Saturday, February 21, 2026

ಸತ್ಯ | ನ್ಯಾಯ |ಧರ್ಮ

ಎಫ್ಸ್ಟಿನ್ ಫೈಲ್ಸ್ ವಿವಾದ: ಸಾರ್ವಜನಿಕ ಹುದ್ದೆ ದುರುಪಯೋಗ ಆರೋಪ: ಪ್ರಿನ್ಸ್ ಆಂಡ್ರೂ ಬಂಧನ

ಬ್ರಿಟಿಷ್ ರಾಜಕುಟುಂಬದ ಸದಸ್ಯರಾದ ಪ್ರಿನ್ಸ್ ಆಂಡ್ರ್ಯೂ ಅವರನ್ನು ಸಾರ್ವಜನಿಕ ಹುದ್ದೆಯ ದುರುಪಯೋಗದ ಆರೋಪದ ಸಂಬಂಧವಾಗಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಅವರ 66ನೇ ಹುಟ್ಟುಹಬ್ಬದ ದಿನವೇ ಈ ಕ್ರಮ ಜರುಗಿರುವುದು ಗಮನಾರ್ಹವಾಗಿದೆ.

ಥೇಮ್ಸ್ ವ್ಯಾಲಿ ಪೊಲೀಸ್ ಅಧಿಕಾರಿಗಳು ದೀರ್ಘಕಾಲದ ತನಿಖೆಯ ನಂತರ ಈ ಬಂಧನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ Jeffrey Epstein ಅವರೊಂದಿಗೆ ಹೊಂದಿದ್ದ ಸಂಪರ್ಕದ ಹಿನ್ನೆಲೆಗಳಲ್ಲಿ ಆಂಡ್ರೂ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು.

2010ರಲ್ಲಿ ಯುಕೆಯ ವ್ಯಾಪಾರ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಎಪ್ಸ್ಟಿನ್ ಜೊತೆ ಗೌಪ್ಯ ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡಿರುವ ಸಾಧ್ಯತೆಯ ಕುರಿತು ‘ಎಪ್ಸ್ಟಿನ್ ಫೈಲ್’ಗಳಲ್ಲಿ ಹೊಸ ಮಾಹಿತಿಗಳು ಬಹಿರಂಗವಾದ ಬಳಿಕ ತನಿಖೆ ವೇಗ ಪಡೆದಿತ್ತು ಎಂದು ಮೂಲಗಳು ತಿಳಿಸಿವೆ.

ನಾರ್ಫೋಕ್ನ Sandringh ಎಸ್ಟೇಟ್ ವ್ಯಾಪ್ತಿಯ ವುಡ್ ಫಾರ್ಮ್ ನಿವಾಸದಲ್ಲಿ ಆಂಡ್ರೂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಂಧನದ ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಎಪ್ಸ್ಟಿನ್ ಸಂಬಂಧಿತ ದಾಖಲೆಗಳಲ್ಲಿ ಆಂಡ್ರೂ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳೂ ಉಲ್ಲೇಖವಾಗಿದ್ದರೂ, ಪ್ರಸ್ತುತವಾಗಿ ಸಾರ್ವಜನಿಕ ಹುದ್ದೆಯ ದುರುಪಯೋಗದ ಪ್ರಕರಣದ ಮೇರೆಗೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಸೂಚಿಸುತ್ತವೆ.

ಈ ಬೆಳವಣಿಗೆ ಬ್ರಿಟನ್ ರಾಜಕೀಯ ಹಾಗೂ ರಾಜಕುಟುಂಬ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣದ ದಿಕ್ಕು ಏನಾಗಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page