ಜಮ್ಮು ಕಾಶ್ಮೀರದ ಚುನಾವಣೆ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡುತ್ತಿದ್ದ ವೇಳೆಯಲ್ಲೇ ದಿಢೀರನೆ ಅಸ್ವಸ್ಥರಾಗಿ ಅರ್ಧಕ್ಕೆ ಭಾಷಣ ಬಿಟ್ಟು ವೇದಿಕೆಯಿಂದ ತೆರಳಿದ್ದಾರೆ.
ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆಯುತ್ತಿರುವ ಚುನಾವಣಾ ಭಾಷಣದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಅವರ ಧ್ವನಿಯು ತೀವ್ರವಾಗಿ ಕಟ್ಟಿಕೊಂಡಿದ್ದಲ್ಲದೇ, ಅವರಿಗೆ ಮಾತನಾಡಲೂ ಆಗದಷ್ಟು ಆಯಾಸ ಅನುಭವಿಸಿದ್ದಾರೆ.
ಕೂಡಲೇ ವೇದಿಕೆ ಮೇಲಿದ್ದ ಕೆಲ ಕಾಂಗ್ರೆಸ್ ನಾಯಕರು ಹಾಗೂ ಖರ್ಗೆ ಅವರ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಬಂದು, ಕುಡಿಯಲು ನೀರು ಕೊಟ್ಟಿದ ಪ್ರಸಂಗ ನಡೆದಿದೆ. ಬಳಿಕ ಕುಳಿತುಕೊಂಡು ಖರ್ಗೆ ಅವರು ಭಾಷಣ ಮಾಡಲು ಮುಂದಾದಾಗಲೂ ಅವರು ತೀವ್ರ ಆಯಾಸ ಅನುಭವಿಸಿದ್ದಾರೆ. ಸದ್ಯ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.