Home ಬೆಂಗಳೂರು ಅಜಿತ್ ಪವಾರ್‌ ವಿಮಾನ ದುರಂತ ಆಕಸ್ಮಿಕವಲ್ಲ – ಬೆಂಗಳೂರಿನಲ್ಲಿ ಬಿತ್ತು ಎಫ್‌ಐಆರ್

ಅಜಿತ್ ಪವಾರ್‌ ವಿಮಾನ ದುರಂತ ಆಕಸ್ಮಿಕವಲ್ಲ – ಬೆಂಗಳೂರಿನಲ್ಲಿ ಬಿತ್ತು ಎಫ್‌ಐಆರ್

ಬೆಂಗಳೂರು : ಅಜಿತ್ ಪವಾರ್ (Ajit pawar) ಸಾವಿಗೆ ಕಾರಣವಾದ ವಿಮಾನ ಅಪಘಾತ (Plane Crash) ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಜನವರಿ 28ರಂದು ಬಾರಮತಿ ವಿಮಾನ ನಿಲ್ದಾಣದ ಬಳಿ ನಡೆದ ದುರಂತದ ಬಗ್ಗೆ ರೋಹಿತ್ ಪವಾರ್ ಅವರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ (High Grounds police station) ದೂರು ನೀಡಿದ್ದಾರೆ. ಇದು ಸಾಮಾನ್ಯ ಅಪಘಾತವಲ್ಲ, ಇದರ ಹಿಂದೆ ಸಂಚು ಇರಬಹುದು ಎಂದು ಅವರು ಆರೋಪಿಸಿದ್ದಾರೆ.

ದೂರಿನಲ್ಲಿ ಹೇಳಿರುವಂತೆ, ಅಪಘಾತಕ್ಕೀಡಾದ ವಿಮಾನ ಅಮೆರಿಕದಲ್ಲಿ ಈಗಾಗಲೇ ಸೇವೆಯಿಂದ ನಿವೃತ್ತಿಗೊಂಡಿತ್ತು. ತಾಂತ್ರಿಕವಾಗಿ ಹಾರಾಟಕ್ಕೆ ಯೋಗ್ಯವಲ್ಲದಿದ್ದರೂ ಅದನ್ನು ಭಾರತಕ್ಕೆ ತಂದು ಬಳಸಲಾಗಿದೆ ಎನ್ನಲಾಗಿದೆ. ವಿಮಾನವು ಸುರಕ್ಷಿತವಾಗಿ 5,000 ಗಂಟೆಗಳವರೆಗೆ ಮಾತ್ರ ಹಾರಾಟ ನಡೆಸಬಹುದಾಗಿದ್ದರೂ, ಸುಮಾರು 8,000 ಗಂಟೆಗಳವರೆಗೆ ಬಳಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಮಾನ ಹಾರಿಸಿದ್ದ ಪೈಲಟ್ ಸುಮಿತ್ ಕಪೂರ್ ವಿರುದ್ಧವೂ ಪ್ರಶ್ನೆಗಳು ಕೇಳಿಬಂದಿವೆ. ಈ ಹಿಂದೆ ಎರಡು ಬಾರಿ ಮದ್ಯಪಾನ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದ ವ್ಯಕ್ತಿಯನ್ನು ಇಂತಹ ಪ್ರಮುಖ ಪ್ರಯಾಣಕ್ಕೆ ನೇಮಿಸಿದ್ದು ಯಾಕೆ ಎಂಬ ಅನುಮಾನ ವ್ಯಕ್ತವಾಗಿದೆ. ಮೊದಲಿಗೆ ನಿಗದಿಯಾಗಿದ್ದ ಪೈಲಟ್‌ರನ್ನು ಬದಲಿಸಿ ಕೊನೆಯ ಕ್ಷಣದಲ್ಲಿ ಹೊಸ ತಂಡವನ್ನು ನಿಯೋಜಿಸಲಾಗಿದೆ ಎಂಬುದೂ ದೂರಿನಲ್ಲಿ ಹೇಳಲಾಗಿದೆ.

ಅಜಿತ್ ಪವಾರ್ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬೇಕಾಗಿದ್ದರೂ, ಕೊನೆಯ ಕ್ಷಣದಲ್ಲಿ ವಿಮಾನದಲ್ಲಿ ತೆರಳುವ ನಿರ್ಧಾರ ಹೇಗೆ ಕೈಗೊಳ್ಳಲಾಯಿತು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇದರ ಹಿಂದೆ ಯಾರಾದರೂ ಒತ್ತಡ ಹಾಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ದೂರುದಲ್ಲಿ ಕೇಳಲಾಗಿದೆ.

ಅಪಘಾತಕ್ಕೂ ಮುನ್ನ ಕೋ-ಪೈಲಟ್ ಆತಂಕ ವ್ಯಕ್ತಪಡಿಸಿದ್ದರೆ, ಮುಖ್ಯ ಪೈಲಟ್ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಕೂಡ ಹೊರಬಂದಿದೆ. ಇದರಿಂದ ಪೈಲಟ್‌ನ ನಡೆ ಕುರಿತು ಮತ್ತಷ್ಟು ಅನುಮಾನಗಳು ಮೂಡಿವೆ.

ಅಪಘಾತ ಸಂಭವಿಸಿದ ವೇಳೆ ಬಾರಮತಿ ಪ್ರದೇಶದಲ್ಲಿ ದಟ್ಟ ಮಂಜು ಇತ್ತು. ದೃಶ್ಯಮಾನತೆ ಕಡಿಮೆ ಇದ್ದರೂ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದು ಏಕೆ ಎಂಬ ಪ್ರಶ್ನೆಯೂ ಎದ್ದಿದೆ. ಟೇಬಲ್‌ಟಾಪ್ ರನ್‌ವೇ ಇರುವ ಪರಿಸ್ಥಿತಿಯಲ್ಲಿಯೂ ವಿಮಾನ ಇಳಿಸಲು ಅವಕಾಶ ನೀಡಿರುವುದು ತನಿಖೆಗೆ ಕಾರಣವಾಗಿದೆ.

Directorate General of Civil Aviation ಪ್ರಾಥಮಿಕ ಮಾಹಿತಿಯ ಪ್ರಕಾರ ವಿಮಾನ ಸಂಪೂರ್ಣ ಸುರಕ್ಷಿತ ಸ್ಥಿತಿಯಲ್ಲಿ ಇರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ಸ್ವೀಕರಿಸಿ ಪ್ರಾಥಮಿಕ ಪರಿಶೀಲನೆ ಆರಂಭಿಸಿದ್ದಾರೆ.

You cannot copy content of this page

Exit mobile version