ಪಾಕಿಸ್ತಾನ ಮತ್ತು POK ನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿಯ ನಂತರ ಮುಂದಿನ ಕ್ರಮಗಳ ಬಗ್ಗೆ ವಿವರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಸೇನೆಯ ಅಧಿಕಾರಿಗಳು ಮತ್ತು ವಿಪಕ್ಷ ನಾಯಕರನ್ನು ಒಳಗೊಂಡಂತೆ ಇಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆಯಲಿರುವ ಸಭೆಗೆ ಸಂಸದೀಯ ನಾಯಕರನ್ನು ಆಹ್ವಾನಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, “ಸರ್ಕಾರವು 2025 ರ ಮೇ 8 ರಂದು ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಸಂಸತ್ ಗ್ರಂಥಾಲಯ ಕಟ್ಟಡದ ಸಮಿತಿ ಕೊಠಡಿ ಜಿ -074 ರಲ್ಲಿ ಸರ್ವಪಕ್ಷ ನಾಯಕರ ಸಭೆಯನ್ನು ಕರೆದಿದೆ” ಎಂದು ಹೇಳಿದರು.
ಸರ್ಕಾರದ ಕಡೆಯಿಂದ ಯಾರೆಲ್ಲಾ ಹಾಜರಾಗುತ್ತಾರೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (ರಾಜ್ಯಸಭೆ) ಮತ್ತು ರಾಹುಲ್ ಗಾಂಧಿ (ಲೋಕಸಭೆ) ಸಭೆಯಲ್ಲಿ ಭಾಗವಹಿಸಲಿದ್ದಾರೆ. ತೃಣಮೂಲ ಕಾಂಗ್ರೆಸ್ನ ಸುದೀಪ್ ಬಂಡೋಪಾಧ್ಯಾಯ ಮತ್ತು ಸಿಪಿಐ (ಎಂ) ನ ಜಾನ್ ಬ್ರಿಟ್ಟಾಸ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ