ನಿಷೇಧಿತ ಐಎಸ್‌ ನಂಟು ಆರೋಪ: ಶಂಕಿತ ವ್ಯಕ್ತಿ ಪೊಲೀಸರ ವಶಕ್ಕೆ

ಗಂಗಾವತಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್‌ ನಂಟು ಹೊಂದಿದ ಆರೋಪದಲ್ಲಿ ಶಬ್ಬೀರ್‌ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಬ್ಬೀರ್‌, ಕೊಪ್ಪಳ ಜಿಲ್ಲೆ ಗಂಗಾವತಿಯ ಮೈಬೂಬ್‌ ನಗರವಾಸಿಯಾಗಿದ್ದು, ಬಾಳೆ ಹಣ್ಣು ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಪೊಲೀಸ್‌ ಮಾಹಿತಿ ಪ್ರಕಾರ ತುಂಗಭದ್ರ ನದಿ ದಡದಲ್ಲಿ ಬಾಂಬ್‌ ಸ್ಪೋಟ ಪ್ರಯೋಗ ನಡೆಸಿದ್ದ ಯುವಕರ ಮೊಬೈಲ್‌ನಲ್ಲಿ ಶಬ್ಬೀರ್‌ ಜೊತೆ ಮಾತನಾಡಿದ ಕರೆ ದಾಖಲೆಗಳು ಪತ್ತಿಯಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಹಿನ್ನಲೆ ಶಬ್ಬೀರ್‌ನನ್ನು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು