“..ಇವತ್ತು ನಾವು ಮಾತಾಡುತ್ತಿರುವುದು ಮಧ್ಯಪ್ರಾಚ್ಯದ ರಾಜಕೀಯವನ್ನು ಕಳೆದ ಹಲವು ದಶಕಗಳಿಂದ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು, ಯುದ್ದ, ಭಯ ಮತ್ತು ರಕ್ತಪಾತವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಗ್ಗೆ..” ಇಸ್ರೇಲ್ ಚುನಾವಣಾ ವಿಶ್ಲೇಷಣೆ.. ಚಿಂತಕರಾದ ವಿ.ಆರ್.ಕಾರ್ಪೆಂಟರ್ ಬರಹದಲ್ಲಿ
ಜಗತ್ತಿನ ರಾಜಕೀಯ ಭೂಪಟದಲ್ಲಿ ಕೆಲವು ನಾಯಕರು ಅಧಿಕಾರ ಹಿಡಿಯುವುದಕ್ಕಾಗಿ ರಾಜಕೀಯ ಮಾಡುತ್ತಾರೆ, ಆದರೆ ಇನ್ನು ಕೆಲವರು ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಇಡೀ ದೇಶವನ್ನೇ, ಅಷ್ಟೇ ಯಾಕೆ ಇಡೀ ಪ್ರದೇಶವನ್ನೇ ನಿರಂತರ ಯುದ್ದದ ಬೆಂಕಿಗೆ ತಳ್ಳುತ್ತಾರೆ! ಇವತ್ತು ನಾವು ಮಾತಾಡುತ್ತಿರುವುದು ಮಧ್ಯಪ್ರಾಚ್ಯದ ರಾಜಕೀಯವನ್ನು ಕಳೆದ ಹಲವು ದಶಕಗಳಿಂದ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು, ಯುದ್ದ, ಭಯ ಮತ್ತು ರಕ್ತಪಾತವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಗ್ಗೆ. ಇವತ್ತು ಅಕ್ಟೋಬರ್ 21, 2026. ಇನು ದಿನಗಳಲ್ಲಿ, ಅಂದರೆ ಅಕ್ಟೋಬರ್ 27ರಂದು ಇಸ್ರೇಲ್ ಸಂಸತ್ತಿಗೆ ನಿರ್ಣಾಯಕ ಚುನಾವಣೆ ನಡೆಯಲಿದೆ. ಈ ಚುನಾವಣೆ ಬರೀ ಒಬ್ಬ ಪ್ರಧಾನಿಯನ್ನು ಆಯ್ಕೆ ಮಾಡುವ ಅಥವಾ ಒಂದು ಸರ್ಕಾರವನ್ನು ಬದಲಾಯಿಸಿ ಸಾಮಾನ್ಯ ಪ್ರಕ್ರಿಯೆಯಲ್ಲ; ಬದಲಾಗಿ ಇದು ನೆತನ್ಯಾಹು ಅವರ ಯುದ್ಧದಾಹದ ರಾಜಕೀಯಕ್ಕೆ ಇಸ್ರೇಲ್ ಜನತೆ ನೀಡಲಿರುವ ಅಂತಿಮ ತೀರ್ಪು!
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಆ ದಾಳಿಯ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಚಿತ್ರಣವೇ ಬದಲಾಗಿ ಹೋಯಿತು. ಆದರೆ ಆವತ್ತಿನಿಂದ ಇವತ್ತಿನವರೆಗೆ, ಅಂದರೆ ಈ 3 ವರ್ಷಗಳಲ್ಲಿ ನೆತನ್ಯಾಹು ಮಾಡಿದ್ದೇನು? ಭದ್ರತೆಯ ಹೆಸರಿನಲ್ಲಿ ಗಾಜಾ ಪಟ್ಟಿಯನ್ನು ಅಕ್ಷರಶಃ ಒಂದು ಸ್ಮಶಾನವನ್ನಾಗಿ ಮಾಡಿದರು. ಹತ್ತಾರು ಸಾವಿರ ಅಮಾಯಕ ಜನರ ಪ್ರಾಣ ಹೋಯಿತು, ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತರ ಶಿಬಿರಗಳು ಬಾಂಬ್ ದಾಳಿಗೆ ಧೂಳೀಪಟವಾದವು.
ಇಷ್ಟೆಲ್ಲಾ ರಕ್ತಪಾತ ನಡೆದರೂ ನೆತನ್ಯಾಹು ಅವರ ಯುದ್ಧದಾಹ ತಣಿಯಲೇ ಇಲ್ಲ. ಗಾಜಾ ಆಯ್ತು, ಆಮೇಲೆ ಲೆಬನಾನ್ ಕಡೆ ತಿರುಗಿದರು, ಅಲ್ಲಿಂದ ಇರಾನ್ ಜೊತೆ ನೇರಾನೇರ ಯುದ್ಧಕ್ಕೆ ಇಳಿದರು. ಯಾಕೆ ಗೊತ್ತಾ? ಯುದ್ಧ ನಿಂತರೆ ಜನ ಪ್ರಶ್ನೆ ಕೇಳುತ್ತಾರೆ! ಯುದ್ಧ ನಿಂತರೆ ದೇಶದ ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಯುತ್ತದೆ! ಯುದ್ಧ ನಿಂತರೆ ಭ್ರಷ್ಟಾಚಾರದ ಕೇಸ್ಗಳಲ್ಲಿ ಕೋರ್ಟ್ ಕಟಕಟೆಗೆ ಬಂದು ನಿಲ್ಲಬೇಕಾಗುತ್ತದೆ! ಈ ಭಯದಿಂದಲೇ ನಿರಂತರ ಯುದ್ಧದ ವಾತಾವರಣವನ್ನು ಸೃಷ್ಟಿಸಿದ ನೆತನ್ಯಾಹು ಇವತ್ತು ಮತ್ತೆ ಮತದಾರರ ಮುಂದೆ ಬಂದು ನಿಂತಿದ್ದಾರೆ.
ಅಕ್ಟೋಬರ್ 19 ಮತ್ತು 20ರವರೆಗೆ ಹೊರಬಿದ್ದಿರುವ ಇತ್ತೀಚಿನ ಚುನಾವಣಾ ಸಮೀಕ್ಷೆಗಳನ್ನು ನೋಡಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ-ಇಸ್ರೇಲ್ ಮತದಾರರು ಹಿಂದೆಂದಿಗಿಂತಲೂ ಹೆಚ್ಚು ಗೊಂದಲದಲ್ಲಿದ್ದಾರೆ ಮತ್ತು ದೇಶ ರಾಜಕೀಯವಾಗಿ ಎರಡು ಹೋಳಾಗಿದೆ. ಯಾವುದೇ ಒಂದು ರಾಜಕೀಯ ಬಣಕ್ಕೂ ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಒಂದು ಕಡೆ ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಪಕ್ಷ ಮತ್ತು ಅದರ ಉಗ್ರ ಮಿತ್ರಪಕ್ಷಗಳು ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಂದು ಕಡೆ ಮಾಜಿ ಸೇನಾ ಮುಖ್ಯಸ್ಥಗಾದಿ ಐಸೆನ್ಕೋಟ್ ನೇತೃತ್ವದ ಯಾಶಾರ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಹೇಗಾದರೂ ಮಾಡಿ ನೆತನ್ಯಾಹು ಅವರನ್ನು ಮನೆಗೆ ಕಳಿಸಲೇಬೇಕು ಅಂತ ಪಣ ತೊಟ್ಟಿವೆ.
ಆದರೆ ದುರಂತ ಏನಪ್ಪಾ ಅಂದ್ರೆ, ಈ ವಿರೋಧ ಪಕ್ಷಗಳ ನಡುವೆಯೇ ನಾಯಕತ್ವ ಯಾರದ್ದು, ಮೈತ್ರಿ ಹೇಗಿರಬೇಕು ಎಂಬ ವಿಚಾರದಲ್ಲಿ ನೂರಾರು ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಅಕ್ಟೋಬರ್ 27ರ ಚುನಾವಣೆಯ ಫಲಿತಾಂಶ ಎಷ್ಟು ಮುಖ್ಯವೋ, ಚುನಾವಣೆ ಮುಗಿದ ಮರುದಿನದಿಂದ ಶುರುವಾಗುವ ರೆಸಾರ್ಟ್ ರಾಜಕೀಯ ಅಥವಾ ಚುನಾವಣೋತ್ತರ ಮೈತ್ರಿಯ ಆಟ ಕೂಡ ಅಷ್ಟೇ ನಿರ್ಣಾಯಕವಾಗಲಿದೆ. ಬನ್ನಿ, ಈ ಚುನಾವಣೆಯ ಪ್ರತಿಯೊಂದು ಆಯಾಮವನ್ನೂ ಎಳೆಎಳೆಯಾಗಿ ಬಿಚ್ಚಿಡೋಣ.
120 ಸೀಟು, 61 ಮ್ಯಾಜಿಕ್ ನಂಬರ್!
ಇಸ್ರೇಲ್ ಚುನಾವಣೆಯ ರಾಜಕೀಯ ಚದುರಂಗದ ಆಟವನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ, ಮೊದಲು ನಾವು ಅಲ್ಲಿನ ಸಂಸತ್ತಿನ ನಂಬರ್ ಗೇಮ್ ಅಥವಾ ಸಂಖ್ಯಾಬಲದ ಗಣಿತವನ್ನು ತಿಳಿದುಕೊಳ್ಳಬೇಕು. ಇಸ್ರೇಲ್ ಸಂಸತ್ತನ್ನು ‘ನೆಸೆಟ್’ (Knesset) ಅಂತ ಕರೆಯುತ್ತಾರೆ. ಈ ನೆಸೆಟ್ನಲ್ಲಿ ಒಟ್ಟು 120 ಸ್ಥಾನಗಳಿವೆ. ಭಾರತದಲ್ಲಾದರೆ ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಅಭ್ಯರ್ಥಿ ನಿಲ್ಲುತ್ತಾರೆ. ಆದರೆ ಇಸ್ರೇಲ್ನಲ್ಲಿ ಹಾಗಿಲ್ಲ. ಅಲ್ಲಿ ಇಡೀ ದೇಶವೇ ಒಂದು ಚುನಾವಣಾ ಚುನಾವಣಾ ಕ್ಷೇತ್ರ! ಕ್ಷೇತ್ರ ಜನರು ಅಭ್ಯರ್ಥಿಗೆ ಮೋ ಹಾಕುವುದಿಲ್ಲ, ಬದಲಾಗಿ ರಾಜಕೀಯ ಪಕ್ಷಕ್ಕೆ ವೋಟ್ ಹಾಕುತ್ತಾರೆ. ಯಾವ ಪಕ್ಷಕ್ಕೆ ಎಷ್ಟು ಪರ್ಸೆಂಟ್ ವೋಟ್ ಬೀಳುತ್ತದೆಯೋ, ಅದರ ಆಧಾರದ ಮೇಲೆ ಆ ಪಕ್ಷಕ್ಕೆ ಈ 120 ಸೀಟುಗಳಲ್ಲಿ ಪಾಲು ಸಿಗುತ್ತದೆ.
ಇಲ್ಲಿ ಸರ್ಕಾರ ರಚನೆ ಮಾಡಲು ಬೇಕಾಗಿರುವ ಮ್ಯಾಜಿಕ್ ನಂಬರ್ 61! ಅಂದರೆ ಕನಿಷ್ಠ 61 ಸಂಸದರ ಬೆಂಬಲ ಯಾರಿಗೆ ಇರುತ್ತದೆಯೋ ಅವರು ಮಾತ್ರ ಪ್ರಧಾನಿ ಕುರ್ಚಿ ಏರಲು ಸಾಧ್ಯ. ಇಸ್ರೇಲ್ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷ ಸ್ವಂತ ಬಲದ ಮೇಲೆ 61 ಸೀಟು ಗೆದ್ದಿದ್ದು ಇಲ್ಲವೇ ಇಲ್ಲ ಎನ್ನಬಹುದು. ಹೀಗಾಗಿ ಅಲ್ಲಿ ಯಾವತ್ತಿದ್ದರೂ ಸಮ್ಮಿಶ್ರ ಸರ್ಕಾರ ಅಥವಾ ಮೈತ್ರಿಕೂಟದ ಸರ್ಕಾರವೇ ಅನಿವಾರ್ಯ.
ಹಾಗಾದರೆ ಈಗಿನ ಗೌಂಡ್ ರಿಯಾಲಿಟಿ ಏನು? ಅಕ್ಟೋಬರ್ 19 ಮತ್ತು 20ರ ವೇಳೆಗೆ ಲಭ್ಯವಿರುವ Middle East Forum 2 ‘Poll of Polls’ & The Petek (Seat Average) ನೋಡಿದರೆ ಚಿತ್ರಣ ತುಂಬಾ ಕುತೂಹಲಕಾರಿಯಾಗಿದೆ. ಈ ಸಮೀಕ್ಷೆಗಳ ಪ್ರಕಾರ ಸದ್ಯದ ಲೆಕ್ಕಾಚಾರ ಹೀಗಿದೆ:

ಇಲ್ಲಿ ನಾವು ಒಂದು ವಿಚಾರವನ್ನು ತುಂಬಾ ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಈ 49 ರಿಂದ 54 ಅಥವಾ 50 ರಿಂದ 52 ಎಂಬ ನಂಬರ್ಗಳು ಯಾವುದೋ ಒಂದೇ ಒಂದು ಸರ್ವೆ ಕಂಪನಿ ಕೊಟ್ಟಿರುವ ಫಲಿತಾಂಶವಲ್ಲ. ಇದು ಬೇರೆ ಬೇರೆ ಸಮೀಕ್ಷಾ ಸಂಸ್ಥೆಗಳು ನಡೆಸಿರುವ ಸರ್ವೆಗಳ ಸರಾಸರಿ. ಪ್ರತಿಯೊಂದು ಸಮೀಕ್ಷಾ ಸಂಸ್ಥೆಯ ಮಾದರಿ, ಅವರು ಪಕ್ಷಗಳನ್ನು ಗುಂಪು ಮಾಡುವ ರೀತಿ ಮತ್ತು ಮೈತ್ರಿಕೂಟದ ಲೆಕ್ಕಾಚಾರ ಬೇರೆ ಬೇರೆಯಾಗಿರುವುದರಿಂದ ಸೀಟುಗಳ ಸಂಖ್ಯೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ.
ಆದರೆ ಈ ಟೇಬಲ್ ನಮಗೆ ಹೇಳುತ್ತಿರುವ ಅಸಲಿ ಸತ್ಯ ಏನು ಗೊತ್ತಾ? ಕಳೆದ 3 ವರ್ಷಗಳಿಂದ “ನಾನೇ ಇಸ್ರೇಲ್ನ ರಕ್ಷಕ, ನಾನಿಲ್ಲದಿದ್ದರೆ ಇಸ್ರೇಲ್ ಉಳಿಯುವುದೇ ಇಲ್ಲ” ಅಂತ ಅಬ್ಬರಿಸುತ್ತಾ ಗಾಜಾ ಮೇಲೆ ಬಾಂಬ್ ಸುರಿಸುತ್ತಿರುವ ನೆತನ್ಯಾಹು ಅವರ ಇಡೀ ಮೈತ್ರಿಕೂಟಕ್ಕೆ ಜನ 61 ಸೀಟು ಕೊಡಲು ತಯಾರಿಲ್ಲ! ಅವರ ಮೈತ್ರಿಕೂಟ 49 ರಿಂದ 54 ಸೀಟುಗಳ ಆಸುಪಾಸಿನಲ್ಲಿ ಕುಂಟುತ್ತಿದೆ. ಅಂದರೆ ಮ್ಯಾಜಿಕ್ ನಂಬರ್
ತಲುಪಲು ಇನ್ನೂ 7 ರಿಂದ 12 ಸೀಟುಗಳ ಕೊರತೆಯಿದೆ! ಅದೇ ಸಮಯದಲ್ಲಿ. ಇನ್ನೊಂದು ಕಹಿ ಸತ್ಯ ಏನಪ್ಪಾ ಅಂದ್ರೆ, ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಅಂತ ಹೊರಟಿರುವ ಪ್ರಮುಖ ಯಹೂದಿ ವಿರೋಧ ಪಕ್ಷಗಳ ಬಣ ಕೂಡ 50 ರಿಂದ 52 ಸೀಟುಗಳಲ್ಲೇ ಸಿಕ್ಕಿಹಾಕಿಕೊಂಡಿದೆ. ಅವರಿಗೂ 61ರ ಗಡಿ ದಾಟಲು ಸುಲಭದ ದಾರಿ ಕಾಣಿಸುತ್ತಿಲ್ಲ. ಅಂದರೆ ಮತದಾರರು ಯಾವುದೇ ಒಂದು ಬಣಕ್ಕೂ ಕ್ಲೀನ್ ಚಿಟ್ ಕೊಡುತ್ತಿಲ್ಲ. ಇದರ ನೇರ ಅರ್ಥ-ಅಕ್ಟೋಬರ್ 27ರ ನಂತರ ಸಣ್ಣಪುಟ್ಟ ಪಕ್ಷಗಳ ಚೌಕಾಸಿ, ಕುದುರೆ ವ್ಯಾಪಾರ ಮತ್ತು ಚುನಾವಣೋತ್ತರ ಮೈತ್ರಿಗಳೇ ಇಸ್ರೇಲ್ನ ಭವಿಷ್ಯವನ್ನು ನಿರ್ಧರಿಸಲಿವೆ!
ಭಯವನ್ನೇ ಬಂಡವಾಳ ಮಾಡಿಕೊಂಡ ಲಿಕುಡ್!
ಬೆಂಜಮಿನ್ ನೆತನ್ಯಾಹು ಇಸ್ರೇಲ್ ಇತಿಹಾಸದಲ್ಲಿ ಅತಿ ದೀರ್ಘಕಾಲ ಪ್ರಧಾನಿಯಾಗಿ ಅಧಿಕಾರ ನಡೆಸಿದ ವ್ಯಕ್ತಿ. ಅವರ ಲಿಕುಡ್ (Likud) ಪಕ್ಷ ದಶಕಗಳಿಂದ ವೋಟ್ ಕೇಳುತ್ತಿರುವುದೇ ರಾಷ್ಟ್ರೀಯ ಭದ್ರತೆ, ಬಲಪಂಥೀಯ ಯಹೂದಿ ರಾಷ್ಟ್ರೀಯತೆ ಮತ್ತು ಆರ್ಥಿಕ ನೀತಿಗಳ ಹೆಸರಿನಲ್ಲಿ. ನೆತನ್ಯಾಹು ತಮ್ಮನ್ನು ತಾವು “ಮಿಸ್ಟರ್ ಸೆಕ್ಯೂರಿಟಿ” ಅಂತ ಕರೆದುಕೊಳ್ಳುತ್ತಿದ್ದರು. ಆದರೆ ಅವರ ಈ “ಮಿಸ್ಟರ್ ಸೆಕ್ಯೂರಿಟಿ” ಎಂಬ ಮುಖವಾಡ ಕಳಚಿ ಬಿದ್ದಿದ್ದು 2023ರ ಅಕ್ಟೋಬರ್ 7ರಂದು!
ಆವತ್ತು ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಪ್ರಾಣ ಕಳೆದುಕೊಂಡರು. ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಆ ಘಟನೆ, ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಅಂತ ಕರೆಸಿಕೊಳ್ಳುತ್ತಿದ್ದ ಇಸ್ರೇಲ್ ಗುಪ್ತಚರ ವ್ಯವಸ್ಥೆ (ಮೊಸಾದ್ ಮತ್ತು ಶಿನ್ ಬೆಟ್), ಕೋಟ್ಯಂತರ ಡಾಲರ್ ಸುರಿದು ಕಟ್ಟಿದ್ದ ಹೈಟೆಕ್ ಗಡಿ ಬೇಲಿ ಮತ್ತು ಸೇನಾ ಸಿದ್ಧತೆಯ ಬಣ್ಣವನ್ನು ಬಯಲು ಮಾಡಿತು. ಮಾಡಿತು. ಇಲ್ಲಿಯೇ ಒಂದು ಮೂಲಭೂತ ಪ್ರಶ್ನೆ ಹುಟ್ಟಿಕೊಳ್ಳುತ್ತದೆ-ಆವತ್ತು ಅಧಿಕಾರದಲ್ಲಿ ಇದ್ದವರು ಯಾರು? ಇದೇ ಬೆಂಜಮಿನ್ ನೆತನ್ಯಾಹು! ಕಳೆದ ಒಂದೂವರೆ ದಶಕದಿಂದ ದೇಶದ ಭದ್ರತಾ ನೀತಿಯನ್ನು ರೂಪಿಸಿದವರು ಯಾರು? ಇದೇ ನೆತನ್ಯಾಹು! ಹಾಗಾದರೆ ಅಕ್ಟೋಬರ್ 7ರಂದು ಆದ ಆ ಮಹಾ ಭದ್ರತಾ ವೈಫಲ್ಯಕ್ಕೆ ನೇರ ಹೊಣೆ ಯಾರು ಆಗಬೇಕು? ಸ್ವಾಭಾವಿಕವಾಗಿಯೇ ಪ್ರಧಾನಿ ಕುರ್ಚಿಯಲ್ಲಿ ಕುಳಿತಿದ್ದ ನೆತನ್ಯಾಹು ಅವರೇ ಜವಾಬ್ದಾರಿ ಹೊರಬೇಕಿತ್ತು, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು!
ಆದರೆ ನೆತನ್ಯಾಹು ರಾಜೀನಾಮೆ ಕೊಡಲಿಲ್ಲ. ಬದಲಾಗಿ ಅವರು ಮಾಡಿದ್ದೇನು ಗೊತ್ತಾ? ತಮ್ಮ ಸರ್ಕಾರದ ಘೋರ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರತೀಕಾರದ ಯುದ್ಧವನ್ನು ಶುರು ಮಾಡಿದರು. ಇವತ್ತು ಚುನಾವಣಾ ಕಣದಲ್ಲಿ ನೆತನ್ಯಾಹು ವಿಮರ್ಶಕರು ಮತ್ತು ವಿರೋಧ ಪಕ್ಷಗಳು ಕೇಳುತ್ತಿರುವ ಮೊದಲ ಪ್ರಶ್ನೆಯೇ ಇದು “ಅಕ್ಟೋಬರ್ 7ರ ದಾಳಿ ನಡೆಯದಂತೆ ತಡೆಯುವುದು ನಿಮ್ಮಸರ್ಕಾರದ ಜವಾಬ್ದಾರಿಯಾಗಿತ್ತು, ನೀವು ಅದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ!”
ಆದರೆ ನೆತನ್ಯಾಹು ಮತ್ತು ಅವರ ಕುರುಡು ಬೆಂಬಲಿಗರು ಇದೇ ವಿಷಯವನ್ನು ಉಲ್ಟಾ ತಿರುಗಿಸಿ ರಾಜಕೀಯ ಮಾಡುತ್ತಿದ್ದಾರೆ. ಹಮಾಸ್ ಮತ್ತು ಇತರ ಶತ್ರುಗಳ ವಿರುದ್ಧ ನಡೆಸಿದ ನಿರ್ದಯಿ ಸೇನಾ ಕಾರ್ಯಾಚರಣೆಗಳನ್ನೇ ನೆತನ್ಯಾಹು ಅವರ “ಗಟ್ಟಿ ನಾಯಕತ್ವದ ಬಲ” ಎಂದು ಬಿಂಬಿಸುತ್ತಿದ್ದಾರೆ! ಅಂದರೆ, ಮೊದಲು ತಮ್ಮದೇ ವೈಫಲ್ಯದಿಂದ ದೇಶವನ್ನು ಅಪಾಯಕ್ಕೆ ತಳ್ಳುವುದು, ಆಮೇಲೆ ಆ ಅಪಾಯದಿಂದ ರಕ್ಷಿಸಲು ನಾನೇ ಯುದ್ಧ ಮಾಡುತ್ತಿದ್ದೇನೆ ಎಂದು ಹೇಳಿ ಮತ್ತೆ ವೋಟ್ ಕೇಳುವುದು! ಒಂದೇ ಭದ್ರತಾ ವಿಚಾರ ಇವತ್ತು ಎರಡು ವಿರುದ್ಧ ರಾಜಕೀಯ ಸಂದೇಶಗಳಿಗೆ ವೇದಿಕೆಯಾಗಿದೆ. ವಿರೋಧ ಪಕ್ಷಗಳು ವೈಫಲ್ಯಕ್ಕೆ ಉತ್ತರ ಕೇಳುತ್ತಿದ್ದರೆ, ನೆತನ್ಯಾಹು ಪಾಳಯ ತಾವು ನಡೆಸಿದ ಮಿಲಿಟರಿ ಧ್ವಂಸವನ್ನೇ ಸಾಧನೆ ಎಂದು ತೋರಿಸುತ್ತಿದೆ.
ಗಾಜಾ ಸ್ಮಶಾನವಾಗಿದೆ, ಲೆಬನಾನ್-ಇರಾನ್ ಹೊತ್ತಿ ಉರಿಯುತ್ತಿದೆ!
ಕಳೆದ 3 ವರ್ಷಗಳಲ್ಲಿ ಇಸ್ರೇಲ್ ರಾಜಕೀಯವನ್ನು ಆಳುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಲ್ಲ, ಬದಲಾಗಿ ಬಾಂಬ್, ಮಿಸೈಲ್ ಮತ್ತು ಯುದ್ಧದ ಉನ್ಮಾದ! ಗಾಜಾ ಪಟ್ಟಿಯಲ್ಲಿ ನೆತನ್ಯಾಹು ಸೇನೆ ನಡೆಸಿದ ಮಿಲಿಟರಿ ದಾಳಿ ನೋಡನೋಡುತ್ತಿದ್ದಂತೆ ಒಂದು ಇಡೀ ಜನಾಂಗವನ್ನು ಗುರಿಯಾಗಿಸಿಕೊಂಡ ವಿನಾಶಕಾರಿ ಸಮರವಾಯಿತು. ಗಾಜಾದಲ್ಲಿ ಕುಡಿಯಲು ನೀರಿಲ್ಲ, ಚಿಕಿತ್ಸೆಗೆ ಆಸ್ಪತ್ರೆಗಳಿಲ್ಲ, ಮಲಗಲು ಸೂರಿಲ್ಲ-ಇಡೀ ಭೂಭಾಗವನ್ನು ಕಲ್ಲುಮಣ್ಣಿನ ರಾಶಿಯನ್ನಾಗಿ ಮಾಡಲಾಗಿದೆ. ಇಷ್ಟಾದರೂ ನೆತನ್ಯಾಹು ಯುದ್ಧ ನಿಲ್ಲಿಸಿದರಾ? ಇಲ್ಲ! ಗಾಜಾದ ಬೆಂಕಿ ಆರುವ ಮುನ್ನವೇ ಲೆಬನಾನ್ ಮೇಲೆ ಮುಗಿಬಿದ್ದರು, ಅಲ್ಲಿಂದ ಇರಾನ್ ಜೊತೆ ನೇರ ಸಂಘರ್ಷಕ್ಕೆ ಇಳಿದರು.
ಈಗ ಚುನಾವಣಾ ಕಣದಲ್ಲಿ ಈ ಯುದ್ಧವೇ ಕೇಂದ್ರಬಿಂದು ಆಗಿದೆ. ನೆತನ್ಯಾಹು ಅವರ ಬಲಪಂಥೀಯ ಮತಬ್ಯಾಂಕ್ಗೆ ಈ ಕ್ರೌರ್ಯ ಮತ್ತು ಕಠಿಣ ನಿಲುವು “ರಾಷ್ಟ್ರೀಯ ಭದ್ರತೆಗೆ ಅನಿವಾರ್ಯ” ಅಂತ ಕಾಣಿಸುತ್ತಿರಬಹುದು. ಆದರೆ ಇಸ್ರೇಲ್ನೊಳಗೇ ಇರುವ ಪ್ರಜ್ಞಾವಂತ ನಾಗರಿಕರು ಮತ್ತು ಜಗತ್ತಿನಾದ್ಯಂತ ಇರುವ ಮಾನವ ಹಕ್ಕುಗಳ ಪ್ರತಿಪಾದಕರು ಇವತ್ತು ಒಂದು ನೇರ ಪ್ರಶ್ನೆ ಕೇಳುತ್ತಿದ್ದಾರೆ-ಈ ನಿರಂತರ ಯುದ್ಧದಿಂದ ಸಾಧಿಸಿದ್ದಾದರೂ ಏನು? ಗಾಜಾದಲ್ಲಿ ನಡೆಸಿದ ಈ ಭೀಕರ ಮಾನವೀಯ ಹಾನಿ ಮತ್ತು ರಕ್ತಪಾತದಿಂದ ಇಸ್ರೇಲ್ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಏಕಾಂಗಿಯಾಗುತ್ತಿದೆ.
ಯುದ್ಧವನ್ನು ಯಾರು ಹೇಗೆ ನಡೆಸಿದರು ಎನ್ನುವುದು ಒಂದು ಕಡೆಯಾದರೆ, ಈ ಯುದ್ಧದ ಅಂತಿಮ ಗುರಿ ಏನು?’ಯಾವಾಗ ಶಾಂತಿ ಸ್ಥಾಪನೆಯಾಗುತ್ತದೆ? ಎಂಬ ಪ್ರಶ್ನೆಗೆ ನೆತನ್ಯಾಹು ಬಳಿ ಇವತ್ತಿಗೂ ಉತ್ತರವಿಲ್ಲ! ಯಾಕೆಂದರೆ ನೆತನ್ಯಾಹು ಅವರಿಗೆ ಶಾಂತಿ ಬೇಕಾಗಿಲ್ಲ. ಶಾಂತಿ ನೆಲೆಸಿದರೆ ಅವರ ರಾಜಕೀಯ ಅಸ್ತಿತ್ವವೇ ಅಲುಗಾಡುತ್ತದೆ. ಒಬ್ಬ ನಾಯಕ ತನ್ನ ವೈಯಕ್ತಿಕ ರಾಜಕೀಯ ಉಳಿವಿಗಾಗಿ ಸಾವಿರಾರು ಅಮಾಯಕರ ಸಾವಿಗೆ ಕಾರಣವಾಗುವ ಯುದ್ಧವನ್ನು ಎಳೆದುಕೊಂಡೇ ಹೋಗುತ್ತಾನೆ ಎಂದರೆ, ಅದು ನಾಯಕತ್ವವಲ್ಲ, ಅದು ಕ್ರೂರ ಯುದ್ಧದಾಹ! ಇವತ್ತು ಇಸ್ರೇಲ್ ಮತದಾರರ ಮುಂದೆ ಇರುವ ದೊಡ್ಡ ಪ್ರಶ್ನೆಯೇ ಇದು ನಮಗೆ ಶಾಶ್ವತ ಯುದ್ಧ ಬೇಕಾ ಅಥವಾ ಶಾಂತಿಯುತ ಭವಿಷ್ಯ ಬೇಕಾ?
ಜೈಲು ತಪ್ಪಿಸಿಕೊಳ್ಳಲು ಯುದ್ಧವೇ ಗುರಾಣಿಯೇ?
ನೆತನ್ಯಾಹು ಯಾಕೆ ಇಷ್ಟೊಂದು ಹಠಕ್ಕೆ ಬಿದ್ದು ಪ್ರಧಾನಿ ಕುರ್ಚಿಗೆ ಅಂಟಿಕೊಂಡಿದ್ದಾರೆ ಅಂತ ನಿಮಗೆ ಅನಿಸಬಹುದು. ಅದಕ್ಕೆ ಉತ್ತರ ಯುದ್ಧಭೂಮಿಯಲ್ಲಿ ಇಲ್ಲ, ಬದಲಾಗಿ ಜೆರುಸಲೇಮ್ನ ಕೋರ್ಟ್ ಹಾಲ್ನಲ್ಲಿದೆ! ಹೌದು, ಬೆಂಜಮಿನ್ 5 ನೆತನ್ಯಾಹು ನೆತನ್ಯಾಹ ಸದ್ಯ ಭ್ರಷ್ಟಾಚಾರ, ವಂಚನೆ ಮತ್ತು ನಂಬಿಕೆ ದ್ರೋಹಕ್ಕೆ ಸಂಬಂಧಿಸಿದ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಪಡೆದ ಆರೋಪದಿಂದ ಹಿಡಿದು, ತಮ್ಮ ಪರವಾಗಿ ಸುದ್ದಿ ಪ್ರಕಟಿಸಲು ಮಾಧ್ಯಮ ಸಂಸ್ಥೆಗಳ ಜೊತೆ ಅಕ್ರಮ ಡೀಲ್ ಕುದುರಿಸಿದ ಆರೋಪಗಳವರೆಗೆ ಅವರ ಮೇಲೆ ಕೇಸ್ಗಳ ಸರಮಾಲೆಯೇ ಇದೆ. European Parliamentary Research Service (EPRS) 2026 ರ ಇಸ್ರೇಲ್ ಚುನಾವಣಾ ವಿಶ್ಲೇಷಣೆಯಲ್ಲಿ ಗುರುತಿಸಿರುವಂತೆ, ಈ ಭ್ರಷ್ಟಾಚಾರ ಪ್ರಕರಣಗಳು ನೆತನ್ಯಾಹು ಅವರ ರಾಜಕೀಯ ನಿರ್ಧಾರಗಳ ಮೇಲೆ ದೀರ್ಘಕಾಲದಿಂದ ನೇರ ಪರಿಣಾಮ ಬೀರುತ್ತಿವೆ.
ವಿರೋಧ ಪಕ್ಷಗಳು ಇವತ್ತು ಬೀದಿಗಿಳಿದು ಕೇಳುತ್ತಿರುವುದು ಇದನ್ನೇ-ಒಬ್ಬ ಸಾಮಾನ್ಯ ಪ್ರಜೆ ತಪ್ಪು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ, ಆದರೆ ಪ್ರಧಾನಿ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿ ತನ್ನ ಅಧಿಕಾರವನ್ನು ಬಳಸಿಕೊಂಡು ನ್ಯಾಯಾಂಗ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ನೋ ನೋಡುತ್ತಾರಲ್ಲ, ಕಾನೂನಿನ ಮುಂದೆ ಎಲ್ಲರೂ ಸಮಾನರಲ್ಲವೇ? ಸರ್ಕಾರದ ಹೊಣೆಗಾರಿಕೆ ಮತ್ತು ರಾಜಕೀಯ ವಿಶ್ವಾಸಾರ್ಹತೆ ಎಲ್ಲಿ ಹೋಯಿತು? ನೆತನ್ಯಾಹು ಬೆಂಬಲಿಗರು ಇದನ್ನು ರಾಜಕೀಯ ಪ್ರೇರಿತ ಕೇಸ್ ಅಂತ ತಳ್ಳಿಹಾಕಲು ನೋಡುತ್ತಾರೆ. ಆದರೆ ಯುವ ಮತದಾರರು ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಇದು ಸ್ಪಷ್ಟವಾಗಿ ಕಾಣಿಸುತ್ತಿದೆ-ಪ್ರಧಾನಿ ಕುರ್ಚಿಯಿಂದ ಕೆಳಗಿಳಿದರೆ ಕಾನೂನು ಕುಣಿಕೆ ಬಿಗಿಯಾಗುತ್ತದೆ ಎಂಬ ಭಯವೇ ನೆತನ್ಯಾಹು ಅವರ ಪ್ರತಿಯೊಂದು ರಾಜಕೀಯ ನಡೆಯ ಹಿಂದಿರುವ ಅಸಲಿ ಇಂಧನ!
ನೆತನ್ಯಾಹು ವಿರುದ್ಧ ತೊಡೆತಟ್ಟಿರುವ ಸವಾಲುಗಾರರು ಯಾರು?
ಹಾಗಾದರೆ ಅಕ್ಟೋಬರ್ 27ರ ಈ ಚುನಾವಣೆಯಲ್ಲಿ ನೆತನ್ಯಾಹು ಅವರನ್ನು ಮಣಿಸಲು ಅಖಾಡಕ್ಕಿಳಿದಿರುವ ನಾಯಕರು ಯಾರು? ಇಲ್ಲಿ ವಿಶೇಷ ಏನಪ್ಪಾ ಅಂದ್ರೆ, ನೆತನ್ಯಾಹು ವಿರುದ್ಧ ಒಬ್ಬನೇ ಒಬ್ಬ ನಾಯಕ ನಿಂತಿಲ್ಲ; ಬದಲಾಗಿ ತೀರ ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ನಾಲ್ಕು ಪ್ರಮುಖ ಶಕ್ತಿಗಳು ತೊಡೆತಟ್ಟಿ ನಿಂತಿವೆ. ಅವರನ್ನು ಒಬ್ಬೊಬ್ಬರನ್ನಾಗಿ ನೋಡೋಣ:
- ಗಾದಿ ಐಸೆನ್ಕೋಟ್ (ಯಾಶಾರ್ ಪಕ್ಷ – Yashar) : ಈ ಬಾರಿಯ ಚುನಾವಣಾ ಸಮೀಕ್ಷೆಗಳಲ್ಲಿ ನೆತನ್ಯಾಹು ಅವರಿಗೆ ನಡುಕ ಹುಟ್ಟಿಸಿರುವ ಪ್ರಮುಖ ಹೆಸರು ಗಾದಿ ಐಸೆನ್ಕೋಟ್! ಇವರು ಇಸ್ರೇಲ್ ಸೇನೆಯ ಮಾಜಿ ಮುಖ್ಯಸ್ಥರು. ಇವರ ‘ಯಾಶಾರ್’ ಪಕ್ಷ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಅತ್ಯಂತ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಐಸೆನ್ಕೋಟ್ ಬರೀ ರಾಜಕಾರಣಿಯಲ್ಲ; ಸ್ವತಃ ಗಾಜಾ ಯುದ್ಧದಲ್ಲಿ ತಮ್ಮ ಸ್ವಂತ ಮಗನನ್ನು ಕಳೆದುಕೊಂಡ ತಂದೆ! ನೆತನ್ಯಾಹು ಸರ್ಕಾರ ಯುದ್ಧವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದರೆ, ಯುದ್ಧದ ನೋವನ್ನು ಸ್ವಂತ ಕುಟುಂಬದಲ್ಲಿ ಅನುಭವಿಸಿರುವ ಐಸೆನ್ಕೋಟ್ ಅವರು ಸೇನಾ ಅನುಭವ, ರಾಷ್ಟ್ರೀಯ ಭದ್ರತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ Accountabilityಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಭದ್ರತೆಯೆ 6 ವಿಚಾರದಲ್ಲಿ ವಿಚಾ ಕಠಿಣ ನಿಲುವು ಹೊಂದಿದ್ದರೂ, ನೆತನ್ಯಾಹು ಅವರ ಸರ್ವಾಧಿಕಾರಿ ಮತ್ತು ಬೇಜವಾಬ್ದಾರಿ ಆಡಳಿತಕ್ಕೆ ಒಂದು ಗಂಭೀರ ಪರ್ಯಾಯವಾಗಿ ಇವರು ಗುರುತಿಸಿಕೊಂಡಿದ್ದಾರೆ.
- ನಫ್ತಾಲಿ ಬೆನೆಟ್ ಮತ್ತು ಯೈರ್ ಲಾಪಿಡ್ (ಬಿಯಾಖಾದ್ ಮೈತ್ರಿ – Biyachad) : ಇನ್ನೊಂದು ಕಡೆ ಇಬ್ಬರು ಮಾಜಿ ಪ್ರಧಾನಿಗಳು ಕೈಜೋಡಿಸಿದ್ದಾರೆ! ಒಬ್ಬರು ಬಲಪಂಥೀಯ ಹಿನ್ನೆಲೆಯ ನಫ್ತಾಲಿ ಬೆನೆಟ್. ಇನ್ನೊಬ್ಬರು ಮಧ್ಯಮವಾದಿ ರಾಜಕೀಯದ ಟೈರ್ ಲಾಪಿಡ್. ಇವರಿಬ್ಬರೂ ಸೇರಿ ಕಟ್ಟಿರುವ ‘ಬಿಯಾಖಾದ್’ ಮೈತ್ರಿಯ ಏಕೈಕ ಗುರಿ-ನೆತನ್ಯಾಹು ಅವರನ್ನು ಅಧಿಕಾರದಿಂದ ಕಿತ್ತೊಗೆಯುವುದು! ಆದರೆ ಇಲ್ಲಿ ಒಂದು ದೊಡ್ಡ ಸವಾಲಿದೆ. ಬೆನೆಟ್ ಮತ್ತು ಲಾಪಿಡ್ ಇಬ್ಬರ ಸಿದ್ಧಾಂತಗಳು ಬೇರೆ ಬೇರೆ. ಚುನಾವಣೆಯಲ್ಲಿ ಸೀಟು ಗೆಲ್ಲುವುದು ಒಂದು ಭಾಗವಾದರೆ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 5 ವರ್ಷ ಸರ್ಕಾರ ನಡೆಸುವುದು ಇನ್ನೊಂದು ದೊಡ್ಡ ಸವಾಲು. ಯಾಕೆಂದರೆ 2021ರಲ್ಲಿ ಇದೇ ಬೆನೆಟ್ ಮತ್ತು ಲಾಪಿಡ್ ಸೇರಿ ನೆತನ್ಯಾಹು ಅವರನ್ನು ಅಧಿಕಾರದಿಂದ ಹೊರಗಿಟ್ಟು ಸರ್ಕಾರ ರಚಿಸಿದ್ದರು, ಆದರೆ ಆ ಸರ್ಕಾರ ಕೇವಲ 18 ತಿಂಗಳಲ್ಲಿ ಬಿದ್ದುಹೋಗಿತ್ತು! ಆ ಕಹಿ ಅನುಭವ ಈಗಲೂ ವಿರೋಧ ಪಕ್ಷಗಳ ಮುಂದೆ ಒಂದು ಎಚ್ಚರಿಕೆಯ ಗಂಟೆಯಾಗಿ ನಿಂತಿದೆ.
- ಅವಿಗೋರ್ ಲೀಬರ್ಮನ್ (ಯಿಸ್ರೇಲ್ ಬೆಲ್ವೇನು – Yisrael Beiteinu) : ಅವಿಗೋರ್ ಲೀಬರ್ಮನ್ ಒಂದು ಕಾಲದಲ್ಲಿ ನೆತನ್ಯಾಹು ಅವರ ಆಪ್ತ ಮಿತ್ರನಾಗಿದ್ದವರು. ಆದರೆ ಇವತ್ತು ನೆತನ್ಯಾಹು ಅವರ ಕಟ್ಟಾ ಟೀಕಾಕಾರ! ಇವರ ಪ್ರಮುಖ ಅಜೆಂಡಾ ಏನಪ್ಪಾ ಅಂದ್ರೆ, ಅಲ್ಟಾ-ಆರ್ಥಡಾಕ್ಸ್ ಧಾರ್ಮಿಕ ಕೈ ಧಾರ್ಮಿಕ ಸಮುದಾಯಕ್ಕೆ ನೆತನ್ಯಾಹು ಸರ್ಕಾರ ನೀಡುತ್ತಿರುವ ಸೇನಾ ಸೇವೆಯ ವಿನಾಯಿತಿ ಮತ್ತು ಓಲೈಕೆ ರಾಜಕೀಯವನ್ನು ವಿರೋಧಿಸುವುದು.
- ಹೈರ್ ಗೋಲನ್ (ಡೆಮಾಕ್ರಾಟ್ಸ್ ಪಕ್ಷ – The Democrats) : ಮಧ್ಯ-ಎಡಪಂಥೀಯ ರಾಜಕೀಯವನ್ನು ಪ್ರತಿನಿಧಿಸುತ್ತಿರುವ ಯ್ಯರ್ ಗೋಲನ್ ಅವರ ‘ಡೆಮಾಕ್ರಾಟ್ಸ್’ ಪಕ್ಷವು ಈ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಧ್ವನಿಯಾಗಿದೆ. ಇಡೀ ಇಸ್ರೇಲ್ ಬಲಪಂಥೀಯ ಯುದ್ಧೋನ್ಮಾದದಲ್ಲಿ ಮುಳುಗಿರುವಾಗ, ಮೈರ್ ಗೋಲನ್ ಅವರು ಪ್ಯಾಲೆಸ್ತೀನ್ ಪ್ರಶ್ನೆಗೆ ರಾಜಕೀಯ ಪರಿಹಾರ, ನಾಗರಿಕ ಹಕ್ಕುಗಳ ರಕ್ಷಣೆ ಮತ್ತು ನೆತನ್ಯಾಹು ಹಾಳುಗೆಡವಿರುವ ಇಸ್ರೇಲ್ನ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಉಳಿಸುವ ವಿಚಾರಗಳಿಗೆ ಒತ್ತು ನೀಡುತ್ತಿದ್ದಾರೆ.
ಇಟಮಾರ್ ಬೆನ್-ಗ್ವಿರ್ ಎಂಬ ಉಗ್ರ ಬಲಪಂಥೀಯ ಭೂತ!
ಈ ಚುನಾವಣೆಯ ಅತ್ಯಂತ ಅಪಾಯಕಾರಿ ಮತ್ತು ಆತಂಕಕಾರಿ ಬೆಳವಣಿಗೆ ಏನು ಗೊತ್ತಾ? ಅದು ಉಗ್ರ ಬಲಪಂಥೀಯ ನಾಯಕ ಇಟಮಾರ್ ಬೆನ್-ಗ್ವಿರ್ (Itamar Ben-Gvir) ನೇತೃತ್ವದ ‘ಒಟ್ನಾಯೆಹುದಿತ್’ (Otzma Yehudit) ಪಕ್ಷದ ಗ್ರಾಫ್ ಮೇಲೇರುತ್ತಿರುವುದು! ಅಕ್ಟೋಬರ್ 20ರಂದು ಪ್ರಕಟವಾದ Reuters ವರದಿಯ ಪ್ರಕಾರ, ಬೆನ್-ಗ್ವಿರ್ ಅವರ ಪಕ್ಷವು ಈ ಚುನಾವಣೆಯಲ್ಲಿ 8 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅಂದಾಜಿದೆ. ಇನ್ನೂ ಆಘಾತಕಾರಿ ಸಂಗತಿ ಏನೆಂದರೆ, ಇಸ್ರೇಲ್ನ ಯುವ ಮತದಾರರು ಮತ್ತು ನಗರ ಪ್ರದೇಶದ ಕೆಲವು ಮತದಾರರಲ್ಲಿ ಈ ಉಗ್ರ ಬಲಪಂಥೀಯ ಪಕ್ಷಕ್ಕೆ ಬೆಂಬಲ ಹೆಚ್ಚುತ್ತಿದೆ!
ಯಾರು ಈ ಬೆನ್-ಗ್ವಿರ್? ಪ್ಯಾಲೆಸ್ತೀನಿಯರ ವಿರುದ್ಧ ಅತ್ಯಂತ ಕ್ರೂರ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಗಾಜಾವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು ಎಂದು ಬಹಿರಂಗವಾಗಿಯೇ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುವ ವ್ಯಕ್ತಿ. ಇವರ ಜನಾಂಗೀಯ ದ್ವೇಷದ ಹೇಳಿಕೆಗಳು ಇಡೀ ಪ್ರಪಂಚದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿವೆ. ನೆತನ್ಯಾಹು ತಮ್ಮ ಹಿಂದಿನ ಸರ್ಕಾರವನ್ನು ಉಳಿಸಿಕೊಳ್ಳಲು ಇಂತಹ ಉಗ್ರಗಾಮಿ ಚಿಂತನೆಯ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಸಚಿವನನ್ನಾಗಿ ಮಾಡಿದ್ದರು!
ಆದರೆ ಈಗ ಚುನಾವಣಾ ಗಣಿತದಲ್ಲಿ ನೆತನ್ಯಾಹು ಅವರಿಗೆ ಇದೇ ಬೆನ್-ಗ್ವಿರ್ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ. ಹೇಗೆ ಅಂತೀರಾ? ಒಂದು ಕಡೆ ಬೆನ್-ಗ್ವಿರ್ ಪಕ್ಷ 8 ಅಥವಾ ಅದಕ್ಕಿಂತ ಹೆಚ್ಚು ಸೀಟು ಗೆದ್ದರೆ, ನೆತನ್ಯಾಹುಗೆ 61ರ ಮ್ಯಾಜಿಕ್ ನಂಬರ್ ತಲುಪಲು ಇವರ ಬೆಂಬಲ ಅನಿವಾರ್ಯವಾಗುತ್ತದೆ. ಆದರೆ ಇನ್ನೊಂದು ಕಡೆ, ಬೆನ್-ಗ್ವಿರ್ ಅವರಂತಹ ಅತಿರೇಕದ ವ್ಯಕ್ತಿಯನ್ನು ಮೈತ್ರಿಕೂಟದಲ್ಲಿ ಇಟ್ಟುಕೊಂಡರೆ, ಯಾವುದೇ ಮಧ್ಯಮವಾದಿ ಪಕ್ಷಗಳು ನೆತನ್ಯಾಹು ಹತ್ತಿರಕ್ಕೂ ಸುಳಿಯುವುದಿಲ್ಲ! ಅಂದರೆ ಬೆನ್-ಗೈರ್ ಬೆಳೆದಷ್ಟೂ ನೆತನ್ಯಾಹು ರಾಜಕೀಯವಾಗಿ ಅವರ ಕೈಗೊಂಬೆಯಾಗಬೇಕಾಗುತ್ತದೆ ಮತ್ತು ಇತರ ಪಕ್ಷಗ ಜೊತೆ ಮೈತ್ರಿ ಮಾಡಿಕೊಳ್ಳುವ ದಾರಿ ಶಾಶ್ವತವಾಗಿ ಮುಚ್ಚಿಹೋಗುತ್ತದೆ. ತಾವೇ ಪೋಷಿಸಿದ ಉಗ್ರ™ ಬಲಪಂಥೀಯ ರಾಜಕೀಯ ಇವತ್ತು ನೆತನ್ಯಾಹು ಅವರ ಕುತ್ತಿಗೆಗೇ ಸುತ್ತಿಕೊಳ್ಳುತ್ತಿದೆ!
ನೆತನ್ಯಾಹು ಅವರ ರಾಜಕೀಯ ಬೂಟಾಟಿಕೆಯನ್ನು ಬಯಲು ಮಾಡುವ ಮತ್ತೊಂದು ದೊಡ್ಡ ವಿಚಾರ ಅಂದರೆ ‘ಹರೇದಿ’ ಅಥವಾ ಅಲ್ಟಾ-ಆರ್ಥಡಾಕ್ಸ್ ಯಹೂದಿ ಸಮುದಾಯದ ಸೇನಾ ಸೇವೆಯ ವಿನಾಯಿತಿ! ಇಸ್ರೇಲ್ ರಾಜಕೀಯದಲ್ಲಿ ‘ಶಾಸ್’ ಮತ್ತು ‘ಯುನೈಟೆಡ್ ತೋರಾ ಜುದಾಯಿಸಂ’ ಎಂಬ ಎರಡು ಧಾರ್ಮಿಕ ಪಕ್ಷಗಳು ಬಹಳ ಪ್ರಭಾವಶಾಲಿಯಾಗಿವೆ. ನೆತನ್ಯಾಹು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಯಾವಾಗಲೂ ಈ ಎರಡು ಪಕ್ಷಗಳ ಬೆಂಬಲದ ಮೇಲೆ ಅವಲಂಬಿತರಾಗಿರುತ್ತಾರೆ.
ಆದರೆ ಈಗ ಏನಾಗಿದೆ ನೋಡಿ-ಇಸ್ರೇಲ್ನಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸೇನಾ ಸೇವೆ ಕಡ್ಡಾಯ. ಕಳೆದ 3 ವರ್ಷಗಳಿಂದ ನೆತನ್ಯಾಹು ನಡೆಸುತ್ತಿರುವ ಗಾಜಾ, ಲೆಬನಾನ್ ಮತ್ತು ಇರಾನ್ ಯುದ್ಧಗಳಿಗಾಗಿ ದೇಶದ ಸಾಮಾನ್ಯ ಯುವಕರು, ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಮೀಸಲು ಸೇನಾ ಸಿಬ್ಬಂದಿ ತಮ್ಮ ಕೆಲಸ, ಕುಟುಂಬ ಎಲ್ಲವನ್ನೂ ಬಿಟ್ಟು ತಿಂಗಳುಗಟ್ಟಲೆ ಯುದ್ಧಭೂಮಿಯಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ, ಧಾರ್ಮಿಕ ಅಧ್ಯಯನ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಅಲ್ಟಾ-ಆರ್ಥಡಾಕ್ಸ್ ಸಮುದಾಯದ ಯುವಕರಿಗೆ ಸೇನೆಗೆ ಸೇರುವುದರಿಂದ ವಿನಾಯಿತಿ ನೀಡಲಾಗಿದೆ!
ಇದು ಇಸ್ರೇಲ್ ಸಮಾಜದಲ್ಲಿ ಆಕ್ರೋಶದ ಜ್ವಾಲಾಮುಖಿಯನ್ನೇ ಸ್ಫೋಟಿಸಿದೆ. “ನೆತನ್ಯಾಹು ಅವರ ಯುದ್ಧಗಳಲ್ಲಿ ಸಾಯಲು ನಮ್ಮ ಮಕ್ಕಳು ಬೇಕು, ಆದರೆ ಅವರ ಸರ್ಕಾರಕ್ಕೆ ವೋಟ್ ಹಾಕುವ ಧಾರ್ಮಿಕ ಪಕ್ಷಗಳ ಮಕ್ಕಳಿಗೆ ಮಾತ್ರ ಎಸಿ ರೂಮಿನಲ್ಲಿ ಕುಳಿತು ಧರ್ಮಗ್ರಂಥ ಓದಲು ವಿನಾಯಿತಿಯೇ? ಇದೆಂಥಾ ನ್ಯಾಯ?” ಎಂದು ಸಾಮಾನ್ಯ ಜನ ಮತ್ತು ಸೈನಿಕರ ಕುಟುಂಬಗಳು ಪ್ರಶ್ನಿಸುತ್ತಿವೆ. ಅಕ್ಟೋಬರ್ 14ರಂದು ಪ್ರಕಟವಾದ Israel Democracy Institute (IDI) ಸಮೀಕ್ಷೆಯು ಒಂದು ಸ್ಪಷ್ಟ ಸಂದೇಶ ನೀಡಿದೆ-ಅಲ್ಟಾ-ಆರ್ಥಡಾಕ್ಸ್ ಪುರುಷರಿಗೂ ಸೇನಾ ಸೇವೆಯನ್ನು ಕಡ್ಡಾಯಗೊಳಿಸುವ ಕಾನೂನು ತರಬೇಕು ಎಂಬುದಕ್ಕೆ ಇಸ್ರೇಲ್ನಲ್ಲಿ ಭಾರೀ ಸಾರ್ವಜನಿಕ ಬೆಂಬಲ ವ್ಯಕ್ತವಾಗಿದೆ.
ಈಗ ನೆತನ್ಯಾಹು ಇಬ್ಬಂದಿ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಒಂದು ವೇಳೆ ಶಾಸ್ ಮತ್ತು ಯುನೈಟೆಡ್ ತೋರಾ ಜುದಾಯಿಸಂ ಪಕ್ಷಗಳ ಬೆಂಬಲ ಉಳಿಸಿಕೊಳ್ಳಲು ಸೇನಾ ವಿನಾಯಿತಿ ಮುಂದುವರಿಸಿದರೆ, ಸಾಮಾನ್ಯ ಮತದಾರರು ಮತ್ತು ಮೀಸಲು ಸೈನಿಕರು ಲಿಕುಡ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಒಂದು ವೇಳೆ ಸೇನಾ ಸೇವೆ ಕಡ್ಡಾಯ ಮಾಡಿದರೆ, ಧಾರ್ಮಿಕ ಪಕ್ಷಗಳು ನೆತನ್ಯಾಹು ಸರ್ಕಾರಕ್ಕೆ ನೀಡುವ ಬೆಂಬಲ ವಾಪಸ್ ಪಡೆಯುತ್ತವೆ! ಕುರ್ಚಿಗಾಗಿ ಮಾಡಿದ ಓಲೈಕೆ ರಾಜಕೀಯ ಇವತ್ತು ನೆತನ್ಯಾಹು ಅವರಿಗೆ ಮುಳುವಾಗಿದೆ.
ಟ್ರಂಪ್ ಕಾರ್ಡ್ ವರ್ಕ್ ಆಗುತ್ತಾ?
ದೇಶದೊಳಗೆ ಇಷ್ಟೆಲ್ಲಾ ವಿರೋಧ ಎದುರಿಸುತ್ತಿರುವ ನೆತನ್ಯಾಹು ಅವರಿಗೆ ಈಗ ಉಳಿದಿರುವ ದೊಡ್ಡ ಟ್ರಂಪ್ ಕಾರ್ಡ್ ಅಂದರೆ ಸಾಕ್ಷಾತ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಹೌದು, ಚುನಾವಣೆಗೆ ಸರಿಯಾಗಿ 9 ದಿನಗಳಿರುವಾಗ, ಅಂದರೆ ಅಕ್ಟೋಬರ್ 18ರಂದು ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ನೆತನ್ಯಾಹು ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ನೆತನ್ಯಾಹು ಅವರ ನಾಯಕತ್ವವನ್ನು ಹಾಡಿ ಹೊಗಳಿರುವ ಟ್ರಂಪ್, ಇಸ್ರೇಲ್ ಜನತೆ ಅವರನ್ನು ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.
ಅಮೆರಿಕದಿಂದ ಶಸ್ತ್ರಾಸ್ತ್ರ ಆರ್ಥಿಕ ನೆರವು ಮತ್ತು ರಾಜತಾಂತ್ರಿಕ ರಕ್ಷಣೆ ಪಡೆಯುವ ಇಸ್ರೇಲ್ನಲ್ಲಿ ಅಮೆರಿಕದ ಅಧ್ಯಕ್ಷರ ಮಾತಿಗೆ ತೂಕ ಇರುತ್ತದೆ ನಿಜ. ನೆತನ್ಯಾಹು ಕೂಡ ಇದನ್ನು ತಮ್ಮ ನಾಯಕತ್ವಕ್ಕೆ ಸಿಕ್ಕಿರುವ ಅಂತರರಾಷ್ಟ್ರೀಯ ಸರ್ಟಿಫಿಕೇಟ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಶ್ನೆ ಏನಪ್ಪಾ ಅಂದ್ರೆ-ಟ್ರಂಪ್ ಹೇಳಿದರು ಅಂತ ಇಸ್ರೇಲ್ ಜನ ಕಣ್ಣು ಮುಚ್ಚಿಕೊಂಡು ನೆತನ್ಯಾಹುಗೆ ವೋಟ್ ಹಾಕುತ್ತಾರಾ? ಖಂಡಿತ ಇಲ್ಲ! ಅದಕ್ಕೆ ಪ್ರಮುಖವಾಗಿ 3 ಕಾರಣಗಳಿವೆ:
- ಇಸ್ರೇಲಿ ಮತದಾರರ ಆದ್ಯತೆಗಳು : ವಾಷಿಂಗ್ಟನ್ನಲ್ಲಿ ಕುಳಿತಿರುವ ಟ್ರಂಪ್ ಹೇಳಿಕೆಗಿಂತ, ತಮ್ಮ ದೇಶದೊಳಗಿನ ಭದ್ರತಾ ವೈಫಲ್ಯ, ಮುಗಿಯದ ಯುದ್ಧದ ನೋವು, ಗಗನಕ್ಕೇರಿರುವ ಜೀವನ ವೆಚ್ಚ ಮತ್ತು ಸರ್ಕಾರದ ಭ್ರಷ್ಟಾಚಾರವೇ ಮತದಾರರಿಗೆ ಮುಖ್ಯವಾಗಿದೆ.
- ಇರಾನ್ ಯುದ್ಧದ ವಿಚಾರದಲ್ಲಿನ ಭಿನ್ನಾಭಿಪ್ರಾಯ : ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ-ಇಸ್ರೇಲ್ ಸಂಬಂಧ ಹೇಗಿರಬೇಕು ಮತ್ತು ಆ ಯುದ್ದದಿಂದ ಇಸ್ರೇಲ್ ಅನುಭವಿಸುತ್ತಿರುವ ನಷ್ಟವೇನು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳಿವೆ.
- ಬೆಂಬಲ ಘೋಷಣೆಯಾದ ಸಮಯ : ಮತದಾನಕ್ಕೆ ಕೇವಲ 9 ದಿನ ಇರುವಾಗ ಬಂದಿರುವ ಈ ಬೆಂಬಲವು ಈಗಾಗಲೇ ತಮ್ಮ ನಿರ್ಧಾರ ಮಾಡಿಕೊಂಡಿರುವ ಮತದಾರರ ಮನಸ್ಸನ್ನು ಬದಲಾಯಿಸುವುದು ಅನುಮಾನ.
Reuters ವರದಿಯಲ್ಲಿ ರಾಜಕೀಯ ವಿಶ್ಲೇಷಕರು ಹೇಳಿರುವಂತೆ, ಟ್ರಂಪ್ ಅವರ ಈ ಮಾತು ನೆತನ್ಯಾಹು ಅವರಿಂದ ದೂರ ಸರಿದಿದ್ದ ಕೆಲವು ಸಾಂಪ್ರದಾಯಿಕ ಬಲಪಂಥೀಯ ಮತದಾರರನ್ನು ಮತ್ತೆ ಒಗ್ಗೂಡಿಸಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಹುದೇ ಹೊರತು, ಇಡೀ ಚುನಾವಣೆಯ ದಿಕ್ಕನ್ನೇ ಬದಲಾಯಿಸುವ ಮ್ಯಾಜಿಕ್ ಮಾದ ಜಿಕ್ ಮಾಡುವುದಿಲ್ಲ!
70% ಸಾಲದ ಸುಳಿಯಲ್ಲಿ ಇಸ್ರೇಲ್!
ಯುದ್ಧ ಅಂದರೆ ಬರೀ ಗಡಿಯಲ್ಲಿ ಸಿಡಿಯುವ ಬಾಂಬ್ ಮಾತ್ರವಲ್ಲ ಗೆಳೆಯರೇ, ಅದು ದೇಶದೊಳಗಿನ ಜನಸಾಮಾನ್ಯರ ಜೇಬಿಗೆ ಬೀಳುವ ಕತ್ತರಿ ಕೂಡ ಹೌದು! ನೆತನ್ಯಾಹು ಅವರ ಯುದ್ಧದಾಹ ಇಸ್ರೇಲ್ ಆರ್ಥಿಕತೆಯನ್ನು ಎಂತಹ ಪಾತಾಳಕ್ಕೆ ತಳ್ಳಿದೆ ಎನ್ನುವುದನ್ನು ಅಕ್ಟೋಬರ್ 20ರ Reuters Breakingviews ವಿಶ್ಲೇಷಣೆ ಅಂಕಿಅಂಶಗಳ ಸಮೇತ ಬಿಚ್ಚಿಟ್ಟಿದೆ. ಮೇಲ್ನೋಟಕ್ಕೆ ನೋಡಿದರೆ, ಯುದ್ಧಗಳ ನಡುವೆಯೂ 2025ರಲ್ಲಿ ಇಸ್ರೇಲ್ ಆರ್ಥಿಕತೆ ಸ್ವಲ್ಪ ಬೆಳವಣಿಗೆ ದಾಖಲಿಸಿತ್ತು ಅಂತ ನೆತನ್ಯಾಹು ಬೆಂಬಲಿಗರು ಬಡಾಯಿ ಕೊಚ್ಚಿಕೊಳ್ಳಬಹುದು. ಆದರೆ ಅದರ ಒಳಗಿರುವ ಭಯಾನಕ ಸತ್ಯ ಏನು ಗೊತ್ತಾ? ನಿರಂತರ ಯುದ್ದಕ್ಕಾಗಿ ಶಸ್ತ್ರಾಸ್ತ್ರ ಖರೀದಿ ಮತ್ತು ಮಿಲಿಟರಿ ಕಾರ್ಯಾಚರಣೆಗಳಿಗೆ ಹಣ ಸುರಿದ ಪರಿಣಾಮವಾಗಿ, ಇಸ್ರೇಲ್ನ ” ರಾಷ್ಟ್ರೀಯ ಸಾಲವು ದೇಶದ ಒಟ್ಟು ದೇಶೀಯ ಉತ್ಪನ್ನದ (GDP) ಬರೋಬ್ಬರಿ 70%ಕ್ಕೆ ಏರಿಕೆಯಾಗಿದೆ! ಅಷ್ಟೇ ಅಲ್ಲ, ಸರ್ಕಾರದ ವಿತ್ತೀಯ ಕೊರತೆ (Fiscal Deficit) ಸುಮಾರು 5%ರ ಮಟ್ಟಕ್ಕೆ ತಲುಪಿದೆ!
ಇದರ ಅರ್ಥ ತುಂಬಾ ಸಿಂಪಲ್-ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ ಮತ್ತು ಸಾಲದ ಹೊರೆ ಬೆಟ್ಟದಷ್ಟಾಗಿದೆ. ಅಕ್ಟೋಬರ್ 27ರ ನಂತರ ಯಾರೇ ಸರ್ಕಾರ ರಚಿಸಿದರೂ ಅವರ ಮುಂದೆ ಇರುವ ದೊಡ್ಡ ಪ್ರಶ್ನೆ-ಈ ಯುದ್ಧದ ಸಾಲವನ್ನು ತೀರಿಸುವುದು ಹೇಗೆ? ಜನರ ಮೇಲೆ ಇನ್ನಷ್ಟು ತೆರಿಗೆ ಹೇರಬೇಕಾ? ಅಥವಾ ಇನ್ನೂ ಸಾಲ ಮಾಡಬೇಕಾ? ಇಲ್ಲವೇ ಶಿಕ್ಷಣ, ಆರೋಗ್ಯದಂತಹ ಸಾರ್ವಜನಿಕ ವೆಚ್ಚಗಳನ್ನು ಕಡಿತಗೊಳಿಸಬೇಕಾ? ನೆತನ್ಯಾಹು ಅವರ ಯುದ್ಧದ ರಾಜಕೀಯಕ್ಕೆ ಇವತ್ತು ಇಸ್ರೇಲ್ನ ಪ್ರತಿಯೊಬ್ಬ ಪ್ರಜೆಯೂ ತನ್ನ ದುಡಿಮೆಯ ದುಡಿಮೆಯ ಹಣದಿಂದ ಬೆಲೆ ತೆರುತ್ತಿದ್ದಾನೆ!
ಕಿಂಗ್ಮೇಕರ್ ಸ್ಥಾನದಲ್ಲಿ ಅರಬ್ ಪಕ್ಷಗಳು!
ನಾವು ಮೊದಲೇ ನೋಡಿದಂತೆ ನೆತನ್ಯಾಹು ಬಣಕ್ಕೆ 49-54 ಸೀಟು, ವಿರೋಧ ಪಕ್ಷಗಳ ಬಣಕ್ಕೆ 50-52 ಸೀಟು ಬರುವ ಅಂದಾಜಿದೆ. ಹಾಗಾದರೆ ಉಳಿದ 13-14 ಸೀಟುಗಳು ಯಾರ ಬಳಿ ಇವೆ? ಅವು ಇಸ್ರೇಲ್ನ ಅರಬ್ ನಾಗರಿಕರನ್ನು ಪ್ರತಿನಿಧಿಸುವ ಅರಬ್ ಪಕ್ಷಗಳ ಕೈಯಲ್ಲಿವೆ! ಸಂಖ್ಯಾಬಲದ ದೃಷ್ಟಿಯಿಂದ ನೋಡಿದರೆ, ಈ 13-14 ಸ್ಥಾನಗಳು ಯಾರ ಕಡೆ ವಾಲುತ್ತವೆಯೋ ಅವರು ಆರಾಮಾಗಿ 61ರ ಮ್ಯಾಜಿಕ್ ನಂಬರ್ ದಾಟಿ ಸರ್ಕಾರ ರಚಿಸಬಹುದು.
ಪೇಪರ್ ಮೇಲೆ ಕೂಡಿ ಕಳೆಯುವ ಗಣಿತದಷ್ಟು ಸುಲಭವಲ್ಲ ಇಸ್ರೇಲ್ ರಾಜಕೀಯ! ಯಾಕೆಂದರೆ ನೆತನ್ಯಾಹು ಬಣವಂತೂ ಅರಬ್ ಪಕ್ಷಗಳನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಇತ್ತ ಪ್ರಮುಖ ಯಹೂದಿ ವಿರೋಧ ಪಕ್ಷಗಳಲ್ಲಿಯೂ ಕೆಲವು ನಾಯಕರು ಅರಬ್ ಪಕ್ಷಗಳ ಜೊತೆ ಸೇರಿ ಸರ್ಕಾರ ರಚಿಸಲು ಹಿಂಜರಿಯುತ್ತಾರೆ. ಇನ್ನೊಂದು ಕಡೆ, ಸ್ವತಃ ಅರಬ್ ಪಕ್ಷಗಳಿಗೂ ಗಾಜಾ ಮೇಲಿನ ಮಿಲಿಟರಿ ದಾಳಿಯನ್ನು ನಿಲ್ಲಿಸುವುದು, ಪ್ಯಾಲೆಸ್ತೀನಿಯರ ಹಕ್ಕುಗಳನ್ನು ರಕ್ಷಿಸ ರಕ್ಷಿಸುವುದು ಮತ್ತು ಇಸ್ರೇ ಇಸ್ರೇಲ್ನೊಳಗೆ ಅರಬ್ ನಾಗರಿಕರಿಗೆ ಸಮಾನತೆ ತರುವುದು ಮೊದಲ ಆದ್ಯತೆಯಾಗಿದೆ. ಗಾಜಾವನ್ನು ಧ್ವಂಸ ಮಾಡಿದ ನಾಯಕರ ಜೊತೆ ಅವರು ಹೇಗೆ ತಾನೇ ಕೈಜೋಡಿಸಲು ಸಾಧ್ಯ? ಹೀಗಾಗಿ ಅರಬ್ ಪಕ್ಷಗಳು ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಡುತ್ತವೆಯೇ ಅಥವಾ ವಿರೋಧ ಪಕ್ಷಗಳ ಜೊತೆ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಒಪ್ಪಂದ ಮಾಡಿಕೊಳ್ಳುತ್ತವೆಯೇ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ!
ಅಕ್ಟೋಬರ್ 21ರ ವೇಳೆಗೆ ನಮ್ಮ ಮುಂದಿರುವ ಸಮೀಕ್ಷೆಗಳು ಹೇಳುತ್ತಿರುವುದು ಒಂದೇ ಮಾತು-ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಭವಿಷ್ಯ ಕೇವಲ ಮತಪೆಟ್ಟಿಗೆಯಲ್ಲಿ ಇಲ್ಲ, ಬದಲಾಗಿ ಚುನಾವಣೆಯ ನಂತರ ನಡೆಯುವ ಮೈತ್ರಿ ರಾಜಕೀಯದಲ್ಲಿದೆ. ಲಿದೆ. ಡೊನಾಲ್ಡ್ ಟ್ರಂಪ್ ಅವರ ಅವರ ಬೆಂಬಲ ಇರಬಹುದು ಅಥವಾ ಯುದ್ಧದ ಅಬ್ಬರ ಇರಬಹುದು, ಅವು ಯಾವುವೂ ಗಾಜಾದಲ್ಲಿ ಹರಿದ ಅಮಾಯಕರ ರಕ್ತವನ್ನಾಗಲೀ, ಇಸ್ರೇಲ್ ಎದುರಿಸುತ್ತಿರುವ ಆರ್ಥಿಕ ಮತ್ತು ನೈತಿಕ ಕುಸಿತವನ್ನಾಗಲೀ ಮರೆಮಾಚಲು ಸಾಧ್ಯವಿಲ್ಲ. ಅಕ್ಟೋಬರ್ 27ರ ಚುನಾವಣೆಯ ಫಲಿತಾಂಶ ಕೇವಲ ಇಸ್ರೇಲ್ಗೆ ಮಾತ್ರವಲ್ಲ, ಇಡೀ ಮಧ್ಯಪ್ರಾಚ್ಯದ ಶಾಂತಿ, ಪ್ಯಾಲೆಸ್ತೀನ್ ಜನರ ಬದುಕು ಮತ್ತು ಜಾಗತಿಕ ರಾಜಕೀಯದ ದಿಕ್ಕನ್ನು ನಿರ್ಧರಿಸಲಿದೆ. ಯುದ್ಧದಾಹ ಸೋತು ಶಾಂತಿ ಮತ್ತು ಮಾನವೀಯತೆ ಗೆಲ್ಲುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
