ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಈ ದೇವಾಲಯಕ್ಕೆ ಹಾದು ಹೋಗುವ ಪ್ರಸನ್ನ ಗಣಪತಿ ರಸ್ತೆ ಉದ್ದಲಕ್ಕೂ ಸಣ್ಣಪುಟ್ಟ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಜಿಲ್ಲಾಡಳಿತ ಕಛೇರಿ ಮುಂದೆ ಜಮಾಯಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
ನಂತರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದೇವಸ್ಥಾನದ ಎಂದರೇ ನಮ್ಮ ತಾತಾ, ಮುತ್ತಾತ, ನಮ್ಮ ಅಜ್ಜನ ಕಾಲದಿಂದಲೂ ನಡೆಯುತ್ತ ಬಂದಿದೆ. ಸರಕಾರವು ಇದನ್ನು ನಮ್ಮ ಹಕ್ಕು ಎಂದು ತಿಳಿದುಕೊಂಡು ಬಂದಿದ್ದಾರೆ. ಸರಕಾರದ ಹಕ್ಕು ಆಗಿರಬಹುದು ಅದನ್ನು ಮಾಡಲಿ. ವ್ಯಾಪಾರಗಾರರು, ರೈತರ ಮಕ್ಕಳು ಬಂಡಿ ಹೊಡೆದುಕೊಂಡು ಜಾತ್ರೆಗೆ ಬರುತ್ತಿದ್ದ ಸಮಯದಲ್ಲಿ ಗಾಡಿಗಳನ್ನು ರಸ್ತೆ ಬಳಿ ನಿಲ್ಲಿಸಿ ದೇವಾಲಯಕ್ಕೆ ಬರುತ್ತಿದ್ದೇವು. ಹಿಂದೆ ನಾವು ಈ ದೇವಾಲಯಕ್ಕೆ ಟಿನ್ ಗಟ್ಟಲೆ ದೀಪದ ಎಣ್ಣೆ ಕೊಟ್ಟಿದ್ದೇವೆ. ಈಗ ಇದನ್ನು ವ್ಯಾಪಾರ ಒಂದು ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು. ಈ ಜಾತ್ರೆ ವೇಳೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಇವರಿಗೆ ಇಲ್ಲಿ ಜಾಗ ಮಾಡಿಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಇದೆ ವೇಳೆ ಸಣ್ಣಪುಟ್ಟ ವ್ಯಾಪಾರಸ್ತರಾದ ಶ್ರೀನಿವಾಸ್, ನಂದೀಶ್ ಹಾವೇರಿ, ಕೇಶವಮೂರ್ತಿ, ನವೀನ್, ದೀರಾಜ್ ಕುಮಾರ್, ಬಸವರಾಜು ಇತರರು ಉಪಸ್ಥಿತರಿದ್ದರು.