ದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಜನರು ಮೃತರಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಘಟನೆಯಿಂದ ಕುಟುಂಬಗಳು ಮತ್ತು ಜನರು ಚೇತರಿಸಿಕೊಳ್ಳುವ ಮೊದಲೇ ಏರ್ ಇಂಡಿಯಾ ಗ್ರೌಂಡ್ ಸರ್ವೀಸ್ ಸಿಬ್ಬಂದಿ ಕಚೇರಿಯಲ್ಲಿ ಪಾರ್ಟಿ ನಡೆಸಿದ್ದಾರೆ.
ಈ ಕಾರಣಕ್ಕಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ ಕಂಪನಿಯು ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾಗೊಳಿಸಿದೆ.
ಸಿಂಗಾಪುರ ಮೂಲದ ಎಸ್‌ಎಟಿಎಸ್ ಲಿಮಿಟೆಡ್, ಏರ್ ಇಂಡಿಯಾ ಜೊತೆ ಪಾಲುದಾರಿಕೆಯಲ್ಲಿ ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳಲ್ಲಿ ಆಹಾರ ಮತ್ತು ಸಾಮಾನು ನಿರ್ವಹಣೆಯಂತಹ ನೆಲದ ಸೇವೆಗಳನ್ನು ಒದಗಿಸುತ್ತದೆ.
ಗುಜರಾತ್‌ನಲ್ಲಿ ವಿಮಾನ ಅಪಘಾತದ ಕೆಲವೇ ದಿನಗಳ ನಂತರ, ಗುರುಗ್ರಾಮದಲ್ಲಿರುವ ಎಐಎಎಸ್‌ಎಟಿಎಸ್ ಕಚೇರಿಯ ಸಿಬ್ಬಂದಿ ಪಾರ್ಟಿ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಉದ್ಯೋಗಿಗಳು ಸಿಬ್ಬಂದಿಯೊಂದಿಗೆ ಡಿಜೆಗೆ ನೃತ್ಯ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
https://x.com/mid_day/status/1937143826726203444