾಜ ಜಿಂಗಾ ಇದ್ದರು. ಆಫ್ರಿಕಾ ಮಾನವ ನಾಗರಿಕತೆಯ ತೊಟ್ಟಿಲು.

ನಾನೊಬ್ಬ ಯುವಕನಾಗಿದ್ದಾಗ, ಜಾನ್ಸೆಂಜ್ ಜಾನ್ ಅವರ ಘಾನಾದ ‘ಮುಂಟು’ ಎಂಬ ನಾಟಕವನ್ನು ಓದಿದ್ದೆ. ಅದರಲ್ಲಿ ಆತ ಹೀಗೆ ಹೇಳುತ್ತಾನೆ: “ನಮಗೆ ಕೆಲವು ವಿಷಯಗಳು ತಿಳಿದಿವೆ ಮತ್ತು ಕೆಲವು ವಿಷಯಗಳು ತಿಳಿದಿಲ್ಲ. ಆದರೆ ಜಗತ್ತನ್ನು ಸೃಷ್ಟಿಸಿದ್ದು ‘ಒಡೊಮಾನ್ನೊಮಾ’ ಎಂಬುದು ನಮಗೆ ತಿಳಿದಿದೆ. ಆ ಒಡೊಮಾನ್ನೊಮಾ ಎಂದರೆ ದೇವರು. ಆ ದೇವರು ಕ್ರಿಶ್ಚಿಯನ್ ಅಲ್ಲ, ನ್ ಅಲ್ಲ, ಮುಸ್ಲಿಂ ಅಲ್ಲ ಅಥವಾ ಇನ್ಯಾವುದೂ ಅಲ್ಲ; ಏಕೆಂದರೆ ದೇವರು ಒಂದು ಶಕ್ತಿ. ಆತ ಒಂದು ಶಕ್ತಿಯಾಗಿದ್ದರೆ, ಆತ ಈ ಎಲ್ಲವೂ ಆಗಿರಲು ಸಾಧ್ಯವಿಲ್ಲ”. ಡೆಸ್ಮಂಡ್ ಟುಟು ತಮ್ಮ ಪುಸ್ತಕವೊಂದರಲ್ಲಿ ಬರೆಯುತ್ತಾರೆ, “ದೇವರು ಕ್ರಿಶ್ಚಿಯನ್ ಅಲ್ಲ”. ಕ್ರಿಶ್ಚಿಯನ್ ನಂಬಿಕೆಯುಳ್ಳವರಿಗೂ ಹೇಳುವುದಾದರೆ, ಸ್ವತಃ ಕ್ರಿಸ್ತನು ಕೂಡ ಕ್ರಿಶ್ಚಿಯನ್ ಆಗಿರಲಿಲ್ಲ; ಕ್ರಿಶ್ಚಿಯಾನಿಟಿ ಎಂಬುದು ಕ್ರಿಸ್ತನ ನಂತರ ಬಂದ ಧರ್ಮ.

ನಾಗರಿಕತೆಯ ಹೆಸರಿನಲ್ಲಿ ದೇವರನ್ನು ಹೇಗೆ ತಮ್ಮದಾಗಿಸಿಕೊಂಡರು ಎಂಬುದನ್ನು ನೀವು ನೋಡಬಹುದು. ವರ್ಷಗಳ ಕಾಲ ಅವರು ದೇವರನ್ನು ಬೆಳ್ಳಗಾಗಿಸುತ್ತಾ ಬಂದರು. ದೇವರು ಮಧ್ಯಪ್ರಾಚ್ಯದಲ್ಲಿದ್ದಾಗ, ಕ್ರಿಸ್ತನು ಕೂಡ ಮಧ್ಯಪ್ರಾಚ್ಯದಲ್ಲಿದ್ದಾಗ ಈಗ ನಮಗೆ ತೋರಿಸುತ್ತಿರುವಂತೆ ಆತ ಬಿಳಿಯನಾಗಿರಲಿಲ್ಲ. ಅವರು ಕ್ರಿಸ್ತನನ್ನು ಗ್ರೀಕ್‌ಗೆ ತೆಗೆದುಕೊಂಡು ಹೋಗಿ ಆತನನ್ನು ಬಿಳಿಯನನ್ನಾಗಿ ಮಾಡಿ ಗ್ರೀಕ್ ಮಾತನಾಡುವಂತೆ ಮಾಡಿದರು. ಅಲ್ಲಿ ಅವರಿಗೆ ಸುಸ್ತಾದಾಗ ಆತನನ್ನು ರೋಮ್‌ಗೆ ನನ್ನು ರೋಮ್‌ಗೆ ಕೊಂಡೊಯ್ದು ಲ್ಯಾಟಿನ್ ಮಾತನಾಡುವಂತೆ ಮಾಡಿದರು. ಅಲ್ಲಿಯೂ ಸುಸ್ತಾದಾಗ ‘ರೋಮನ್ ಕ್ಯಾಥೋಲಿಕ್ ಚರ್ಚ್’ ಎಂಬ ಧರ್ಮವನ್ನು ಸೃಷ್ಟಿಸಿದರು. ಆದರೆ ದೇವರು ಕ್ಯಾಥೋಲಿಕ್ ಆಗಿರಲಿಲ್ಲ!. ಆಮೇಲೆ ಆತನನ್ನು ಇಂಗ್ಲೆಂಡ್‌ಗೆ ಕೊಂಡೊಯ್ದು ಕಿಂಗ್ ಹೆನ್ರಿ VIII ಮದುವೆಯಾಗಲು ಅನುಕೂಲವಾಗುವಂತೆ ‘ಚರ್ಚ್ ಆಫ್ ಇಂಗ್ಲೆಂಡ್’ ಸ್ಥಾಪಿಸಿ ರಾಣಿಯನ್ನು ಅದರ ಮುಖ್ಯಸ್ಥಳನ್ನಾಗಿ ಮಾಡಿದರು. ಆದರೆ ದೇವರು ಆಂಗ್ಲಿಕನ್ ಅಲ್ಲ.ನಂತರ ಸುಸ್ತಾದಾಗ ಸ್ಕಾಟ್ಲಂಡ್‌ಗೆ ಕೊಂಡೊಯ್ದು ಆತನನ್ನು ಪ್ರೆಸ್ಟಿಟೇರಿಯನ್ ಮಾಡಿದರು. ಆಮೇಲೆ ಮೆಥಡಿಸ್ಟ್ ಮಾಡಿದರು. ಜರ್ಮನಿಗೆ ಕೊಂಡೊಯ್ದು ಲೂಥರನ್ ಮಾಡಿದರು. ಯುನೈಟೆಡ್ ಸ್ಟೇಟ್ಸ್ಗೆ ಹೋದಾಗ ಎಪಿಸ್ಕೋಪೇಲಿಯನ್ ಮಾಡಿದರು. ಆದರೆ ದೇವರು ಇವು ಯಾವುದೂ ಅಲ್ಲ!.

ನಾನು ಪೂಜಿಸುವ ದೇವರನ್ನು ಸತ್ಯ ಮತ್ತು ಆತ್ಮಭಾವದಿಂದ ಪೂಜಿಸಲಾಗುತ್ತದೆ. ನಾನು ನಿಮಗೆ ಹೇಳುತ್ತೇನೆ, ಆಫ್ರಿಕನ್ನರನ್ನು ಈ ಭೂಮಿಯಿಂದ ಅಳಿಸಿಹಾಕಲು ಅವರು ಏನೆಲ್ಲಾ ಮಾಡಿದರೂ, ಅವರದೇ ಇತಿಹಾಸದಲ್ಲಿ ಅವರ ಎಲ್ಲಾ ಶ್ರೇಷ್ಠ ವ್ಯಕ್ತಿಗಳು ಆಫ್ರಿಕಾಕ್ಕೆ ಬಂದಿದ್ದರು ಎಂದು ಅವರು ಒಪ್ಪಿಕೊಳ್ಳುತ್ತಾರೆ. ಅವರು ಆಫ್ರಿಕಾಗೆ ಏಕೆ ಬಂದರು ಮತ್ತು ಏನು ಮಾಡಲು ಬಂದರು?. ಸಾಕ್ರಟೀಸ್ ಆಫ್ರಿಕಾದಲ್ಲಿದ್ದನು. ಆಫ್ರಿಕಾಕ್ಕೆ ಬಂದಾಗ ಆತ ಯೊರುಬಾ ಬುಡಕಟ್ಟಿನ ಓರುನ್ಶಿಲಾ ಎಂಬ, ತನಗಿಂತಲೂ ಶ್ರೇಷ್ಠ ತತ್ವಜ್ಞಾನಿಯನ್ನು ಭೇಟಿಯಾದನು. ಪೈಥಾಗರಸ್ ಆಫ್ರಿಕಾಗೆ ಬಂದನು. ಅವನು ಆಫ್ರಿಕಾಗೆ ಏನು ಮಾಡಲು ಬಂದನು? ಜ್ಞಾನ ಎಲ್ಲಿದೆಯೋ ಅಲ್ಲಿಗೆ ನೀವು ಗೌರವ ಸಲ್ಲಿಸಲು ಬಂದಿದ್ದನು. ಮೋಸೆಸ್ ಆಫ್ರಿಕಾಗೆ ಬಂದನು. ಆತ ಆಫ್ರಿಕಾಗೆ ಏನು ಮಾಡಲು ಬಂದ? ಜ್ಞಾನ ಎಲ್ಲಿದೆಯೋ ಅಲ್ಲಿಗೆ ಗೌರವ ಸಲ್ಲಿಸಲು. ಮುಹಮ್ಮದ್ ಆಫ್ರಿಕಾಗೆ ಬಂದರು; ಆಫ್ರಿಕಾಗೆ ಏಕೆ ಬಂದರು? ಜ್ಞಾನ ಎಲ್ಲಿದೆಯೋ ಅಲ್ಲಿಗೆ ಗೌರವ ಸಲ್ಲಿಸಲು. ಕ್ರಿಸ್ತ ಅಥವಾ ಯೇಶುವಾ ಆಫ್ರಿಕಾಗೆ ಬಂದರು; ಆಫ್ರಿಕಾಗೆ ಏಕೆ ಬಂದರು? ಜ್ಞಾನ ಎಲ್ಲಿದೆಯೋ ಅಲ್ಲಿಗೆ ಗೌರವ ಸಲ್ಲಿಸಲು. ಹಿಂದೂಗಳ ಭಗವಾನ್ ಕೃಷ್ಣ ಕೂಡಾ ಆಫ್ರಿಕಾಗೆ ಬಂದರು; ಆಫ್ರಿಕಾಗೆ ಏಕೆ ಬಂದರು?

ಜ್ಞಾನ ಎಲ್ಲಿದೆಯೋ ಅಲ್ಲಿಗೆ ಗೌರವ ಸಲ್ಲಿಸಲು.

ಇದು ಮಾನವ ನಾಗರಿಕತೆಯ ತೊಟ್ಟಿಲು!. ಆದರೆ ವರ್ಷಗಳ ಕಾಲ ನಮ್ಮನ್ನು ಬಹಳವಾಗಿ ಥಳಿಸಲಾಗಿದೆ. ವರ್ಷಗಳ ಕಾಲ ನಮ್ಮನ್ನು ನಿಂದಿಸಲಾಗಿದೆ. ನಮ್ಮನ್ನು ಕಂಡರೆ ಅವರಿಗಿದ್ದ ಭಯದಿಂದಲೇ ಅವರು ನಮ್ಮನ್ನು ಗುಲಾಮರನ್ನಾಗಿಸಿದರು.ನಮ್ಮ ಮೇಲಿನ ಭಯದಿಂದಲೇ ನಮ್ಮನ್ನು ವಸಾಹತುಶಾಹಿಗೆ ಗುರಿಪಡಿಸಿದರು.’ ಈಗ ಅವರು ‘ನಿಯೋ-ಕೊಲೋನಿಯಲ್’ ಎಂಬ ಹೊಸ ಪ್ರಾಜೆಕ್ಟ್ ಹೊಂದಿದ್ದಾರೆ. ಈ ನವ-ವಸಾಹತುಶಾಹಿ ಪ್ರಾಜೆಕ್ಟ್ ಎಂಬುದು ವಸಾಹತುಶಾಹಿಯ ಅವಳಿ ಮಗು ಮಗು ಇದ್ದಂತೆ, ಇವೆರಡರ ತಾಯಿ ‘ಸಾಮ್ರಾಜ್ಯಶಾಹಿ’. ಸಾಮ್ರಾಜ್ಯಶಾಹಿ ತನ್ನ ಗುಣವನ್ನು ಎಂದಿಗೂ ಬದಲಾಯಿಸುವುದಿಲ್ಲ, ಅದು ಕೇವಲ ತಾನು ಧರಿಸುವ ಮುಖವಾಡಗಳನ್ನು ಮಾತ್ರ ಬದಲಾಯಿಸುತ್ತದೆ. ನಾವು ಇದರ ಬಗ್ಗೆ ಎಚ್ಚರದಿಂದಿರಬೇಕು. ಅವರು ಇಲ್ಲಿಗೆ ಬಂದು ಕ್ರಿಶ್ಚಿಯನ್ ಧರ್ಮವನ್ನು ದುರುಪಯೋಗಪಡಿಸಿಕೊಂಡರು, ಪ್ರಾರ್ಥನೆಯಲ್ಲಿ ನಮ್ಮ ಕಣ್ಣುಗಳನ್ನು ಮುಚ್ಚುವಂತೆ ನಮಗೆ ಹೇಳಿದರು; ನಾವು ಕಣ್ಣು ತೆರೆದು ನೋಡುವಷ್ಟರಲ್ಲಿ, ನಮ್ಮ ಭೂಮಿ ಮಾಯವಾಗಿತ್ತು ಎಂದು ನಮ್ಮ ಹಲವಾರು ಹಿರಿಯರು ಹೇಳಿದ್ದಾರೆ!. ಅವರ ಅಸಲಿಯತ್ತು ಅದೇ. ಅವರು ನಮ್ಮ ಸ್ನೇಹಿತರಲ್ಲ.

ರಾಬರ್ಟ್ ಮಂಗಲಿಸೊ ಸೊಬುಕೈ ಹೇಳಿದ ಮಾತು ನನಗೆ ಈಗಲೂ ಕೇಳಿಸುತ್ತಿದೆ: “ಜಗತ್ತಿನಲ್ಲಿ ಇರುವುದು ಒಂದೇ ಒಂದು ಜನಾಂಗ, ಅದು ಮಾನವ ಜನಾಂಗ”. ಆದರೆ ಬಿಳಿಯರು ಇದನ್ನು ಮರೆತಿದ್ದಾರೆ. ಅರಬ್ಬರು ಇದನ್ನು ಮರೆತಿದ್ದಾರೆ. ಚೀನೀಯರು ಇದನ್ನು ಮರೆತಿದ್ದಾರೆ. ಇರುವುದು ಒಂದೇ ಮಾನವ ಜನಾಂಗ ಎಂಬುದು ಆಫ್ರಿಕನ್ನರಾದ ನಮಗೆ ಮಾತ್ರ ತಿಳಿದಿದೆ. ಇದು ನಿಜಕ್ಕೂ ದೇವರ ಆದೇಶ ಎಂದು ಅವರಿಗೆ ನೆನಪಿಸುವುದು ನಮ್ಮ ಕರ್ತವ್ಯ.

ಏಕೆಂದರೆ ನಾನು ಪೂಜಿಸುವ ದೇವರನ್ನು ಸಣ್ಣ ಧರ್ಮಗಳಲ್ಲಿ ಬಂಧಿಸಿಡಲು ಸಾಧ್ಯವಿಲ್ಲ. ನಾನು ಪೂಜಿಸುವ ದೇವರನ್ನು ಸಣ್ಣ ಪುಸ್ತಕಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ನಾನು ಪೂಜಿಸುವ ದೇವರು ಸರ್ವವ್ಯಾಪಿ. ಆತ ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ ಮತ್ತು ನಮ್ಮ ನರನಾಡಿಗಳಲ್ಲಿ ನೆಲೆಸಿದ್ದಾನೆ. ಆತನನ್ನು ಸತ್ಯವಾಗಿ ತಿಳಿದಿರುವುದು ಆಫ್ರಿಕನ್ನರಾದ ನಾವು ಮಾತ್ರ. ಆತನನ್ನು ಶ್ಲಾಘಿಸಬೇಕಾದರೆ, ನಾವು ಆತನನ್ನು ವಿಭಿನ್ನವಾಗಿ ಅರ್ಥಮಾಡಿಕೊಳ್ಳಬೇಕು. ನಾವು ಆತನನ್ನು ಆತ್ಮಭಾವದಿಂದ ಅರ್ಥಮಾಡಿಕೊಳ್ಳಬೇಕು.

ನಾನು ಪ್ರಪಂಚವನ್ನು ನೋಡಿದ್ದೇನೆ, ಮತ್ತು ಆಫ್ರಿಕಾವನ್ನು ಆಗಾಗ್ಗೆ ನೋಡುತ್ತಲೇ, ಆಫ್ರಿಕಾದ ಬಗ್ಗೆ ಯೋಚಿಸಿದಾಗೆಲ್ಲಾ, ಆದರ ಸ್ಥಿತಿಯ ಬಗ್ಗೆ ಕಲ್ಪಿಸಿಕೊಂಡಾಗೆಲ್ಲಾ, ಸುಡಾನ್‌ನ ಪ್ರಸಿದ್ಧ ಕವಿ ಅಲ್ ಫೈತೂರಿ ಅವರ ಸಾಲುಗಳನ್ನು ಹೇಳುತ್ತೇನೆ: “ಓ ಆಫ್ರಿಕಾ, ನಿನ್ನ ಸಾಮರ್ಥ್ಯವನ್ನು ನೀನೇಕೆ ಅರಿತುಕೊಳ್ಳಲಿಲ್ಲ?.

ಇದಕ್ಕೆ ಕಾರಣ ಬಹಳ ಸರಳವಾಗಿದೆ. ಅವರು ಇಲ್ಲಿಗೆ ಬಂದು ನಮ್ಮ ಮನಸ್ಸು ಮತ್ತು ಆಧ್ಯಾತ್ಮಿಕತೆಗೆ ಏನನ್ನೋ ಮಾಡಿದರು. ಅವರು ನಮಗೆ ಏನು ಮಾಡಿದರು ಎಂದು ಅರ್ಥಮಾಡಿಕೊಳ್ಳಲು ಬಹಳಷ್ಟು ಜನ ಪ್ರಯತ್ನಿಸಿದ್ದಾರೆ. ನಾನು ಅವೆಲ್ಲವನ್ನೂ ಉಲ್ಲೇಖಿಸುವುದಿಲ್ಲ. ಆದರೆ ನಿಮ್ಮಲ್ಲಿ ಕೆಲವರಿಗೆ ತಿಳಿದಿರುವ ಒಂದು ನಾಟಕೀಯ ಕಥೆಯನ್ನು ನಾನು ಉಲ್ಲೇಖಿಸುತ್ತೇನೆ. ಆಫೋ ಅಮೇರಿಕನ್ ನಿರ್ದೇಶಕ ಅಲೆಕ್ಸ್ ಹ್ಯಾಲಿ ‘ರೂಟ್ಸ್’ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಆ ರೂಟ್ಸ್ ಚಿತ್ರದಲ್ಲಿ, ಈಗಿನ ಗ್ಯಾಂಬಿಯಾದ ಜುಪುರೆ ಗ್ರಾಮದಿಂದ ಕಿತ್ತುಕೊಂಡು ಬರಲಾದ ಕುಂಟಾ ಕಿಂಟೆ ಎಂಬ ಯುವಕನ ಜೀವನವನ್ನು ಅವರು ಚಿತ್ರಿಸಿದ್ದಾರೆ. ಅವರು ಕುಂಟಾ ಕಿಂಟೆಯನ್ನು ಅಮೆರಿಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿಗೆ ಕರೆದೊಯ್ದು ಅವನಿಗೆ ಮಾಡುವ ಮೊದಲ ಕೆಲಸವೆಂದರೆ, ಅವನ ಹೆಸರನ್ನು ನ್ನು ಬದಲಾಯಿಸುವಂತೆ ಬದಲಾ ಅವನನ್ನು ಹೊಡೆಯುವುದು. ಕುಂಟಾ ಕಿಂಟೆ ಎಂಬ ಹೆಸರನ್ನು ಅವನಿಂದ ಹೊಡೆದುಹಾಕಿ ‘ಟೋಬಿ’ ಎಂಬ ಹೊಸ ಹೆಸರನ್ನು ಪರಿಚಯಿಸುತ್ತಾರೆ.

ನಮಗೂ ಅವರು ಮಾಡಿದ್ದು ಇದನ್ನೇ. ಅವರು ನಮ್ಮೊಳಗಿನ ‘ಆಫ್ರಿಕನ್‌’ತನವನ್ನು ಹೊಡೆದುಹಾಕಿದರು. ನಾವು ಸಂಪೂರ್ಣವಾಗಿ ಖಾಲಿಯಾದಾಗ, ನಮಗೆ ಸಂಪೂರ್ಣವಾಗಿ ಅನ್ಯವಾದದ್ದನ್ನು ನಮ್ಮಲ್ಲಿ ತುಂಬಿದರು. ಆಮೇಲೆ ನಾವು ಅವರಂತೆಯೇ ಯೋಚಿಸಲು ಶುರುಮಾಡಿದೆವು. ನಮ್ಮ ಕೂದಲು ಚೆನ್ನಾಗಿಲ್ಲ ಎಂದು ನಾವೇ ಯೋಚಿಸಲು ಪ್ರಾರಂಭಿಸಿದೆವು; ಹಾಗಾಗಿ ನಮ್ಮ ಮಹಿಳೆಯರು ಏಷ್ಯಾದಲ್ಲಿ ಸತ್ತ ಮಹಿಳೆಯರ ವಿಗ್‌ಗಳನ್ನು ಖರೀದಿಸುವಂತೆ ಮಾಡಿದರು. ನಮ್ಮ ಮಹಿಳೆಯರು ತಮ್ಮ ಚರ್ಮದ ಬಣ್ಣವನ್ನು ತಿರಸ್ಕರಿಸಿ, ಬೆಳ್ಳಗಾಗಲು ಬೀಚ್ ಮಾಡಿಕೊಳ್ಳುವಂತೆ ಮಾಡಿದರು. ನಮ್ಮ ಮಹಿಳೆಯರು ತಮ್ಮ ಹುಬ್ಬುಗಳು ಮತ್ತು ಕಣ್ಣಪ್ಪೆಗಳನ್ನು ತೆಗೆದುಹಾಕುವಂತೆ ಮಾಡಿದರು. ನಮ್ಮ ಮಹಿಳೆಯರು ತಮ್ಮ ತುಟಿಗಳಿಗೆ ಕೆಂಪು ಬಣ್ಣ ಬಳಿಯುವಂತೆ ಮಾಡಿದರು. ಸಣ್ಣಗಾಗಲು ನಮ್ಮ ಮಹಿಳೆಯರು ಊಟ ಬಿಡುವಂತೆ ಮಾಡಿದರು. ಅವರು ನಮಗೆ ಇದನ್ನು ಯಾವಾಗಲೂ ಮಾಡುತ್ತಲೇ ಇರುತ್ತಾರೆ. ಏಕೆಂದರೆ ನಮ್ಮ ಮಹಿಳೆಯರೇ ಜೀವದ ಚಿಲುಮೆ ಎಂದು ಅವರಿಗೆ ತಿಳಿದಿದೆ. ನಮ್ಮ ಮಹಿಳೆಯರನ್ನು ಬದಲಾಯಿಸಿದರೆ, ದುರ್ಬಲರಾಗಿರುವ ನಮ್ಮ ಪುರುಷರು ತಾನಾಗಿಯೇ ಬದಲಾಗುತ್ತಾರೆ ಎಂದು ಅವರಿಗೆ ಗೊತ್ತು. ನಾವು ಇದನ್ನು ನಿಲ್ಲಿಸಬೇಕು!

You cannot copy content of this page

Exit mobile version